ಮಕ್ಕಳ ದಿನ: ನೆಹರು ಜನ್ಮದಿನದಂದು ಗಣ್ಯರ ಶುಭ ಹಾರೈಕೆ
ನವದೆಹಲಿ, ನವೆಂಬರ್ 14: "ನಮಗೆಷ್ಟೇ ವಯಸ್ಸಾಗಬಹುದು, ನಾವೆಷ್ಟೇ ಬೆಳೆಯಬಹುದು, ಆದರೆ ಕಾಗದದ ದೋಣಿ ಕಂಡಾಗ ಹಿಗ್ಗುವ ಮಗುವಿನಂಥ ಮುಗ್ಧ ಮನಸ್ಸು ಮಾತ್ರ ಆಗಾಗ ನಮ್ಮೊಳಗಿಂತ ಇಣುಕಲೇಬೇಕು. ಅದಷ್ಟೇ ನಮ್ಮೊಳಗಿನ ಸಂಭ್ರಮವನ್ನು ಜೋಪಾನ ಮಾಡಲು ಸಾಧ್ಯ"
ಹೌದು, ಪ್ರತಿ ವರ್ಷ ಮಕ್ಕಳ ದಿನಾಚರಣೆಯ ಸಮಯದಲ್ಲೂ ಬಾಲ್ಯದ ಸಂಭ್ರಮಗಳು ನೆನಪಾಗುತ್ತವೆ. ಇಂದು ಸಹ ದೇಶದಾದ್ಯಂತ ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು(14.11.1889-27.05.1964) ಅವರಿಗೆ ಮಕ್ಕಳ ಮೇಲಿದ್ದ ವಿಶೇಷ ಪ್ರೀತಿಯ ಕಾರಣ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ.
ಟ್ವಿಟ್ಟರ್ ನಲ್ಲಿ #ChildrensDay2019 , #JawaharlalNehru ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ಆಗಿವೆ.

ಕನಸು ಕಾಣೋಣ
"ಪಂಡಿತ್ ಜವಾಹರಲಾಲ್ ನೆಹರು ಅವರು ಮಕ್ಕಳೆಲ್ಲರನ್ನೂ ಆರೋಗ್ಯವಂತ, ದೃಢ ಮತ್ತು ಸುಶಿಕ್ಷಿತರನ್ನಾಗಿ ಮಾಡುವ ಕನಸು ಕಂಡಿದ್ದರು. ಆ ಮಕ್ಕಳೇ ದೇಶವನ್ನೂ, ಸ್ವತಃ ತಮ್ಮನ್ನು ಮತ್ತು ತಮ್ಮ ಸುತ್ತ ಇರುವ ಇತರರನ್ನು ಬೆಳೆಸುತ್ತಾರೆ. ಅವರ ಬಗ್ಗೆ ಕನಸು ಕಾಣೋಣ, ಆ ಕನಸು ಸೃಷ್ಟಿಸೋಣ" - ಬಿ. ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

ರಾಜಕೀಯಕ್ಕೆ ಅಭಿವೃದ್ಧಿಯ ಭಾಷೆ ಕೊಟ್ಟ ನೆಹರೂ
"ತಮ್ಮ ರಾಜಕೀಯ ಬದುಕಿನುದ್ದಕ್ಕೂ ಸಾಂಪ್ರದಾಯಿಕ ಶಕ್ತಿಗಳು, ವಿಚ್ಛಿದ್ರಕಾರಿ ಧೋರಣೆ ಮತ್ತು ಕೋಮುವಾದಿ ಭಾವನೆಗಳ ವಿರುದ್ಧದ ಖಚಿತ ನಿಲುವಿನ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಗಟ್ಟಿ ಅಡಿಪಾಯ ಹಾಕಿದ್ದ ಪಂಡಿತ ಜವಾಹರಲಾಲ ನೆಹರು ಅವರ ಚಿಂತನೆ ಈ ಕಾಲಕ್ಕೆ ಅಗತ್ಯವಾದ ಆದರ್ಶ. ಆಧುನಿಕ ಶಿಕ್ಷಣ, ಪ್ರಗತಿಪರ ಆಲೋಚನೆ ಮತ್ತು ಪ್ರಯೋಗಶೀಲತೆಯ ಮೂಲಕ ಭಾರತದ ರಾಜಕೀಯಕ್ಕೆ ಅಭಿವೃದ್ಧಿಯ ಭಾಷೆಯನ್ನು ಕೊಟ್ಟ ಪಂಡಿತ ಜವಾಹರಲಾಲ ನೆಹರೂ ಅವರನ್ನು ಅವರ ಜನ್ಮದಿನದಂದು ಗೌರವದಿಂದ ನೆನೆಯೋಣ."- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಸಂತೋಷದ ಜೀವನ ನಿಮ್ಮದಾಗಲಿ
"ಎಲ್ಲಾ ಮಕ್ಕಳಿಗೂ ಮಕ್ಕಳ ದಿನದ ಶುಭಾಶಯಗಳು. ಸಂತೋಷದ ಜೀವನ ನಿಮ್ಮದಾಗಲಿ" -ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ

ವಿಧೇಯ ಹಾರೈಕೆ
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ವಿಧೇಯ ಹಾರೈಕೆಗಳು. ಅತ್ಯುತ್ತಮ ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ, ಆಧುನಿಕ ಭಾರತದ ಶಿಲ್ಪಿ, ಭಾರತದ ಪ್ರಗತಿಗೆ ಅಡಿಪಾಯ ಹಾಕಿಕೊಟ್ಟ ಅವರಿಗೆ ಶುಭಾಶಯಗಳು - ಡಿಕೆ ಶಿವಕುಮಾರ್ , ಮಾಜಿ ಸಚಿವ, ಶಾಸಕ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications