ಬಜೆಟ್ 2021; ಹೊಸ ಬುಲೆಟ್ ರೈಲು ಮಾರ್ಗಗಳ ಘೋಷಣೆ?

ನವದೆಹಲಿ, ಜನವರಿ 27; ಮುಂಬರುವ ವರ್ಷಗಳಲ್ಲಿ ಬುಲೆಟ್ ರೈಲು ಮಾರ್ಗಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ನಿರೀಕ್ಷೆ ಮಾಡಲಾಗಿದೆ. 2051ರ ಹೊತ್ತಿಗೆ ಭಾರತದಲ್ಲಿ 8 ಸಾವಿರ ಕಿ. ಮೀ.ಗಳ ಬುಲೆಟ್ ರೈಲು ಮಾರ್ಗಗಳ ಗುರಿಯನ್ನು ಹೊಂದಲಾಗಿದೆ.

ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಭಾರತದ ದೇಶದ ಮೊದಲ ಬುಲೆಟ್ ರೈಲು ಮಾರ್ಗವನ್ನು ಮುಂಬೈ-ಅಹಮದಾಬಾದ್ ನಡುವೆ ಘೋಷಣೆ ಮಾಡಿತ್ತು.

ಮಹಾರಾಷ್ಟ್ರ ಭಾಗದಲ್ಲಿ ಭೂ ಸ್ವಾಧೀನಕ್ಕೆ ಉಂಟಾಗಿರುವ ತೊಡಕುಗಳ ಹಿನ್ನಲೆಯಲ್ಲಿ ಅಂದುಕೊಂಡಷ್ಟು ವೇಗವಾಗಿ ಈ ಯೋಜನೆ ಸಾಗುತ್ತಿಲ್ಲ. ಆದರೆ, ಕೇಂದ್ರ ಸರ್ಕಾರ ಈಗಾಗಲೇ ರಾಷ್ಟ್ರೀಯ ಹೈ ಸ್ಪೀಡ್‌ ರೈಲು ನಿಗಮಕ್ಕೆ ದೇಶದ ಉಳಿದ 7 ಮಾರ್ಗಗಳ ಡಿಪಿಆರ್ ಸಿದ್ಧಗೊಳಿಸುವಂತೆ ಸೂಚನೆ ನೀಡಿದೆ.

 New Bullet Train Corridors May Announced In Budget 2021

ದೆಹಲಿ-ವಾರಣಾಸಿ ನಡುವಿನ ಬುಲೆಟ್ ರೈಲು ಮಾರ್ಗದ ಡಿಪಿಆರ್‌ ಅನ್ನು ರೈಲ್ವೆ ಇಲಾಖೆಗೆ 2020ರ ಅಕ್ಟೋಬರ್‌ನಲ್ಲಿ ಸಲ್ಲಿಕೆ ಮಾಡಲಾಗಿದೆ. ಸುಮಾರು 800 ಕಿ. ಮೀ.ಗಳ ಈ ಮಾರ್ಗ ಲಕ್ನೋ, ಮಥುರಾ, ಅಯೋಧ್ಯೆ, ಪ್ರಯಾಗ್‌ರಾಜ್, ಆಗ್ರಾ, ರಾಯ್ ಬರೇಲಿ ಮೂಲಕ ಸಂಚಾರ ನಡೆಸಲಿದೆ.

ರಾಷ್ಟ್ರೀಯ ರೈಲು ಯೋಜನೆ 2024 ದೇಶದಲ್ಲಿ ಹಲವು ಹೊಸ ಬುಲೆಟ್ ರೈಲು ಮಾರ್ಗವನ್ನು ಪ್ರಸ್ತಾಪಿಸಿದೆ. ವಾರಣಾಸಿ-ಪಾಟ್ನಾ, ಅಮೃತಸರ-ಜಮ್ಮು, ಪಾಟ್ನಾ-ಗೌಹಾತಿ, ಹೈದರಾಬಾದ್-ಬೆಂಗಳೂರು ಮಾರ್ಗಗಳು ಇದರಲ್ಲಿ ಸೇರಿವೆ.

ಮೊದಲು ಕೇಂದ್ರ ಬಜೆಟ್ ಮತ್ತು ರೈಲ್ವೆ ಬಜೆಟ್ ಪ್ರತ್ಯೇಕವಾಗಿ ಮಂಡನೆಯಾಗುತ್ತಿತ್ತು. 2017ರ ಬಳಿಕ ಎರಡನ್ನು ವಿಲೀನ ಮಾಡಲಾಗಿದೆ. ಹಣಕಾಸು ಬಜೆಟ್ ಮಂಡನೆ ಮಾಡುವಾಗಲೇ ನಿರ್ಮಮಾ ಸೀತಾರಾಮನ್ ರೈಲು ಬಜೆಟ್ ಮಂಡಿಸಲಿದ್ದು, ನೂತನ ಬುಲೆಟ್ ರೈಲು ಮಾರ್ಗ ಘೋಷಣೆಯಾಗುವ ನಿರೀಕ್ಷೆ ಇದೆ.

ಲಾಕ್ ಡೌನ್ ಘೋಷಣೆ ಬಳಿಕ ಭಾರತೀಯ ರೈಲ್ವೆಯಲ್ಲಿ ಹಲವಾರು ಬದಲಾವಣೆಗಳು ಆಗಿವೆ. ಪ್ರಸ್ತುತ ಪೂರ್ಣ ಮಟ್ಟದಲ್ಲಿ ರೈಲುಗಳು ಸಂಚಾರ ನಡೆಸುತ್ತಿಲ್ಲ. ವಿಶೇಷ ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ. ಎಲ್ಲಾ ರೈಲುಗಳ ಸಂಚಾರದ ಬಗ್ಗೆಯೂ ಬಜೆಟ್‌ನಲ್ಲಿ ಘೋಷಣೆ ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+