ಗುಜರಾತ್: ಹೊಸದಾಗಿ ನಿರ್ಮಿಸಲಾದ ಮತ್ತೊಂದು ಸೇತುವೆ ಕುಸಿತ, ಮೂವರು ಎಂಜಿನಿಯರ್‌ಗಳ ಅಮಾನತು
ಅಹಮದಾಬಾದ್, ಜೂನ್. 15: ದಕ್ಷಿಣ ಗುಜರಾತ್‌ನ ತಾಪಿ ಜಿಲ್ಲೆಯ ಮಿಂಡೋಲಾ ನದಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸೇತುವೆಯ ಸೇತುವೆ ಕುಸಿದು ಬಿದ್ದಿದೆ. ಇದಾದ ಕೆಲವು ಗಂಟೆಗಳ ನಂತರ ಗುಜರಾತ್ ಸರ್ಕಾರ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ. ಇತ್ತೀಚೆಗಷ್ಟೇ ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗಾಗಿ ತಯಾರಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಈ ಸೇತುವೆಯು ವಾಲೋಡ್ ತಾಲೂಕಿನ ಮಾಯಾಪುರ ಗ್ರಾಮದಿಂದ ತಾಪಿ ಜಿಲ್ಲೆಯ ವ್ಯಾರ ತಾಲೂಕಿನ ದೇಗಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿತ್ತು. ಬುಧವಾರ ಬೆಳಗ್ಗೆ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದ್ದು, ಸಿಎಂ ಭೂಪೇಂದ್ರ ಪಟೇಲ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸಂಜೆ ತಡವಾಗಿ ಸರ್ಕಾರವು ತಕ್ಷಣದ ತನಿಖೆಗೆ ಆದೇಶಿದಿದೆ.

'ಪ್ರಾಥಮಿಕ ವರದಿಯಲ್ಲಿ ಉನ್ನತ ಮಟ್ಟದ ಸೇತುವೆ ನಿರ್ಮಾಣಕ್ಕೆ ಬಳಸಿರುವ ವಸ್ತುಗಳ ಗುಣಮಟ್ಟದಲ್ಲಿ ಗಂಭೀರ ದೋಷ ಕಂಡುಬಂದಿದೆ' ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಅದರಂತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಯಪಾಲಕ ಎಂಜಿನಿಯರ್, ಉಪ ಕಾರ್ಯಪಾಲಕ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಅಮಾನತುಗೊಳಿಸಿದೆ.
"ನಿರ್ಮಾಣದಲ್ಲಿ ಕಾಂಕ್ರೀಟ್‌ನ ಸರಿಯಾದ ಗುಣಮಟ್ಟವನ್ನು ಕಾಯ್ದುಕೊಳ್ಳದ" ಕಾರಣಕ್ಕಾಗಿ ಸೂರತ್‌ನ ಅಕ್ಷಯ್ ಕನ್ಸ್ಟ್ರಕ್ಷನ್ ಎಂಬ ನಿರ್ಮಾಣ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರ ನಿರ್ಧರಿಸಿದೆ. ದಂಡನಾತ್ಮಕ ಕ್ರಮದ ಭಾಗವಾಗಿ ಸಂಸ್ಥೆಯಿಂದ ಹಣವನ್ನು ವಸೂಲಿ ಮಾಡಲು ಆದೇಶಿಸಲಾಗಿದೆ ಎಂದು ಸರ್ಕಾರದ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಿರ್ಮಾಣ ಸಂಸ್ಥೆಯಾದ ಅಕ್ಷಯ್ ಕನ್‌ಸ್ಟ್ರಕ್ಷನ್, ದಕ್ಷಿಣ ಗುಜರಾತ್‌ನಲ್ಲಿ ಕೊಸಾಂಬಾ ಸೇರಿದಂತೆ ಹಲವಾರು ಸೇತುವೆಗಳನ್ನು ನಿರ್ಮಿಸಿದೆ ಎಂದು ಸೂರತ್‌ನ ಮೂಲಗಳು ತಿಳಿಸಿವೆ. ಈ ತಿಂಗಳ ಆರಂಭದಲ್ಲಿ ಬಿಹಾರದ ಭಾಗಲ್‌ಪುರದಲ್ಲಿ ಗಂಗಾನದಿಯ ಮೇಲೆ ನಿರ್ಮಾಣ ಹಂತದಲ್ಲಿರುವ ಸೇತುವೆ ಕುಸಿತಗೊಂಡಿತ್ತು. ಎರಡು ಸೇತುವೆಗಳ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ, ಈ ಸೇತುವೆಯ ಗುತ್ತಿಗೆದಾರರು ಗುಜರಾತ್‌ನ ದ್ವಾರಕಾದಲ್ಲಿ ಸಿಗ್ನೇಚರ್ ಸೇತುವೆಯ ಯೋಜನೆಯನ್ನು ಸಹ ನಿರ್ಮಿಸುತ್ತಿದ್ದಾರೆ. ಅಹಮದಾಬಾದ್, ಸೂರತ್, ರಾಜ್‌ಕೋಟ್, ವಡೋದರಾ, ಮೆಹ್ಸಾನಾ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸೇತುವೆ ಕುಸಿದ ಪ್ರಕರಣಗಳು ವರದಿಯಾಗಿವೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸೇತುವೆ ಕುಸಿತದ ಘಟನೆಯು ಕನಿಷ್ಠ 15 ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಾದರಿಯಿಂದ ಜನ ಬೇಸತ್ತಿದ್ದಾರೆ. ಕಳೆದ ವರ್ಷ ಮೋರ್ಬಿ ಸೇತುವೆ ಕುಸಿದು 132 ಜನರು ಸಾವನ್ನಪ್ಪಿದ್ದನ್ನು ನೆನಪಿಸಿಕೊಂಡ ಮನೀಶ್ ದೋಷಿ, "ಭ್ರಷ್ಟ ಅಧಿಕಾರಿಗಳು ಮತ್ತು ಬಿಜೆಪಿ-ಗುತ್ತಿಗೆದಾರರ ವಿರುದ್ಧ ಯಾವಾಗ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಅಹಮದಾಬಾದ್‌ನ ಖೋಖರಾ ಪೊಲೀಸ್ ಠಾಣಾ ವ್ಯಾಪ್ತಿಯ ಹಟಕೇಶ್ವರದಲ್ಲಿ ಮೇಲ್ಸೇತುವೆ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದಕ್ಕಾಗಿ ಅಜಯ್ ಇಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಎಂಬ ನಿರ್ಮಾಣ ಸಂಸ್ಥೆಯ ನಾಲ್ವರು ನಿರ್ದೇಶಕರ ಮೇಲೆ ಗುಜರಾತ್ ಸರ್ಕಾರ ಇತ್ತೀಚೆಗೆ ಪ್ರಕರಣ ದಾಖಲಿಸಿದೆ.
ಐದು ವರ್ಷಗಳ ಹಿಂದೆ ನಿರ್ಮಿಸಿದ ಮೇಲ್ಸೇತುವೆ ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು, ಕುಸಿಯುವ ಸಾಧ್ಯತೆ ಇದೆ. ಈ ಹಿಂದೆ 2021ರಲ್ಲಿ ಅಹಮದಾಬಾದ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಮುಮತ್‌ಪುರ ಮೇಲ್ಸೇತುವೆಯ ಒಂದು ಭಾಗ ಕುಸಿದಿತ್ತು. ಈ ಸೇತುವೆಯನ್ನು ಇತ್ತೀಚೆಗಷ್ಟೇ ಸಾರ್ವಜನಿಕರ ಬಳಕೆಗಾಗಿ ಲೋಕಾರ್ಪಣೆ ಮಾಡಲಾಗಿತ್ತು.











Click it and Unblock the Notifications