ದೀಪಾವಳಿ ವೇಳೆಗೆ 200 ರು. ನೋಟು ಮಾರುಕಟ್ಟೆಗೆ ಲಗ್ಗೆ
ನವದೆಹಲಿ, ಆಗಸ್ಟ್ 03 : ಆಗಸ್ಟ್ ಅಂತ್ಯದ ವೇಳೆಗೆ 200 ಮುಖಬೆಲೆಯ ನೋಟುಗಳು ಚಲಾವಣೆಗೆ ಬರುವುದು ಅನುಮಾವಾಗಿದ್ದು. ದೀಪಾವಳಿ ವೇಳೆಗೆ ಚಲಾವಣೆಗೆ ಬರವ ಸಾಧ್ಯತೆಗಳಿವೆ.
'ನೋಟುಗಳನ್ನು ಮುದ್ರಿಸಲು ಹಣಕಾಸು ಸಚಿವಾಲಯ ಜುಲೈ ಮೊದಲ ವಾರದಲ್ಲಿ ಅನುಮತಿ ನೀಡಿತ್ತು. ಅಂದರಂತೆ 200 ನೋಟಗಳ ಮುದ್ರಣ ಪಾರಂಭವಾಗಿದ್ದು ಪೂರ್ಣಗೊಳ್ಳಲು 1 ತಿಂಗಳಾದರೂ ಬೇಕು. ಮುದ್ರಣ ಪೂರ್ಣಗೊಂಡ ನೋಟುಗಳಲ್ಲಿರುವ ಸುರಕ್ಷತಾ ಲಕ್ಷಣಗಳನ್ನು ಹಲವು ಹಂತದಲ್ಲಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಗೆ ಇನ್ನೂ 3 ತಿಂಗಳು ಬೇಕಾಗುತ್ತದೆ'ಎಂದು ಮೂಲಗಳು ತಿಳಿಸಿವೆ.

200 ಮುಖಬೆಲೆಯ ನೋಟುಗಳು 500 ಮುಖಬೆಲೆಯ ನೋಟುಗಳಿಗಿಂತ ಚಿಕ್ಕದಾಗಿರಲಿವೆ. ಹೀಗಾಗಿ ಈ ನೋಟುಗಳ ಗಾತ್ರಕ್ಕೆ ಎಟಿಎಂ ಘಟಕಗಳನ್ನೂ ಹೊಂದಿಸಬೇಕಿದೆ. ಇದರಿಂದ 200 ರು, ನೋಟ ಮಾರುಕಟ್ಟೆಗೆ ತಡವಾಗಿ ಬರಲು ಪ್ರಮುಖ ಕಾರಣವಾಗಿದೆ.












Click it and Unblock the Notifications