ಚಿತ್ರಗಳಲ್ಲಿ: ದೇಶದೆಲ್ಲೆಡೆ ಹೋಳಿ ಬಣ್ಣದೋಕುಳಿ
ನವದೆಹಲಿ,
ಮಾ. 2: ಕೋಲ್ಕತ್ತಾ ಸೇರಿ ದೇಶಾದ್ಯಂತ ಹೋಳಿ ಸಂಭ್ರಮದಲ್ಲಿ ಮಿಂದೆದ್ದ ಜನತೆ. ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗೆ ಯಾವ ರೀತಿ ಹುಡಿಗಿಯರೇ ಸಿದ್ಧರಾಗಬೇಕು? ಎಂಬುದನ್ನು ತೋರಿಸಿಕೊಟ್ಟ ಬಾಕ್ಸ್ ರ್ ಮೇರಿ ಕೋಮ್... id="toptextpromo"> id='are-slot-1' class='oiad oi-axt oiadv'>ಬಜೆಟ್
ನಂತರದ ಚರ್ಚೆಗೆ ತೆರಳುವ ಮುನ್ನ ಮಾಧ್ಯಮಗಳೆದುರು ಕಾಣಿಸಿಕೊಂಡ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಬಿಸಿಸಿಐ ಅಧ್ಯಕ್ಷರ ಚುನಾವಣೆ ಮತ ಚಲಾಯಿಸಲು ಆಗಮಿಸಿದ್ದ ಐಸಿಸಿ ಚೆರ್ ಮನ್ ಎನ್. ಶ್ರೀನಿವಾಸನ್.... ಮತ್ತಷ್ಟು ಸುದ್ದಿಗಳು ಚಿತ್ರಗಳಲ್ಲಿ(ಪಿಟಿಐ ಚಿತ್ರಗಳು) id='are-slot-2' class='oiad oi-axt oiadv'>
ಹೋಳಿಗೆ ಬಂದ ಗೇಲ್
ವೆಸ್ಟ್ ಇಂಡೀಸ್ ನ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಮತ್ತು ಶ್ರೀಲಂಕಾದ ವೇಗಿ ಮಲಿಂಗಾ ಕೇಶ ವಿನ್ಯಾಸದ ಮುಖವಾಡಗಳನ್ನು ನಾಗಪುರದಲ್ಲಿ ವ್ಯಾಪಾರಿಗಳು ಪ್ರದರ್ಶಿಸಿದರು.

ಹೋಳಿ ಸಂಭ್ರಮ
ಕೋಲ್ಕತ್ತಾದಲ್ಲಿ ಪರಸ್ಪರ ಬಣ್ಣ ಹಚ್ಚಿ ಹೋಳಿ ಆಡಿ ಸಂಭ್ರಮಿಸಿದ ರವೀಂದ್ರ ಭಾರತೀ ಕಾಲೇಜಿನ ವಿದ್ಯಾರ್ಥಿಗಳು.

ವಾರಣಾಸಿ
ವಾರಣಾಸಿಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಸಂಗೀತ ವಾದ್ಯಗಳೊಂದಿಗೆ ಸಂಭ್ರಮಿಸಿದ ಯುವಕರು.

ಕೋಲು ಕೋಲೆನ್ನಲೇ
ಮಥುರಾದಲ್ಲಿ ಹೋಳಿ ಪ್ರಯುಕ್ತ ಕೋಲಾಟ ಆಡಿ ಸಂಭ್ರಮಿಸಿದ ಮಹಿಳೆಯರು.

ಬಣ್ಣ... ಬಣ್ಣ
ಮಥುರಾದಲ್ಲಿ ಹೋಳಿ ಸಡಗರದಲ್ಲಿ ಮಿಂದೆದ್ದ ಯುವಕರು.

ಮೇರಿ ಕೋಮ್
ಲೈಂಗಿಕ ದೌರ್ಜನ್ಯ ನಡೆಸುವ ಪುಢಾರಿಗಳ ವಿರುದ್ಧ ಹೇಗೆ ಹೋರಾಡಬೇಕು? ಎಂಬುದನ್ನು ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟ ಬಾಕ್ಸರ್ ಮೇರಿ ಕೋಮ್.

ಮತ ಹಾಕಿದ ಶ್ರೀನಿವಾಸನ್
ಬಿಸಿಸಿಐ ಅಧ್ಯಕ್ಷೀಯ ಚುನಾವಣೆಗೆ ಚೆನ್ನೈನಲ್ಲಿ ಮತ ಚಲಾಯಿಸಿ ಹೊರಬಂದ ಐಸಿಸಿ ಚೆರ್ ಮನ್ ಎನ್. ಶ್ರೀನಿವಾಸನ್.

ಗೆಲುವು ನನ್ನದೆ
ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆಯಾದ ಅನುರಾಗ್ ಥಕೂರ್ ಗೆಲುವಿನ ಚಿಹ್ನೆ ತೋರಿಸಿ ಸಂಭ್ರಮಿಸಿದರು.

ಚಿದಂಬರ ದರ್ಶನ
ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಬಜೆಟ್ ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಳ್ಳುವ ಮುನ್ನ ಸಂಸತ್ ಭವನದ ಮುಂದೆ ಕಾಣಿಸಿಕೊಂಡರು.

ಹಿಮಪಾತ
ಶ್ರೀನಗರದಲ್ಲಿ ಹಿಮಪಾತವಾಗುತ್ತಿದ್ದು ಕಾರಿನ ಮೇಲೆ ನಿಂತಿದ್ದ ಮಂಜನ್ನು ಸರಿಸುತ್ತಿರುವ ನಾಗರಿಕ.

ಪರಿಸರ ಜಾಗೃತಿ
ಮುಂಬೈನಲ್ಲಿ ಹಸಿರು ಎಲೆಗಳನ್ನು ಬಳಸಿ ಪರಿಸರ ಜಾಗೃತಿ ಮೂಡಿಸಲು ಮುಂದಾದ ಶಾಲಾ ಮಕ್ಕಳು.

ಮಗನಿಗೆ ಆಶೀರ್ವಾದ
ಡಿಎಂಕೆ ಖಚಾಂಚಿ ಎಂಕೆ ಸ್ಟಾಲಿನ್ ಸೋಮವಾರ ತಮ್ಮ 63ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಡಿಎಂಕೆ ನಾಯಕ ಕರುಣಾನಿಧಿ ಸ್ಟಾಲಿನ್ ಅವರಿಗೆ ಆಶೀರ್ವದಿಸಿದ ಪರಿ.

ಜನ ಸಾಗರ
ಮಂಗಳೂರಿನಲ್ಲಿ ನಡೆದ ವಿರಾಟ್ ಹಿಂದು ಸಮಾಜೋತ್ಸವದಲ್ಲಿ ಪಾಲ್ಗೊಂಡಿದ್ದ ಅಸಂಖ್ಯ ಜನರು.












Click it and Unblock the Notifications