ಸುಳ್ಳು ಸುದ್ದಿಗೆ ಜೀವಾವಧಿ ಶಿಕ್ಷೆ! ಫೇಸ್‌ಬುಕ್ & ಇನ್ಸ್ಟಾಗ್ರಾಂ ಪೋಸ್ಟ್‌ಗಳನ್ನ ಶೇರ್ ಮಾಡುವ ಮೊದಲು ಹುಷಾರ್...
ನೀವು ಸೋಷಿಯಲ್ ಮೀಡಿಯಾಗಳಲ್ಲಿ ಕಂಡ ಕಂಡ ಸುದ್ದಿ ಶೇರ್ ಮಾಡ್ತೀರಾ? ಅಥವಾ ಈ ರೀತಿಯಾಗಿ ಸುಳ್ಳು ಸುದ್ದಿ ಬಂದರೂ ಅದನ್ನು ಪೋಸ್ಟ್ ಮಾಡ್ತೀರಾ? ಹಾಗಾದ್ರೆ ಈಗ ನೀವು ತುಂಬಾ ಹುಷಾರ್ ಆಗಿ ಇರಬೇಕು. ಫೇಸ್‌ಬುಕ್, ಇನ್ಸ್ಟಾಗ್ರಾಂ, ಯುಟ್ಯೂಬ್, ಟ್ವಿಟ್ಟರ್ ಅಂದ್ರೆ ಈಗಿನ ಎಕ್ಸ್ ಸೇರಿದಂತೆ ಎಲ್ಲಾ ರೀತಿ ಸಾಮಾಜಿಕ ಜಾಲತಾಣಗಳ ಮೇಲೆ ಇದೀಗ ಸರ್ಕಾರವು ನಿಯಂತ್ರಣ ಹೇರಲು ಕಾನೂನು ತಂದಿದೆ. ಈ ಕಾನೂನಿನ ಅಡಿಯಲ್ಲಿ ದೇಶ ವಿರೋಧಿ ಮತ್ತು ಸುಳ್ಳು ಸುದ್ದಿ ಸೇರಿದಂತೆ ಜನರನ್ನ ದಾರಿ ತಪ್ಪಿಸುವ ಮಾಹಿತಿ ನೀಡಿದರೆ ನಿಮಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ! ಹಾಗಾದ್ರೆ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಅಂದಹಾಗೆ ಇದು ಸಾಮಾಜಿಕ ಜಾಲತಾಣಗಳ ಯುಗ, ಇಲ್ಲಿ ಎಲ್ಲಾ ಸೋಷಿಯಲ್ ಮೀಡಿಯಾ ಮತ್ತು ಇಂಟರ್‌ನೆಟ್ ಮೂಲಕ ನಡೆಯುತ್ತದೆ. ಹೀಗಾಗಿ ಜನರು ಇಲ್ಲಿ ಯಾವುದು ಸುಳ್ಳು & ಯಾವುದು ಸತ್ಯ ಅನ್ನೋದನ್ನು ತಿಳಿಯೋದಕ್ಕೆ ಸ್ವಲ್ಪ ಸಮಯ ಕೂಡಬೇಕು. ಇಲ್ಲವಾದರೆ, ತುಂಬಾ ವೇಗವಾಗಿ ವಿಷಯಗಳನ್ನ ತಿಳಿಯುವಾಗ ಸುಳ್ಳು ಸುದ್ದಿಗಳೇ ಹೆಚ್ಚಾಗಿ ಸಿಗುತ್ತವೆ. ಈ ನಡುವೆ ದೇಶ ವಿರೋಧಿ ಸುದ್ದಿಗಳು & ಆಕ್ಷೇಪಾರ್ಹ ಸುದ್ದಿಗಳು ಕೂಡ ಇದೀಗ ಸಾಮಾಜಿಕ ಮಾಧ್ಯಮ ಅಂದ್ರೆ ಸೋಷಿಯಲ್ ಮೀಡಿಯಾಗಳ ಮೂಲಕ ಹರಡುತ್ತಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇಂತಹ ಕೃತ್ಯ ಎಸಗುವವರಿಗೆ ಈಗ, ಜೀವಾವಧಿ ಶಿಕ್ಷೆ ನೀಡುವ ಕಾನೂನು ಜಾರಿಗೆ ತಂದು ಸರ್ಕಾರ ಹೊಸ ಘೋಷಣೆ ಹೊರಡಿಸಿದೆ.

ಜೀವಾವಧಿ ಶಿಕ್ಷೆ ಗ್ಯಾರಂಟಿ ಗುರೂ!
ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ಬರೀ ಸುಳ್ಳು ಸುದ್ದಿಗಳನ್ನೇ ಹರಡುತ್ತಾ ಜನರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂಬ ಆರೋಪ ಇದೆ. ಈ ವಿಚಾರವನ್ನ ಈಗ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸರ್ಕಾರ ತುಂಬಾ ಸೀರಿಯಸ್ ಆಗಿ ಪರಿಗಣಿಸಿದೆ, ಹೀಗಾಗಿ ಹೊಸ & ಕಠಿಣವಾದ ಕಾನೂನು ಜಾರಿಗೆ ತಂದಿದೆ. ಹಾಗಾದ್ರೆ ಇದೀಗ ಉತ್ತರ ಪ್ರದೇಶ ಸರ್ಕಾರ ಅಂದ್ರೆ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನು ಹೇಳುವುದು ಏನು? ಸುಳ್ಳು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರೆ & ಶೇರ್ ಮಾಡಿದರೆ ಜೀವಾವಧಿ ಶಿಕ್ಷೆ ಸೇರಿದಂತೆ ಯಾವೆಲ್ಲಾ ಕಠಿಣವಾದ ಶಿಕ್ಷೆ ನೀಡಲಾಗುತ್ತದೆ? ಮುಂದೆ ಓದಿ.
ಸುಳ್ಳು ಸುದ್ದಿ ಬಗ್ಗೆ ಎಚ್ಚರ.. ಎಚ್ಚರ..!
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಇದೀಗ ಜಾರಿಗೆ ತಂದಿರುವ ಹೊಸ ಕಾನೂನು ಸೋಷಿಯಲ್ ಮೀಡಿಯಾಗಳ ಮೇಲೆ ಸಂಪೂರ್ಣ ನಿಯಂತ್ರಣಕ್ಕೆ ಮುಂದಾಗಿದೆ. ಆ ಪ್ರಕಾರ, ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳ ಮೇಲೆ ಹದ್ದಿನ ಕಣ್ಣಿಡಲು ನಿರ್ಧರಿಸಲಾಗಿದೆ. ದೇಶ ವಿರೋಧಿ & ಸುಳ್ಳು ಸುದ್ದಿ ಹಬ್ಬಿಸಬಾರದು ಎಂಬ ಕಾನೂನು ಜಾರಿಗೆ ತರಲಾಗಿದೆ. ಈ ನಿಯಮ ಮೀರಿದರೆ ಅಂತವರಿಗೆ 3 ವರ್ಷ ಜೈಲು ಶಿಕ್ಷೆಯಿಂದ ಹಿಡಿದು ಜೀವಾವಧಿ ಶಿಕ್ಷೆಯ ತನಕ ಹಲವು ರೀತಿಯ ಶಿಕ್ಷೆ ನೀಡಲು ಈಗ ಅವಕಾಶ ಕಲ್ಪಿಸಲಾಗಿದೆ. ಈ ಕಾನೂನು ಇದೀಗ ಉತ್ತರ ಪ್ರದೇಶ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಪಡೆದು, ಅಧಿಕೃತವಾಗಿ ಅಖಾಡ ಪ್ರವೇಶ ಮಾಡಿದೆ.
ಇದು ಮಾತ್ರವಲ್ಲ ಯೋಗಿ ಆದಿತ್ಯನಾಥ್ ಸರ್ಕಾರ ಜಾರಿಗೆ ತಂದಿರುವ ಹೊಸ ಸೋಷಿಯಲ್ ಮೀಡಿಯಾ ಕಾನೂನಿನ ಪ್ರಕಾರ, ಆನ್‌ಲೈನ್‌ನಲ್ಲಿ ಅಶ್ಲೀಲ ಅಥವಾ ಮಾನಹಾನಿಕರ ವಿಷಯದ ಪ್ರಸಾರ ಕೂಡ ಕ್ರಿಮಿನಲ್ ಮಾನ ನಷ್ಟಕ್ಕೆ ಸಮ ಆಗಲಿದೆ. ಈ ಮೂಲಕ ಡಿಜಿಟಲ್ ವೇದಿಕೆಯ ಮೂಲಕ ಕಾನೂನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಯೋಗಿ ಸರ್ಕಾರ ಕ್ರಮಕ್ಕೂ ಮುಂದಾಗಿದೆ. ಈ ಹೊಸ ಕಾನೂನಿನ ಬಗ್ಗೆ ಪರ & ವಿರೋಧದ ಚರ್ಚೆ ಕೂಡ ಶುರುವಾಗಿದೆ.












Click it and Unblock the Notifications