ಕೈ-ಕಮಲದ ನಡುವೆ ಸೂಟು ಬೂಟಿಗೆ ಕಿತ್ತಾಟ
ನವದೆಹಲಿ, ಮೇ 12: 'ಕಳ್ಳರು ದರೋಡೆಕೋರರು ಎಲ್ಲೂ ಇಲ್ಲ. ಇಲ್ಲಿಯೇ ಸೂಟು-ಬೂಟು ಹಾಕಿಕೊಂಡು ಓಡಾಡುತ್ತಿದ್ದಾರೆ. ರೈತರ ಭೂಮಿ ಕಬಳಿಸಲು ಹುನ್ನಾರ ನಡೆಸಿದ್ದಾರೆ' ಇದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪ.
'ಸೂಟು ಬೂಟು ಧರಿಸೋದು ನಾವಲ್ಲ ನಿಮ್ಮ ಜೀಜಾಜಿ(ರಾಬರ್ಟ್ ವಾದ್ರಾ), ಮೊದಲು ಅದನ್ನು ತಿಳಿದುಕೊಂಡು ಮಾತನಾಡಿ' ಇದು ಬಿಜೆಪಿಯ ಸಂಸದ ದಿಲೀಪ್ ಸಿಂಗ್ ಭೂರಿಯಾ ಉತ್ತರ. ಈ ಬೆಳವಣಿಗೆಗಳು ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ್ದವು.[ಟ್ವಿಟ್ಟರ್ ಹಕ್ಕಿ ಹಿಂದೆ ಬಿದ್ದ ರಾಹುಲ್ ಗಾಂಧಿ]

ಮಂಗಳವಾರ ಲೋಕಸಭೆ ಬಿಜೆಪಿ ಕಾಂಗ್ರೆಸ್ ನಡುವಿನ ಸೂಟು-ಬೂಟಿನ ಕಿತ್ತಾಟ ನಡೆಯಿತು. ಲೋಕಸಭೆಯಲ್ಲಿ ಮಾತನಾಡಿದ ಎನ್ ಡಿ ಎ ಸರ್ಕಾರ ಹಿಂದಿನ ಯುಪಿಎ ಸರ್ಕಾರ ಪಾಸ್ ಮಾಡಿದ್ದ ಲ್ಯಾಂಡ್ ಬಿಲ್ ನ್ನು ಸಾಯಿಸಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಲೋಕಸಭೆಯಲ್ಲಿ ಭೂಸ್ವಾಧೀನ ಮಸೂದೆ ಮೇಲೆ ಮಾತನಾಡಿದ ರಾಹುಲ್ ಗಾಂಧಿ, ಭೂಸ್ವಾಧೀನ ಮಸೂದೆಯನ್ನು ಹತ್ತು ಹಲವು ಬಗೆಯಲ್ಲಿ ಚರ್ಚಿಸಿ ಜಾರಿಗೆ ಮುಂದಾಗಿದ್ದೇವು. ಆದರೆ ಎನ್ ಡಿಎ ಸರ್ಕಾರ ತರಾತುರಿಯಲ್ಲಿ ಕಾಯ್ದೆ ಅನುಷ್ಠಾನ ಮಾಡಲು ಹೊರಟಿರುವುದು ಯಾಕೆ? ಎಂದು ಪ್ರಶ್ನೆ ಮಾಡಿದರು.[ಸನ್ಯಾಸಿಯಾಗ ಬೇಕಿದ್ದ ಮೋದಿಯನ್ನು ಅಂದು ತಡೆದವರಾರು?]
ಕೇಂದ್ರ ಸರ್ಕಾರ ಬಡವರ ಭೂಮಿ ಕಿತ್ತುಕೊಳ್ಳಲು ಮುಂದಾಗಿದೆ. ಕಳ್ಳರು ಸೂಟು ಬೂಟು ಹಾಕಿಕೊಂಡು ಓಡಾಡುತ್ತಿದ್ದಾರೆ. ಕಾರ್ಪೋರೇಟ್ ವಲಯಕ್ಕೆ ಅನುಕೂಲ ಮಾಡಲು ಕೇಂದ್ರ ಸರ್ಕಾರ ರೂತರ ಭೂಮಿ ಕಿತ್ತಿಕೊಳ್ಳುತ್ತಿದೆ. ಮಸೂದೆಗೆ ನಮ್ಮ ವಿರೋಧ ಎಂದಿಗೂ ಇದ್ದೇ ಇದೆ. ರೂತರ ಹಕ್ಕು ಕಸಿದುಕೊಳ್ಳಲು ಪಕ್ಷ ಬಿಡುವಿದಿಲ್ಲ ಎಂದು ಹೇಳಿದರು.












Click it and Unblock the Notifications