ನೆಸ್ಲೆ ಸಿಇಒ ಪಾಲ್ ಬಲ್ಕೆ ಸುದ್ದಿಗೋಷ್ಠಿ ಮುಖ್ಯಾಂಶಗಳು
ನವದೆಹಲಿ, ಜೂ. 05: ಭಾರತದಲ್ಲಿ ತಯಾರಾಗುತ್ತಿರುವ ಮ್ಯಾಗಿ ನ್ಯೂಡಲ್ಸ್ ನಲ್ಲಿ ಯಾವುದೇ ಹಾನಿಕಾರಕ ಅಂಶ ಇಲ್ಲ. ಇದರ ಸೇವನೆಯಿಂದ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಆಗುವುದಿಲ್ಲ ಎಂದು ನೆಸ್ಲೆ ಸಿಇಒ ಪಾಲ್ ಬಲ್ಕೆ ಸಮರ್ಥನೆ ನೀಡಿದ್ದಾರೆ.
ಮುಂಬೈನಲ್ಲಿ ಶುಕ್ರವಾರ ಮಾತನಾಡಿದ ಅವರು ನಾವು ಜಗತ್ತಿನಾದ್ಯಂತ ಒಂದೇ ಗುಣಮಟ್ಟ ಕಾಪಾಡಿಕೊಂಡು ಬಂದಿದ್ದೇವೆ. ಭಾರತದಲ್ಲಿ ಲಭ್ಯವಿರುವ ಮ್ಯಾಗಿ ನ್ಯೂಡಲ್ಸ್ ಸಹ ಇದಕ್ಕೆ ಹೊರತಾಗಿಲ್ಲ ಎಂದು ಹೇಳಿದ್ದಾರೆ.[ಎಲ್ಲ ಬಗೆಯ ನ್ಯೂಡಲ್ಸ್ ಪರೀಕ್ಷೆಗೆ ರಾಜ್ಯ ಸರ್ಕಾರ ತೀರ್ಮಾನ]

ಮ್ಯಾಗಿ ಮೇಲೆ ಬಂದಿರುವ ಎಲ್ಲ ಆರೋಪಗಳನ್ನು ಅಲ್ಲಗಗಳೆದಿರುವ ಅವರು, ನಾವು ಜನರಿಗೆ ಸುರಕ್ಷಿತ ಉತ್ಪನ್ನವಬನ್ನೇ ನೀಡುತ್ತಿದ್ದೇವು. ಈ ಎಲ್ಲ ಗೊಂದಲಗಳು ಬಗೆಹರಿದ ಮೇಲೆ ಮತ್ತೆ ಮಾರುಕಟ್ಟೆಗೆ ಮರಳುತ್ತೇವೆ. ಸರ್ಕಾರ ನಮ್ಮ ಸಹಕಾರ ಕೇಳಿದರೆ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ.
ನೆಸ್ಲೆ ಸಿಇಒ ಪಾಲ್ ಬಲ್ಕೆ ಸುದ್ದಿಗೋಷ್ಠಿ ಮುಖ್ಯಾಂಶಗಳು
* ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಬಂದಿರುವ ಕಾರಣಕ್ಕೆ ಗೊಂದಲ ಉಂಟಾಗವಾರದು ಎಂದು ಮ್ಯಾಗಿ ನ್ಯೂಡಲ್ಸ್ ಮಾರಾಟವನ್ನು ಹಿಂಪಡೆಯುತ್ತಿದ್ದೇವೆ.
* ಮ್ಯಾಗಿಯಲ್ಲಿ ಸೀಸ ಮತ್ತು ಎಂಎಸ್‌ಜಿ ಸೇರಿದಂತೆ ಇತರ ಯಾವುದೇ ಹಾನಿಕಾರಕ ಅಂಶಗಳು ಇಲ್ಲ.
* ನಾವು ಪರಿಶೀಲನೆ ನಡೆಸಿದ್ದು ಸೇವನೆಗೆ ಸೂಕ್ತವಾಗಿವೆ.[ಬೆಂಗಳೂರಲ್ಲಿ ನ್ಯೂಡಲ್ಸ್ ವ್ಯಾಪಾರಕ್ಕೇನು ಅಡ್ಡಿಯಿಲ್ಲ]
* ಎಲ್ಲ ಗೊಂದಲಗಳು ಮುಗಿದ ಮೇಲೆ ನಾವು ಮಾರುಕಟ್ಟೆಗೆ ಹಿಂದಿರುಗುತ್ತೇವೆ.
* ಸರ್ಕಾರ ಮತ್ತು ಜನರು ಆರೋಗ್ಯದ ಮೇಲೆ ಇಟ್ಟ ಕಾಳಜಿಯನ್ನು ಮಾನ್ಯ ಮಾಡುತ್ತೇವೆ.
* ಪರೀಕ್ಷೆ ನಡೆಸಲು ಸರ್ಕಾರದೊಂದಿಗೆ ಕೈ ಜೋಡಿಸಲು ನಾವು ಸಿದ್ಧರಿದ್ದೇವೆ.
* ಇದೊಂದು ಗಂಭೀರ ಆರೋಪ ಮತ್ತು ಪ್ರಕರಣವಾಗಿದ್ದು ನಮಗೂ ಜನರ ಆರೋಗ್ಯದ ಬಗ್ಗೆ ಕಾಳಜಿಯಿದೆ.
* ಭಾರತದ ಗ್ರಾಹಕರು ಮತ್ತು ಮಾರುಕಟ್ಟೆ ನಮಗೆ ಬಹಳ ಪ್ರಮುಖವಾಗಿದ್ದು ಎಲ್ಲ ಆರೋಪಗಳಿಂದ ಮುಕ್ತರಾಗಿ ಹಿಂದಕ್ಕೆ ಮರಳುತ್ತೇವೆ.












Click it and Unblock the Notifications