Delhi Flood: ದೆಹಲಿ ಮುಳುಗಿದರ ಹಿಂದೆ ಎಎಪಿ ಷಡ್ಯಂತ್ರವಿದೆ: ಬಿಜೆಪಿ ತಿರುಗೇಟು
ನವದೆಹಲಿ, ಜುಲೈ 16: ದೆಹಲಿ, ಹಿಮಾಚಲ ಪ್ರದೇಶ, ಒಡಿಶಾದಲ್ಲಿ ವಿಪರೀತ ಮಳೆ, ನದಿ ನೀರು ಬಿಡುಗಡೆಯಿಂದ ಪ್ರವಾಹ ಸೃಷ್ಟಿಯಾಗಿದೆ. ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ಯಮುನಾ ನದಿ ನೀರನ್ನು ಬಿಡುಗಡೆ ಮಾಡುವ ಮೂಲಕ ರಾಷ್ಟ್ರ ರಾಜಧಾನಿ ನವದೆಹಲಿ ಮುಳುಗಿಸಲು, ಜನರ ಸಂಕಷ್ಟಕ್ಕೆ ಸಂಚು ರೂಪಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ದೆಹಲಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಸಚಿವ ಸೌರಭ್ ಭಾರದ್ವಾಜ್ ಅವರು ಬಿಜೆಪಿ ವಿರುದ್ಧ ಕೆಂಡ ಕಾರಿದರು. ದೆಹಲಿಯನ್ನು ಉದ್ದೇಶಪೂರ್ವಕವಾಗಿ ಮುಳುಗಿಸಲಾಗುತ್ತಿದೆ. ಹತ್ನಿಕುಂಡ್ ಬ್ಯಾರೇಜ್‌ನಿಂದ ಹೆಚ್ಚುವರಿ ನೀರನ್ನು ದೆಹಲಿಯತ್ತ ಬಿಡಲಾಗಿದೆ. ಸುಪ್ರೀಂ ಕೋರ್ಟ್ ಸೇರಿದಂತೆ ದೆಹಲಿಯ ಎಲ್ಲಾ ಪ್ರಮುಖ ಸಂಸ್ಥೆಗಳನ್ನು ಮುಳುಗಿಸುವ ಸಂಚು ಇದರಲ್ಲಿ ಅಡಗಿದೆ ಎಂದು ದೂರಿದರು.

ಇದೇ ಬ್ಯಾರೇಜ್‌ನಿಂದ ಹೆಚ್ಚುವರಿ ನೀರನ್ನು ಹರಿಯಾಣದ ಪಶ್ಚಿಮ ಕಾಲುವೆ ಮತ್ತು ಉತ್ತರ ಪ್ರದೇಶದ ಪೂರ್ವ ಕಾಲುವೆಗೆ ಬಿಡುತ್ತಿಲ್ಲ ಎಂದು ಅವರು ಪ್ರತಿಪಾದಿಸಿದರು.
#Watch | Haryana Agriculture Minister, Jai Parkash Dalal said, "We don't have any dam, the water that comes flows down to Delhi, Agra, Allahabad, and then goes down the ocean...Aam Aadmi Party tries to evade its duties... The water flow increased earlier as well but, the Yamuna… pic.twitter.com/fi8gXEoRGA
— ANI (@ANI) July 15, 2023
ದೆಹಲಿ ಸಚಿವರು ಹೇಳಿದ್ದೇನು?
ಇನ್ನೂ ಇದೇ ವಿಚಾರವಾಗಿ ಧ್ವನಿ ಎತ್ತಿದ ದೆಹಲಿ PWD ಸಚಿವ ಅತಿಶಿ ಅವರು, ದೆಹಲಿಯ ಪ್ರವಾಹ ಪರಿಸ್ಥಿತಿ ತಪ್ಪಿಸಬಹುದೇ ಎಂದು ಪ್ರಶ್ನಿಸಿದ್ದಾರೆ. ಮುಂದಿನ 12 ಗಂಟೆಗಳಲ್ಲಿ ಯಮುನಾ ನದಿಯಿಂದ ಉಕ್ಕಿ ಹರಿಯುತ್ತಿರುವ ನೀರಿನ ಮಟ್ಟ ನಿಧಾನವಾಗಿ ಕಡಿಮೆಯಾಗಲಿದ್ದು, ಜನರಿಗೆ ಸಂಕಷ್ಟದಿಂದ ಪರಿಹಾರ ಸಿಗಲಿದೆ ಎಂದು ಅವರು ವಿಸ್ವಾಸ ವ್ಯಕ್ತಪಡಿಸಿದರು.
ಹೆಚ್ಚುವರಿಯ ಯಮುನಾ ನದಿ ನೀರನ್ನು ದೆಹಲಿಗೆ ಮಾತ್ರ ಏಕೆ ಬಿಡಲಾಗಿದೆ ಎಂಬುದು ದೊಡ್ಡ ಪ್ರಶ್ನೆ ಆಗಿದೆ. ಉತ್ತರ ಪ್ರದೇಶ ಮತ್ತು ಹರಿಯಾಣಕ್ಕೆ ಕಾಲುವೆಗಳಿಗೆ ಬ್ಯಾರೇಜ್‌ನಿಂದ ಒಂದೇ ಒಂದು ಹನಿ ನೀರು ಬಿಟ್ಟಿಲ್ಲ. ಇದಕ್ಕೆ ಹರಿಯಾಣ ಉತ್ತರ ನೀಡಬೇಕು ಎಂದರು. ಇತ್ತ ಎಎಪಿ ನಾಯಕ ಸೋಮನಾಥ್ ಭಾರ್ತಿ ಅವರು ದೆಹಲಿಯಲ್ಲಿ ನಿರ್ಮಾಣವಾಗಿರುವ ಪ್ರವಾಹ ಪರಿಸ್ಥಿತಿಯನ್ನು ಬಿಜೆಪಿ ನಿರ್ಮಿತ ದುರಂತ ಎಂದು ಆಪಾದಿಸಿದ್ದಾರೆ.

ಎಎಪಿ ಆರೋಪಕ್ಕೆ ಬಿಜೆಪಿ ಕೊಟ್ಟ ತಿರುಗೇಟು ಏನು?
ದೇಶಕ್ಕೆ ಕೋವಿಡ್ -19 ಸಾಂಕ್ರಾಮಿಕ ತಲೆದೂರಿದಾಗ ದೆಹಲಿಯಲ್ಲಿ ಅಂದು ಎಎಪಿ ಸರ್ಕಾರವು "ಜವಾಬ್ದಾರಿಯಿಂದ ತಪ್ಪಿಸಿಕೊಂಡಂತೆ ಇಂದು ಸಹ ಜಬಾಬ್ದಾರಿಯಿಂದ ನುಜುಚಿಕೊಳ್ಳುತ್ತಿದೆ, ನೆರೆಯ ರಾಜ್ಯಗಳನ್ನು ದೋಷಿಸುತ್ತಿದೆ. ಇದು ನಿಮ್ಮ ಪಕ್ಷದ್ದೆ ಷಡ್ಯಂತ್ರ ವಿರಬೇಕು ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ತಿರುಗೇಟು ಕೊಟ್ಟರು.
ಹರಿಯಾಣ ಕೃಷಿ ಸಚಿವ ಜೈ ಪ್ರಕಾಶ್ ದಲಾಲ್ ಪ್ರತಿಕ್ರಿಯಿಸಿ, ಸಚ್‌ದೇವ ಅವರ ಪರ ಬ್ಯಾಟ್ ಬೀಸಿದರು. ಯಮುನಾ ನದಿ ನೀರು ಬಿಡುಗಡೆಯಾದಾಗ, ಅದು ಮೊದಲು ದೆಹಲಿ ಮಾರ್ಗವಾಗಿ ಆಗ್ರಾ ಮತ್ತು ಅಲಹಾಬಾದ್ ಮೂಲಕ ಹರಿದು ಹೋಗಿ ಸಾಗರ ಸೇರುತ್ತದೆ.
ಇನ್ನೂ ದೆಹಲಿಯಲ್ಲಿ ನಗರದ ಹೆಚ್ಚಿನ ಭಾಗಗಲ್ಲಿ ಪ್ರವಾಹ ಉಂಟಾಗಲು ಅಕ್ರಮ ಆಸ್ತಿಗಳು ಮತ್ತು ಪ್ರವಾಹ ಪ್ರದೇಶಗಳಲ್ಲಿ ನಿರ್ಮಾಣವಾಗಿರುವುದೇ ಪ್ರಮುಖ ಕಾರಣವಾಗಿದೆ ಎಂದು ವಿವರಿಸಿದರು.
ಹಳೇ ರೈಲ್ವೇ ಸೇತುವೆಯಲ್ಲಿ ನದಿಯ ಹರಿವು ಕ್ರಮೇಣ ತಗ್ಗಿದ ಕಾರಣ ಕೆರಳಿದ ಯಮುನಾ ಶನಿವಾರ ಶಾಂತವಾಗುವ ಲಕ್ಷಣಗಳನ್ನು ತೋರಿಸಿದೆ. ನದಿಯ ನೀರಿನ ಮಟ್ಟವು ಬೆಳಿಗ್ಗೆ 10 ಗಂಟೆಗೆ 207.48 ಮೀಟರ್‌ಗಳನ್ನು ತಲುಪಿತು, ಇದು 1978 ರ ದಾಖಲೆಯ 207.49 ಮೀಟರ್‌ಗಿಂತ ಸ್ವಲ್ಪ ಕಡಿಮೆಯಾಗಿದೆ.
ಮಳೆ, ಪ್ರವಾಹದಿಂದಾಗಿ ದೆಹಲಿಯಲ್ಲಿ ಶಾಲೆ- ಕಾಲೇಜುಗಳು, ಸ್ಮಶಾನಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳನ್ನು ಮುಚ್ಚಲು ದೆಹಲಿ ಸರ್ಕಾರ ನಿರ್ಧರಿಸಿದೆ.












Click it and Unblock the Notifications