Cold Wave Alert: ರಾಜಧಾನಿಯಲ್ಲಿ ದಟ್ಟ ಮಂಜಿನ ವಾತಾವರಣ: ರೈಲುಗಳ ಕಾರ್ಯಾಚರಣೆ ವಿಳಂಬ
ನವದೆಹಲಿ, ಜನವರಿ 05: ರಾಷ್ಟ್ರ ರಾಜಧಾನಿ ಬೆಂಗಳೂರಿನಲ್ಲಿ ಶೀತದ ಅಲೆ ಸೃಷ್ಟಿಯಾಗಿದೆ. ಈ ಕಾರಣದಿಂದಲೇ ತಪಮಾನ ಇಳಿಕೆ ಆಗಿದೆ. ಇದಷ್ಟೇ ಆಗಿದ್ದರೆ ದೆಹಲಿ ಮಟ್ಟಕ್ಕೆ ಇದು ಸಾಮಾನ್ಯ ಸಮಸ್ಯೆ ಎನ್ನಬಹುದು. ಆದರೆ ದೆಹಲಿ ಸೇರಿದಂತೆ ಉತ್ತರ ರಾಜ್ಯಗಳಲ್ಲಿ ಕವಿದ ಮಂಜು ರೈಲು ಸಾರಿಗೆ ಹಾಗೂ ವಿಮಾನ ಸಾರಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ರೈಲು ಸಂಚಾರ ಸೇವೆಯಲ್ಲಿ ವ್ಯತ್ಯವಾಗಿದೆ. ಪ್ರಯಾಣಿಕರು ಪರದಾಡುವಂತಾಗಿದೆ.
ಹೌದು, ನವದೆಹಲಿಯಲ್ಲಿ ದಟ್ಟ ಮಂಜು ಆವರಿಸಿಕೊಂಡಿದೆ. ಈ ಕಾರಣದಿಂದಾಗಿ ರೈಲು ನಿಲ್ದಾಣದಿಂದ ವಿವಿಧೆಡೆ ಹೊರಡುವ ರೈಲುಗಳ ಸಂಚಾರದಲ್ಲಿ ವ್ಯತ್ಯವಾಗಿದೆ. ರೈಲು ಸಂಚಾರಕ್ಕೆ ಇಲ್ಲಿ ಚಳಿ ವಾತಾವರಣ ಅಡ್ಡಿ ಉಂಟು ಮಾಡಿದೆ. ಭಾರಿ ಪ್ರಮಾಣದಲ್ಲಿ ಕವಿದ ಕಾರಣ ಕಡಿಮೆ ಗೋಚರತೆ ಇದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆ ಕಾರಣದಿಂದ ವಿವಿಧ ರೈಲುಗಳ ಸಂಚಾರ ತಡವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಕೇವಲ ರೈಲುಗಳು ಮಾತ್ರವಲ್ಲದೇ 45 ವಿಮಾನಗಳು ರದ್ದುಗೊಂಡಿವೆ. 400 ವಿಮಾನಗಳ ಸೇವೆ ವಿಳಂಬವಾಗಿದೆ. ಅದರ ಬೆನ್ನಲ್ಲೆ ರೈಲು ಸೇವೆಯ ಮೇಲೆ ಇಲ್ಲಿನ ವಾತಾವರಣ ದುಷ್ಪರಿಣಾಮ ಬೀರಿದೆ. ಕಳೆದು ವಾರದಿಮದ ರಾಜಧಾನಿಯು ಶೀತ ಅಲೆ ಎದುರಿಸಿದೆ. ಆದರೆ ಇಂದು ಅತೀವ ಪ್ರಮಾಣದಲ್ಲಿ ಶೀತ ವಾತಾವರಣ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರೈಲು ನಿಲ್ದಾಣದಲ್ಲೇ ಅನೇಕ ರೈಲುಗಳು ಸಂಚಾರ ಕೊನೆ ಗೊಳಿಸಿವೆ. ಇಂತಹ ವಾತಾವರಣದ ಮಧ್ಯವೇ ಹೌರಾ-ನವದೆಹಲಿ ಡುರೊಂಟೊ ಎಕ್ಸ್‌ಪ್ರೆಸ್ ರೈಲು, ಮಹಾಬೋಧಿ ಎಕ್ಸ್‌ಪ್ರೆಸ್, ಲಕ್ನೋ ಮೇಲ್ ಮತ್ತು ಕತ್ಗೊಡಮ್ ಎಕ್ಸ್‌ಪ್ರೆಸ್ ನಂತರ ವಿವಿಧ ರೈಲುಗಳು ಕಾರ್ಯಾಚರಣೆ ತಡವಾಗಿ ಆರಂಭಿಸಿದ್ದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆ ಆಯಿತು.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿರುವ ಪ್ರಕಾರ, ಕಳೆದ ಕೆಲವು ದಿನಗಳಿಗಿಂತಲೂ ಭಾನುವಾರ (ಜನವರಿ 5)ದಂದು ಬೆಳಗ್ಗೆ 5:30ಕ್ಕೆ ದೆಹಲಿಯ ತಾಪಮಾನ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಕಂಡಿದೆ. ಅತೀವ ಚಳಿ ನಡುವೆ ರೈಲು ಏರಲು ಬಂದವರಿಗೆ ರೈಲು ವಿಳಂಬವು ಆಘಾತ ನೀಡಿತು.
ನಗರಾದ್ಯಂತ ದಟ್ಟ ಮಂಜಿಗೆ ಜನರು ಬೇಸತ್ತಿದ್ದಾರೆ. ಮನೆಯಿಂದ ಹೊರಗೆ ಕಾಲಿಡದಷ್ಟು ಮೈಕೊರೆವ ಚಳಿ, ಮಂಜು ಆವರಿಸಿದೆ. ಮಧ್ಯಾಹ್ನ ಬಿಸಿಲು ಸಹ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಒಣ ಹವೆ ಜೊತೆಗೆ ಅಸುರಕ್ಷಿತ ಗಾಳಿಯು ಜನರ ಜೀವ ಹಿಂಡುತ್ತಿದೆ.
ನಗರದಲ್ಲಿ ಕಳಪೆ ಗಾಳಿ ಗುಣಮಟ್ಟ ದಾಖಲು
ಸಾಮಾನ್ಯವಾಗಿ ದೆಹಲಿ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ' ಮಟ್ಟದಲ್ಲಿದೆ. ಜನರು ಅಸುರಕ್ಷಿತ ವಾಯು ಸೇವನೆ ಜೊತೆಗೆ ಸಂಚಾರ ಅಸ್ತವ್ಯಸ್ತವನ್ನು ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂದು ದೆಹಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಬೆಳಿಗ್ಗೆ 6 ಗಂಟೆಗೆ 377 ಕಳಪೆ ಗಾಳಿ ದಾಖಲಾಗಿದೆ. ನೆನ್ನೆ ಇದೇ ದಿನ 385 ರಷ್ಟು AQI ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ತಿಳಿಸಿದೆ.
ದೆಹಲಿಯಲ್ಲಿ ಮುಂದಿನ ಕೆಲವು ದಿನಗಳ ಗಾಳ ವಿಪರೀತ ಚಳೀ, ದಟ್ಟ ಮಂಜು, ಮಧ್ಯಾಹ್ನ ಶುಷ್ಕ ವಾತಾವರಣ ಮುಂದುವರಿಯಲಿದೆ ಎಂಬ ಮುನ್ಸೂಚನೆ ಇದೆ.












Click it and Unblock the Notifications