ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದೆಲ್ಲೆಡೆ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಸಾಧನೆ ಮೆಲುಕು

|
Google Oneindia Kannada News

ನವದೆಹಲಿ, ಏಪ್ರಿಲ್, 14: ದೇಶದೆಲ್ಲೆಡೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಗಣ್ಯರು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಕೆ ಮಾಡಿದರು. ವಿಶ್ವ ಸಂಸ್ಥೆ ಸಹ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಕೆ ಮಾಡಿತು.

ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಕೆ ಮಾಡಿ ಮಾತನಾಡಿದ ಪ್ರಧಾನಿ, ಜೀವನವನ್ನು ಹೋರಾಟದಲ್ಲಿಯೇ ಕಳೆದ ಅಂಬೇಡ್ಕರ್ ಅವರ ಆದರ್ಶಗಳು ಮಾತ್ರ ಎಂದಿಗೂ ಬದಲಾಗಲಿಲ್ಲ ಎಂದು ಹೇಳಿದರು.[ಆನ್ ಲೈನ್ ಕೃಷಿ ಮಾರುಕಟ್ಟೆ ಎಲ್ಲೆಲ್ಲಿ ಆರಂಭ]

ಭಾರತ ಪ್ರವಾಸದಲ್ಲಿರುವ ಬ್ರಿಟನ್ ರಾಜದಂಪತಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್ ಅಸ್ಸಾಂ ನ ತೇಜ್ ಪುರಕ್ಕೆ ಭೇಟಿ ನೀಡಿದ್ದರು. ನಂತರ ಅಭಯಾರಣ್ಯದಲ್ಲಿ ಸಫಾರಿ ಮಾಡಿ ಸಂಭ್ರಮಿಸಿದ್ದು ವಿಶೇಷ. ಇನ್ನಷ್ಟು ಸುದ್ದಿಗಳನ್ನು ಚಿತ್ರಗಳಲ್ಲಿ ನೋಡಿಕೊಂಡು ಬನ್ನಿ(ಪಿಟಿಐ ಚಿತ್ರಗಳು)

 ಗೌರವ ಸೂಚಿಸಿದ ಪ್ರಧಾನಿ

ಗೌರವ ಸೂಚಿಸಿದ ಪ್ರಧಾನಿ

ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ಶಿರಬಾಗಿ ಗೌರವ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ.

ವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್ ಜಯಂತಿ

ವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್ ಜಯಂತಿ

ವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಯಿತು. ಭಾರತದ ಸಂಸದಿಯ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಪಾಲ್ಗೊಂಡಿದ್ದರು.

ಅಂಬೇಡ್ಕರ್ ನೆನಪು

ಅಂಬೇಡ್ಕರ್ ನೆನಪು

ಪಂಜಾಬ್ ಅಸೆಂಬ್ಲಿಯ ವಕ್ತಾರ ಚರಣಜೀತ್ ಅತ್ವಾಲ್ ಅಂಬೇಡ್ಕರ್ ಸಾಧನೆಗಳನ್ನು ಅಮೆರಿಕದಲ್ಲಿ ಮೆಲುಕು ಹಾಕಿದರು.

ಮಾಲಾರ್ಪಣೆ

ಮಾಲಾರ್ಪಣೆ

ಅಂಬೇಡ್ಕರ್ ಪುತ್ಥಳಿಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮಾಲಾರ್ಪಣೆ ಮಾಡಿದರು.

ಆಗಮಿಸಿದ ಗಣ್ಯರು

ಆಗಮಿಸಿದ ಗಣ್ಯರು

ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್.

ಕಪಿರಾಯ

ಕಪಿರಾಯ

ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮಧ್ಯೆ ಬುಧವಾರ ಕೋಲ್ಕತಾದಲ್ಲಿ ನಡೆದ ಪಂದ್ಯಕ್ಕೆ ಟಿಕೆಟ್ ತೆಗೆದುಕೊಳ್ಳದೆ ಬಂದಿದ್ದ ಕಪಿರಾಯ.

ರಾಜ-ರಾಣಿ

ರಾಜ-ರಾಣಿ

ಬ್ರಿಟನ್ ರಾಜದಂಪತಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್ ಅಸ್ಸಾಂ ನ ಖಾಜಿರಂಗ ಅಭಯಾರಣ್ಯದಲ್ಲಿ ಸುತ್ತಾಡಿದರು.

 ಜಂಗಲ್ ಬುಕ್

ಜಂಗಲ್ ಬುಕ್

ತಮ್ಮದೇ ನಟನೆಯ "ಜಂಗಲ್ ಬುಕ್" ನೋಡಲು ಬಂದ ನಟ ನೀಲ್ ಛಾಯಾಗ್ರಾಹಕರ ಕ್ಯಾಮರಾ ಕಣ್ಣಿಹಗೆ ಬಿದ್ದಿದ್ದು ಹೀಗೆ.

ಹಬ್ಬದ ಸಂಭ್ರಮ

ಹಬ್ಬದ ಸಂಭ್ರಮ

ಪಂಜಾಬ್ ನ ಅಮೃತಸರದಲ್ಲಿ ಬೈಸಾಕಿ ಹಬ್ಬದ ನಿಮಿತ್ತ ದೀಪ ಬೆಳಗಿಸಿ ಸಂಭ್ರಮಿಸಿದ ಯುವತಿಯರು.

English summary
Prime Minister Narendra Modi on Thursday said that B.R. Ambedkar, the chief architect of the constitution, fought against injustice in society and his fight was for equality and dignity. Launching the 'Gram Uday Se Bharat Uday' programme here on the 125th birth anniversary of Ambedkar, Modi said the programme will be held from April 14 to April 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X