ಮೋದಿ 3.0 ಸರ್ಕಾರ: ಲೋಕಸಭೆ ಸ್ಪೀಕರ್ ಹುದ್ದೆ ಯಾರ ಪಾಲು?

ನವದೆಹಲಿ, ಜೂನ್ 10: ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಿದೆ. ನರೇಂದ್ರ ಮೋದಿ ಭಾನುವಾರ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಈಗ ಪ್ರಶ್ನೆ ಎದ್ದಿರುವುದು ಲೋಕಸಭೆ ಸ್ಪೀಕರ್ ಸ್ಥಾನ ಯಾರಿಗೆ? ಎಂದು. ಆಡಳಿತ ಪಕ್ಷ ಯಾವಾಗಲೂ ಸ್ಪೀಕರ್ ಸ್ಥಾನವನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತದೆ. ಆದರೆ, ಬಿಜೆಪಿಯ ಮಿತ್ರ ಪಕ್ಷಗಳಾದ ಟಿಡಿಪಿ, ಜೆಡಿಯು ಪ್ರಭಾವಿ ಖಾತೆಗಳ ಜೊತೆ ಸ್ಪೀಕರ್ ಸ್ಥಾನವನ್ನು ಕೇಳಿವೆ.

NDA Government Who Gets Lok Sabha Speaker Post

ನರೇಂದ್ರ ಮೋದಿ 3.0 ಸಂಪುಟದಲ್ಲಿ ಟಿಡಿಪಿ ಮತ್ತು ಜೆಡಿಯುಗೆ ತಲಾ ಎರಡು ಸಚಿವ ಸ್ಥಾನ ನೀಡಲಾಗಿದೆ. ಅದರಲ್ಲಿಒಂದು ಸಂಪುಟ ದರ್ಜೆ ಮತ್ತೊಂದು ರಾಜ್ಯ ಖಾತೆ. ಆದರೆ ಲೋಕಸಭೆ ಸ್ಪೀಕರ್‌ನಂತಹ ಮಹತ್ವದ ಹುದ್ದೆ ಯಾರಿಗೆ? ಎಂಬ ಚರ್ಚೆ ಸಾಗಿದೆ.

ನಿಯಮಗಳು ಹೇಳುವುದೇನು?: ಎನ್‌ಡಿಎ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಟಿಡಿಪಿ ಮತ್ತು ಜೆಡಿಯು ಲೋಕಸಭೆ ಸ್ಪೀಕರ್ ಸ್ಥಾನದ ಮೇಲೆ ಕಣ್ಣಿಟ್ಟಿವೆ. ಆದರೆ ಬಿಜೆಪಿ ಮೂಲಗಳ ಮಾಹಿತಿ ಪ್ರಕಾರ ಸ್ಪೀಕರ್ ಹುದ್ದೆ ಪಕ್ಷದಲ್ಲೇ ಉಳಿಯಲಿದೆ.

ಕಾನೂನಿನ ಪ್ರಕಾರ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಸ್ಪೀಕರ್ ಹುದ್ದೆ ಖಾಲಿಯಾಗುತ್ತದೆ. ಹೊಸ ಸಂಸದರು ಪ್ರಮಾಣ ವಚನ ಸ್ವೀಕಾರ ಮಾಡಲು ಅನುಕೂಲವಾಗುವಂತೆ ರಾಷ್ಟ್ರಪತಿಗಳು ಲೋಕಸಭೆಯ ಹಿರಿಯ ಸದಸ್ಯರನ್ನು ಆಯ್ಕೆ ಮಾಡಿ, ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ಆಯ್ಕೆ ಮಾಡಿ ಪ್ರಮಾಣ ವಚನ ಬೋಧಿಸುತ್ತಾರೆ.

ನೂತನ ಸಂಸದರ ಪ್ರಮಾಣ ವಚನ ಪೂರ್ಣಗೊಂಡ ಬಳಿಕ ಲೋಕಸಭೆಯ ಸದಸ್ಯರು ಹೊಸ ಸ್ಪೀಕರ್‌ ಆಯ್ಕೆಯನ್ನು ಮಾಡಬೇಕಿದೆ. ಸದನದಲ್ಲಿ ಬಹುಮತ ಹೊಂದಿರುವ ಪಕ್ಷ ಸಹಜವಾಗಿ ಸ್ಪೀಕರ್‌ ಹುದ್ದೆಗೆ ತಮ್ಮಲ್ಲಿ ಒಬ್ಬರನ್ನು ಆಯ್ಕೆ ಮಾಡಲಿದೆ.

ಸ್ಪೀಕರ್‌ ಆಗಲು ಇಂತಹ ಅರ್ಹತೆಗಳು ಎಂದೇನಿಲ್ಲ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಕುರಿತು ಜ್ಞಾನ ಹೊಂದಿರುವ ಯಾರನ್ನು ಬೇಕಾದರೂ ಸಹ ಸ್ಪೀಕರ್‌ ಆಗಿ ಆಯ್ಕೆ ಮಾಡಬಹುದು. ಕಳೆದ ಎರಡು ಅವಧಿಯಲ್ಲಿ ಬಿಜೆಪಿ ಸುಮಿತ್ರಾ ಮಹಾಜನ್ ಮತ್ತು ಓಂ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿತ್ತು.

ಎನ್. ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಬಿಜೆಪಿಯಿಂದ ಲೋಕಸಭೆ ಸ್ಪೀಕರ್ ಹುದ್ದೆಯನ್ನು ಕೇಳಿದ್ದಾರೆ ಎಂಬುದು ಸದ್ಯದ ಮಾಹಿತಿ ಒಂದು ವೇಳೆ ಸರ್ಕಾರವನ್ನು ಬೀಳಿಸುವ ಪರಿಸ್ಥಿತಿ ಬಂದರೆ ಆಗ ಸ್ಪೀಕರ್ ಹುದ್ದೆ ಯಾರ ಕೈಯಲ್ಲಿ ಇದೆ? ಎಂಬುದು ಬಹಳ ಮುಖ್ಯವಾಗುತ್ತದೆ.

ಪಕ್ಷಾಂತರ ನಿಷೇಧ ಕಾಯ್ದೆ, ಸದಸ್ಯರ ಅಮಾನತು ಸೇರಿದಂತೆ ಪ್ರಮುಖ ತೀರ್ಮಾನಗಳನ್ನು ಆಗ ಸ್ಪೀಕರ್ ಕೈಗೊಳ್ಳುವುದರಿಂದ ಆಡಳಿತ ಪಕ್ಷದವರೇ ಸ್ಪೀಕರ್ ಆಗಿದ್ದರೆ ಉತ್ತಮ ಎಂಬುದು ಅಭಿಪ್ರಾಯವಾಗಿದೆ. ನಿತೀಶ್ ಕುಮಾರ್ ಪ್ರಮುಖ ಖಾತೆಗಳ ಜೊತೆ ಸ್ಪೀಕರ್‌ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ.

ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಎನ್‌ಡಿಎ ಸರ್ಕಾರ ರಚನೆಗೆ ಕಾರಣವಾದ ಪ್ರಮುಖ ಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಬೇಡಿಕೆ ಇಡಬೇಕು ಎಂದು ಹೇಳಿದ್ದಾರೆ. 'ಎನ್‌ಡಿಎ ಮೈತ್ರಿಕೂಟದ ಮಿತ್ರ ಪಕ್ಷಗಳಿಗೆ ನನ್ನ ವಿನಮ್ರ ಸಹಲೆ ಸ್ಪೀಕರ್ ಸ್ಥಾನವನ್ನು ನೀವು ಪಡೆಯಿರಿ' ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

'ಬಿಜೆಪಿಯ ತಂತ್ರಗಳನ್ನು ನಾವು ಚೆನ್ನಾಗಿ ಬಲ್ಲೆವು. ಅವರು ನಿಮ್ಮ ಜೊತೆ ಸೇರಿ ಸರ್ಕಾರ ರಚನೆ ಮಾಡುತ್ತಾರೆ. ಬಳಿಕ ನಿಮಗೆ ನೀಡಿದ ಭವರಸೆಗಳನ್ನು ಮರೆತು, ನಿಮ್ಮನ್ನು ಮುಗಿಸಲು ಪ್ರಯತ್ನ ನಡೆಸುತ್ತಾರೆ' ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳನ್ನು ಹೊಂದಿದೆ. ಇವುಗಳಲ್ಲಿ ಬಿಜೆಪಿ ಸಂಸದರು 240. ಜೆಡಿಯು 12 ಮತ್ತು ಟಿಡಿಪಿ 16 ಸಂಸದರನ್ನು ಹೊಂದಿದ್ದು, ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+