ಇನ್ಮುಂದೆ ಬೇಕಾಬಿಟ್ಟಿ Whatsapp ಬಳಕೆ ಮಾಡುವಂತಿಲ್ಲ; Facebook, Instagramಗೂ ಬರಲಿದೆ ಹೊಸ ರೂಲ್ಸ್‌!

Whatsapp: ಭಾರತದಲ್ಲಿ ಅಂದಾಜು 85 ಕೋಟಿಗೂ ಹೆಚ್ಚು ಜನರು ವಾಟ್ಸ್ ಆ್ಯಪ್ (Whatsapp) ಬಳಕೆ ಮಾಡುತ್ತಿದ್ದಾರೆ. ಇದೀಗ ವಾಟ್ಸ್ ಆ್ಯಪ್ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಮೆಟಾ ತೆಗೆದುಕೊಂಡಿದೆ. ವಾಟ್ಸ್ ಆ್ಯಪ್, ಫೇಸ್‌ಬುಕ್ ಹಾಗೂ(WhatsApp, Facebook and Instagram) ಇನ್‌ಸ್ಟಾಗ್ರಾಮ್ ಒಡೆತನದ ಮೆಟಾ ವಾಟ್ಸ್ ಆ್ಯಪ್ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಭಾರತದಲ್ಲಿ ವಾಟ್ಸ್ ಆ್ಯಪ್ ಬಳಕೆಗೆ ವಯಸ್ಸಿನ ದೃಢೀಕರಣ ಪ್ರಕ್ರಿಯೆ ಪ್ರಾರಂಭವಾಗಿದೆ.

ಭಾರತವು ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಕ್ಕಳಿಗೆ ಆನ್‌ಲೈನ್ ಬಳಕೆಗೆ ನಿರ್ಬಂಧ ವಿಧಿಸಲಾಗುತ್ತಿದೆ. ಇದರ ಭಾಗವಾಗಿ ಮೆಟಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿರ್ಬಂಧ ಜಾರಿ ಸಾಧ್ಯತೆಗೆ ಸಂಬಂಧಿಸಿದಂತೆ ಈಗಿನಿಂದಲೇ ಅಗತ್ಯ ಸಿದ್ಧತೆ ಆರಂಭಿಸಿರುವ ಮೆಸೇಜಿಂಗ್ ಆ್ಯಪ್ ಕೆಲವೊಂದು ನಿರ್ಬಂಧಗಳನ್ನು ವಿಧಿಸುವುದಕ್ಕೆ ನಿರ್ಧರಿಸಿದೆ.

Whatsapp

ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ಭಾರತದಲ್ಲಿ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆಗೆ ನಿರ್ಬಂಧ ವಿಧಿಸಲಾಗುತ್ತಿದೆ. ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ 14ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿರ್ಧರಿಸಲು ಸರ್ಕಾರಗಳು ಚಿಂತನೆ ನಡೆಸಿವೆ. ಸಾಮಾಜಿಕ ಜಾಲತಾಣ ಬಳಕೆಗೆ ಕನಿಷ್ಠ ವಯೋಮಿತಿ ನಿಗದಿಪಡಿಸುವ ಕಾನೂನು ಜಾರಿಗೆ ತರುವ ಹಿನ್ನೆಲೆಯಲ್ಲಿ ತನ್ನ ಕೆಲ ಬಳಕೆದಾರರು ಗೌಪ್ಯ -ಸುರಕ್ಷಿತ ವಿಧಾನದ ಮೂಲಕ ವಯಸ್ಸು ದೃಢೀಕರಿಸುವ ಪ್ರಯೋಗಿಕ ಪರೀಕ್ಷೆಯನ್ನು ವಾಟ್ಸ್ ಆ್ಯಪ್ ಪ್ರಾರಂಭಿಸಿದೆ.

ಈ ನಿಟ್ಟಿನಲ್ಲಿ ವಾಟ್ಸ್ ಆ್ಯಪ್ (Whatsapp) ಕೆಲವು ಬಳಕೆದಾರರಿಗೆ ಮೆಸೇಜ್ ಕಳುಹಿಸಲು ಪ್ರಾರಂಭಿಸಿದೆ. ಈ ಸಂಬಂಧ ಕೆಲವು ಬಳಕೆದಾರರಿಗೆ ಹೋಮ್‌ಪೇಜ್‌ನಲ್ಲಿ ನೋಟಿಫಿಕೇಷನ್ ಕಳುಹಿಸಲು ಪ್ರಾರಂಭಿಸಿದೆ. ದೇಶದಲ್ಲಿ ಮುಂದೆ ಜಾರಿಗೆ ಬರಲಿರುವ ಕಾನೂನುಗಳು ನಮಗೆ ನಿಮ್ಮ ವಯಸ್ಸು ಕೇಳುವ ಅನಿವಾರ್ಯತೆ ಸೃಷ್ಟಿಸಿದೆ ಎನ್ನುವ ಸಾಲುಗಳಿರುವ ಮೆಸೇಜ್ ಹಲವರಿಗೆ ಬಂದಿದೆ. ಇದೇ ಸಂದರ್ಭದಲ್ಲಿ ಕೆಲವರ ವಾಟ್ಸ್ ಆ್ಯಪ್ ಖಾತೆಯಲ್ಲೂ ಸಮಸ್ಯೆ ಆಗಿದೆ.

ಭಾರತದಲ್ಲಿ ಹಂತ ಹಂತವಾಗಿ ಜಾರಿಗೆ ಬರಲಿರುವ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆ್ಯಕ್ಟ್(ಡಿಪಿಡಿಪಿ)ಗೆ ಅನುಗುಣವಾಗಿ ನಾವು ಬಳಕೆದಾರರಿಗೆ ಗೌಪ್ಯತೆ-ರಕ್ಷಣಾ ವಿಧಾನಗಳ ಮೂಲಕ ವಯಸ್ಸಿನ ದೃಢೀಕರಣಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದೇವೆ. ಇದರಿಂದ ವಾಟ್ಸ್ ಆ್ಯಪ್ ಕಾರ್ಯ ಅಥವಾ ಬಳಕೆದಾರರ ಅನುಭವದಲ್ಲಿ ಯಾವುದೇ ಬದಲಾವಣೆ ಆಗಲ್ಲ ಮಾಡುವುದಿಲ್ಲ. ವಯಸ್ಸಿಗೆ ಸಂಬಂಧಿಸಿದ ಮಾಹಿತಿ ತೀರಾ ಖಾಸಗಿ ವಿಚಾರ ಎಂಬುದು ನಮಗೆ ಅರ್ಥವಾಗುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ವಯಸ್ಸಿನ ಮಾಹಿತಿಯನ್ನು ಇತರೆ ಬಳಕೆದಾರರ ಜತೆಗೆ ಹಂಚಿಕೊಳ್ಳುವುದಿಲ್ಲ. ವಯಸ್ಸಿನ ದೃಢೀಕರಣ ಪರೀಕ್ಷೆ ಐಚ್ಛಿಕ ಎಂದು ಸಂಸ್ಥೆ ಹೇಳಿದೆ.

Whatsapp: ಹಲವು ವಾಟ್ಸ್ ಆ್ಯಪ್ ಬಳಕೆದಾರರಿಗೆ ಸಂಕಷ್ಟ!

ಇನ್ನು ಭಾರತದಲ್ಲಿ ವಾಟ್ಸ್ ಆ್ಯಪ್ ವಯಸ್ಸಿನ ಪರಿಷ್ಕರಣೆ ನಡೆಯುತ್ತಿರುವಾಗಲೇ ಭಾರತದಲ್ಲಿ ಹಲವು ವಾಟ್ಸಾಪ್ ಖಾತೆಗಳು ದಿಢೀರ್ ಬ್ಲಾಕ್ ಆಗಿವೆ. ಭಾರತವೂ ಸೇರಿ ಹಲವೆಡೆ ವಾಟ್ಸ್ ಆ್ಯಪ್ ತನ್ನ ಹಲವು ಬಳಕೆದಾರರ ಖಾತೆಗಳನ್ನು 24 ಗಂಟೆಗಳ ಕಾಲ ಬ್ಲಾಕ್ ಮಾಡುವ ಮೂಲಕ ಶಾಕ್ ಕೊಟ್ಟಿದೆ. ನಿಮ್ಮ ಖಾತೆಯನ್ನು ಮುಂದಿನ 24 ಗಂಟೆಗಳ ಅವಧಿಗೆ ಪರಿಶೀಲಿನೆಯಲ್ಲಿ ಇರಲಿಸಲಿದ್ದೇವೆ ಎಂದು ಹಲವರಿಗೆ ಮೆಸೇಜ್ ಕಳುಹಿಸಲಾಗಿದೆ.

ವಾಟ್ಸ್ ಆ್ಯಪ್‌ನ ಈ ದಿಢೀರ್ ಕ್ರಮದ ವಿರುದ್ಧ ಬಳಕೆದಾರರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರಕ್ಷತಾ ಕ್ರಮಗಳ ಅನುಷ್ಠಾನದ ವೇಳೆ ಕೆಲ ಸಮಸ್ಯೆಗಳು ಉಂಟಾಗಬಹುದು. ಸೇವೆಯ ದುರ್ಬಳಕೆ ತಡೆಯಲು ಹಾಗೂ ಇತರೆ ಬಳಕೆದಾರರ ಸುರಕ್ಷತೆಯ ಉದ್ದೇಶದಿಂದ ಕೆಲ ಖಾತೆಗಳನ್ನು ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ನಮ್ಮಿಂದ ತಪ್ಪುಗಳೂ ಆಗಬ ಹುದು. ಅದು ಗಮನಕ್ಕೆ ಬಂದ ತಕ್ಷಣ ಸರಿಪಡಿಸುವ ಕೆಲಸಮಾಡುತ್ತೇವೆ ಎಂದೂ ವಾಟ್ಸ್ ಆ್ಯಪ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+