OYO Rooms: ಓಯೋಗೆ ಹೋಗುವ ಮುನ್ನ ಗಮನಿಸಲೇಬೇಕಾದ ಬಹುಮುಖ್ಯ ಮಾಹಿತಿ
OYO Rooms: ಓಯೋ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಇದನ್ನು ಕೆಲವರು ಉತ್ತಮ ಉದ್ದೇಶಗಳಿಗಾಗಿ ಬಳಸಿಕೊಂಡರೆ, ಇನ್ನೂ ಕೆಲವರು ಪ್ರೇಮಿಗಳೆಂದು ಹೇಳಿಕೊಂಡು ದುರುಪಯೋಗಪಡಿಸಿಕೊಂಡಿರುವ ಉದಾಹರಣೆಗಳಿವೆ. ಇದೀಗ ಈ ರೂಂಗಳ ಬುಕಿಂಗ್‌ಗೆ ಹೊಸ ನಿಯಮಗಳು ಜಾರಿಯಾಗಿದೆ, ಹಾಗಾದ್ರೆ ಅವುಗಳು ಯಾವುವು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತ ಮೂಲದ ರಿತೇಶ್ ಅಗರ್ವಾಲ್ ಮಾಲಿಕತ್ವದ ಓಯೋದಲ್ಲಿ ತುಂಬಾ ಬದಲಾವಣೆಗಳಾಗುತ್ತಿವೆ. ವಯಸ್ಕರಿಂದ ಯುವಕರವರೆಗೂ ಅನೇಕ ಜನರು ಓಯೋ ಕೊಠಡಿಗಳನ್ನು ಬಳಕೆ ಮಾಡುತ್ತಾರೆ. ದೂರದ ಊರುಗಳಿಂದ ಬಂದಂತಹವರಿಗೆ ಕಡಿಮೆ ದರದಲ್ಲಿ ಉಳಿದುಕೊಳ್ಳಲು ಇದು ತುಂಬಾ ಸಹಾಯಕ ಆಗುತ್ತಿದೆ. ಮತ್ತೊಂದೆಡೆ ಕೆಲ ಪ್ರೇಮಿಗಳು ಪ್ರೇಮ ನಿವೇದನೆ ಹಾಗೂ ಆನಂದಿಸಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ..

ಮೊದಲೆಲ್ಲಾ ಓಯೋಗೆ ಹೋಗಬೇಕೆಂದರೆ, ಜಾಸ್ತಿ ದಾಖಲೆಗಳು ಬೇಕಿರಲಿಲ್ಲ. ಆದರೆ, ಇದೀಗ ಕೆಲ ಬದಲಾವಣೆಗಳಾಗಿವೆ. ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ವಿಭಿನ್ನವಾಗಿ ಯೋಚನೆ ಮಾಡುತ್ತಾರೆ. ಕೆಲವರು ಪ್ರವಾಸ ತಾಣಗಳಿಗೆ ಹೋದ್ರೆ, ಕೆಲ ಜೋಡಿಗಳು ಪ್ರೀತಿಯನ್ನು ವ್ಯಕ್ತಪಡಿಸಲು ಓಯೋ ರೂಮ್ ಕಾಯ್ದಿರಿಸುತ್ತಾರೆ.
ಇದೀಗ ಓಯೋ ಕೊಠಡಿಗಳ ಬುಕಿಂಗ್‌ಗೆ ಸಂಬಂಧಿಸಿದ ಕೆಲವು ಹೊಸ ನಿಯಮಗಳು ಜಾರಿಗೆ ಬಂದಿವೆ. ಈ ಹಿನ್ನೆಲೆ ರೂಮ್ ಕಾಯ್ದಿರಿಸುವ ಮೊದಲು ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಓಯೋ ಹೋಟೆಲ್‌ನಲ್ಲಿ ಚೆಕ್-ಇನ್ ಸಮಯದಲ್ಲಿ ದಂಪತಿಗಳು ತಮ್ಮ ಸಂಬಂಧವನ್ನು ದೃಢೀಕರಿಸುವ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಅವು ಜಂಟಿ ಐಡಿ ಅಥವಾ ವಿವಾಹ ಪ್ರಮಾಣಪತ್ರಗಳಾಗಿರಬಹುದುಅಥವಾ ಮದುವೆ ಪ್ರಮಾಣಪತ್ರ ಏನನ್ನಾದರೂ ಓಯೋ ರೂಮ್ ಪ್ರತಿನಿಧಿಗಳಿಗೆ ಸಲ್ಲಿಕೆ ಮಾಡಬೇಕು.
ಕೊಠಡಿಯನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಿದ್ದರೂ ಕೂಡ ಚೆಕ್ ಇನ್ ವೇಳೆ ಅಗತ್ಯ ದಾಖಲೆಗಖನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಅವಿವಾಹಿತ ದಂಪತಿಗಳಿಗೆ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ಪ್ರತಿಯೊಂದು ಓಯೋ ವಿಶೇಷ ನಿಯಮಗಳನ್ನು ಹೊಂದಿದೆ. ಕೆಲವು ಪ್ರದೇಶಗಳಲ್ಲಿನ ಹೋಟೆಲ್‌ಗಳು ಅವಿವಾಹಿತ ದಂಪತಿಗಳಿಗೆ ಸ್ಥಳಾವಕಾಶವನ್ನು ನೀಡುವುದಿಲ್ಲ. ಅಂತಹ ಹೋಟೆಲ್‌ಗಳನ್ನು ಕಾಯ್ದಿರಿಸುವ ಮುನ್ನ ನಿಯಮಗಳನ್ನು ತಿಳಿದುಕೊಳ್ಳಲು ಅಗತ್ಯ
ಚೆಕ್-ಇನ್ ವೇಳೆ ದಂಪತಿಗಳು ಸರ್ಕಾರ ಅನುಮೋದಿಸಿದ ಐಡಿಯನ್ನು ತೋರಿಸಬೇಕಾಗುತ್ತದೆ. ಇಬ್ಬರೂ ತಮ್ಮ ಐಡಿಗಳೊಂದಿಗೆ ನೀವು ಓಯೋಗೆ ಹೋಗಬೇಕು. ಹೀಗೆ ಓಯೋ ಹೋಟೆಲ್ಸ್ ವಿವಿಧ ನಿಯಮಗಳನ್ನು ಜಾರಿಗೆ ತರುತ್ತಲಿದೆ. ಅನೇಕ ಪ್ರದೇಶಗಳಲ್ಲಿ ಓಯೋ ಹೋಟೆಲ್‌ಗಳು ಲಭ್ಯ ಇದ್ದರೂ, ಕೆಲವು ಸ್ಥಳಗಳಲ್ಲಿ ಅವಿವಾಹಿತ ದಂಪತಿಗಳಿಗೆ ಅನುಮತಿ ಇಲ್ಲ. ಜೊತೆಗೆ ನೀವು ಅದಕ್ಕಾಗಿ ಮುಂಚಿತವಾಗಿ ಯೋಜನೆಗಳನ್ನು ರೂಪಿಸಬೇಕು.
ಈ ಕಾರಣಕ್ಕಾಗಿ ನಿಮ್ಮ ಯೋಜನೆಗಳು ವ್ಯರ್ಥ ಆಗುವುದಿಲ್ಲ. ಕೆಲವು ಹೋಟೆಲ್‌ಗಳು ಆನ್ ಲೈನ್ ಪಾವತಿಗಳನ್ನು ಸ್ವೀಕರಿಸದೇ ಇರಬಹುದು. ಬದಲಾಗಿ ನಗದು ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಮಾತ್ರ ಸ್ವೀಕರಿಸಬಹುದು. ಈ ಹಿನ್ನೆಲೆ ಪಾವತಿಗಳ ಬಗ್ಗೆ ವಿವರಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಅಗತ್ಯವಾಗಿದೆ.
ದೂರದ ನಗರಗಳಿಗೆ ಹೋದಾಗ ನಾವು ಅಲ್ಲಿ ಹೋಟೆಲ್‌ಗಳಲ್ಲಿ ತಂಗಲು ಆಯೋಜಿಸುತ್ತೇವೆ. ಆಗ ನಮ್ಮನ್ನು ಅಲ್ಲಿ ಐಡಿ ದಾಖಲೆ ಕೇಳಲಾಗುತ್ತದೆ. ಗುರುತಿನ ಪುರಾವೆಗಾಗಿ ನಾವು ನಮ್ಮ ಆಧಾರ್ ಕಾರ್ಡ್ ನೀಡುತ್ತೇವೆ. ಆಧಾರ್ ಕಾರ್ಡ್ ನಮ್ಮ ಎಲ್ಲಾ ಪ್ರಮುಖ ಮಾಹಿತಿಯನ್ನು ಒಳಗೊಂಡಿದೆ. ಈ ಮಾಹಿತಿಯನ್ನು ಯಾರೂ ಬೇಕಾದರೂ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳೇ ಹೆಚ್ಚಾಗಿ ನಡೆಯುತ್ತಿವೆ.
ಆದ್ದರಿಂದ ಮೂಲ ಆಧಾರ್ ಕಾರ್ಡ್ ಬದಲಿಗೆ ನೀವು ಮಾಸ್ಕ್ಡ್ ಆಧಾರ್ ಕಾರ್ಡ್ ನೀಡುವುದು ಸೂಕ್ತ. ಈ ಕಾರ್ಡ್ ಅನ್ನು ಎಲ್ಲಾ ಹೋಟೆಲ್‌ಗಳು ಅಥವಾ ಓಯೋ ರೂಮ್ ನಲ್ಲಿಯೂ ಸ್ವೀಕಾರ ಮಾಡಲಾಗುತ್ತದೆ. ಇದನ್ನು ಓಯೋ ರೂಂ ಗೆ ಭೇಟಿ ನೀಡುವವರು ಗಮನಿಸಲೇಬೇಕಾಗುತ್ತದೆ. ಯಾಕಂದ್ರೆ, ಮುಂದಾಗುವ ಸಮಸ್ಯೆಗಳನ್ನು ತಪ್ಪಿಸಲು ಇದು ಉತ್ತಮ ನಿರ್ಧಾರ ಅಂತಲೇ ಹೇಳಲಾಗುತ್ತಿದೆ.












Click it and Unblock the Notifications