Narendra Modi: ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವ ಮಹಾರಾಷ್ಟ್ರದಲ್ಲಿ ಕೊನೆಯಾಗಿದೆ ಮೋದಿ ಅಲೆ! ಸಾಕ್ಷಿ ಇಲ್ಲಿದೆ
ಮುಂಬೈ, ಜೂನ್. 06: ಲೋಕಸಭೆ ಚುನಾವಣೆ 2024ರಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಬಹುಮತವನ್ನು ಪಡೆದುಕೊಂಡಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಲು ಸಿದ್ಧರಾಗಿದ್ದರೂ ಕೂಡ ಯಾರ ಮುಖದಲ್ಲಿಯೂ ಗೆಲುವಿನ ಖುಷಿಯಿಲ್ಲ. ಅದಕ್ಕೆ ಕಾರಣ ಅತಿ ಹೆಚ್ಚು ಸ್ಥಾನ ಗೆಲ್ಲುವ ಅವರ ಅತೀ ಆತ್ಮವಿಶ್ವಾಸಕ್ಕೆ ಬಿದ್ದಿರುವ ಪೆಟ್ಟು.
ಮಹಾರಾಷ್ಟ್ರದಲ್ಲಿ ಬಿಜೆಪಿಯ ನೀರಸ ಪ್ರದರ್ಶನ ನೀಡಿದೆ. 2019 ರ ಚುನಾವಣೆಯಲ್ಲಿ 23 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ರಾಜ್ಯದಲ್ಲಿ ಕೇವಲ 9 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಇದೊಂದು ದೊಡ್ಡ ಹೊಡೆತ!. ಇನ್ನು, ಪ್ರಧಾನಿ ಮೋದಿ ಪ್ರಚಾರ ನಡೆಸಿದ ಬಹುತೇಕ ಸ್ಥಾನಗಳಲ್ಲಿ ಎನ್‌ಡಿಎ ಸೋಲು ಕಂಡಿದೆ ಎಂದು ಚುನಾವಣಾ ಆಯೋಗದ (ಇಸಿ) ಅಂಕಿಅಂಶಗಳು ತೋರಿಸಿವೆ. ಪ್ರಧಾನಿ ಮೋದಿ ಅವರು ಮಹಾರಾಷ್ಟ್ರದ 18 ಲೋಕಸಭಾ ಕ್ಷೇತ್ರಗಳಲ್ಲಿ ಅನೇಕ ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋ ನಡೆಸಿದರು. ಅದರಲ್ಲಿ 15 ಸ್ಥಾನಗಳಲ್ಲಿ ಸೋತಿದೆ.

ಮಹಾರಾಷ್ಟ್ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಫಲಿತಾಂಶ
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಆರು ಲೋಕಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿದರು. ಆದರೆ ಮೈತ್ರಿಕೂಟ ಕೇವಲ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯ ಪಿಯೂಷ್ ಗೋಯಲ್ ಮುಂಬೈ ಉತ್ತರದಿಂದ ಗೆದ್ದರೆ, ರವೀಂದ್ರ ವೈಕರ್ ಮುಂಬೈ ವಾಯುವ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಮುಂಬೈ ಈಶಾನ್ಯ ಲೋಕಸಭಾ ಕ್ಷೇತ್ರದ ಘಾಟ್‌ಕೋಪರ್ ಪ್ರದೇಶದಲ್ಲಿ ಪ್ರಧಾನಿ ರೋಡ್‌ಶೋ ನಡೆಸಿದರು. ಆದರೆ ಇಲ್ಲಿ ಬಿಜೆಪಿ ಅಭ್ಯರ್ಥಿ ಮಿಹಿರ್ ಕೋಟೆಚಾ ಅವರನ್ನು ಶಿವಸೇನಾ (ಯುಬಿಟಿ) ಅಭ್ಯರ್ಥಿ ಸಂಜಯ್ ದಿನಾ ಪಾಟೀಲ್ 29,861 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಪುಣೆ: ಬಿಜೆಪಿ ಅಭ್ಯರ್ಥಿ ಮುರಳೀಧರ್ ಮೊಹೋಲ್‌ಗೆ ಮತ ಯಾಚಿಸಿ ಪುಣೆಯಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆ ನಡೆಸಿದರು. ಇಲ್ಲಿ ಮೊಹೋಲ್ ಅವರು ಕಾಂಗ್ರೆಸ್ ನ ರವೀಂದ್ರ ಧಂಗೇಕರ್ ಅವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ.
ನಾಸಿಕ್: ಪ್ರಧಾನಿ ಮೋದಿ ಶಿವಸೇನಾ (ಶಿಂಧೆ ಗುಂಪು) ಅಭ್ಯರ್ಥಿ ಹೇಮಂತ್ ಗೋಡ್ಸೆ ಪರ ಪ್ರಚಾರ ನಡೆಸಿದರು. ಆದಾಗ್ಯೂ, ಶಿವಸೇನಾ (ಯುಬಿಟಿ) ಅಭ್ಯರ್ಥಿ ರಾಜಭಾವು ವಾಜೆ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ದಾಖಲಿಸಿದ್ದಾರೆ.
ನಾಂದೇಡ್: ಹಾಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೋವಿಂದರಾವ್ ಚಿಖಾಲಿಕರ್ ಪಾಟೀಲ್ ಪರವಾಗಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಆದರೆ ಇಲ್ಲಿ ಮೋದಿ ಮ್ಯಾಜಿಕ್ ನಡೆಯದೆ ಕಾಂಗ್ರೆಸ್‌ನ ವಸಂತರಾವ್ ಬಲವಂತರಾವ್ ಚವ್ಹಾಣ ಗೆಲುವು ಕಂಡಿದ್ದಾರೆ.
ಚಂದ್ರಾಪುರ: ಚಂದ್ರಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಸುಧೀರ್ ಮುಂಗಂಟಿವಾರ್ ಪರವಾಗಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆ ನಡೆಸಿದರು. ಆದರೆ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಸೋತಿದ್ದಾರೆ. ಇಲ್ಲಿಂದ ಕಾಂಗ್ರೆಸ್‌ನ ಪ್ರತಿಭಾ ಧನೋರ್ಕರ್ ಆಯ್ಕೆಯಾಗಿದ್ದಾರೆ. ಅವರು 7,18, 410 ಮತಗಳನ್ನು ಪಡೆದರೆ, ಸುಧೀರ್ ಮುಂಗಂತಿವಾರ್ ಅವರು ಕೇವಲ 4,58, 004 ಮತಗಳನ್ನು ಪಡೆದಿದ್ದಾರೆ.
ರಾಮ್‌ಟೆಕ್: ಪ್ರಧಾನಿ ಮೋದಿ ಅವರು ಶಿವಸೇನೆಯ ರಾಜು ದೇವನಾಥ್ ಪರ್ವೆ ಪರವಾಗಿ ರಾಮ್‌ಟೆಕ್‌ನಲ್ಲಿ ಸಾರ್ವಜನಿಕ ಸಭೆ ನಡೆಸಿದರು, ಆದರೆ ಅವರು ಕಾಂಗ್ರೆಸ್‌ನ ಶ್ಯಾಮ್ ಕುಮಾರ್ ಬರ್ವೆ ಅವರಿಂದ ಸೋತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 6,13,025 ಮತಗಳನ್ನು ಪಡೆದರೆ, ರಾಜು ಪರವೆ 5,36,257 ಮತಗಳನ್ನು ಪಡೆದಿದ್ದಾರೆ.
ವಾರ್ಧಾ: ಬಿಜೆಪಿ ಅಭ್ಯರ್ಥಿ ರಾಮದಾಸ್ ತಡಸ್ ಪರವಾಗಿ ಮತ ಯಾಚಿಸಿ ಪ್ರಧಾನಿ ಮೋದಿ ವಾರ್ಧಾಗೆ ತೆರಳಿದರು. ಆದರೆ, ತಡಸ್ ಅವರನ್ನು ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿ ಅಮರ್ ಕಾಳೆ ಸೋಲಿಸಿದರು. ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿ 5, 33,106 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರೆ, ತಡಸ್ ಕೇವಲ 4, 51, 458 ಮತಗಳನ್ನು ಪಡೆದಿದ್ದಾರೆ.
ಪರ್ಭಾನಿ: ಪ್ರಧಾನಿ ಮೋದಿ ಪರ್ಭಾನಿಯಲ್ಲಿ ಪ್ರಚಾರ ಮಾಡಿದ್ದರು. ಆದರೆ, ಶಿವಸೇನಾ (ಯುಬಿಟಿ) ಅಭ್ಯರ್ಥಿ ಸಂಜಯ್ (ಬಂದು) ಜಾಧವ್ ಭಾರಿ ಅಂತರದಿಂದ ಆಯ್ಕೆಯಾದರು. ಅವರು ಆರ್‌ಎಸ್‌ಪಿಯ ಮಹದೇವ್ ಜಾಂಕರ್ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.
ಕೊಲ್ಲಾಪುರ: ಹಾಲಿ ಸಂಸದ ಮತ್ತು ಶಿವಸೇನಾ (ಶಿಂಧೆ ಬಣ) ಅಭ್ಯರ್ಥಿ ಸಂಜಯ್ ಮಾಂಡ್ಲಿಕ್‌ಗಾಗಿ ಪ್ರಧಾನಿ ಮೋದಿ ಏಪ್ರಿಲ್ 27 ರಂದು ಕೊಲ್ಲಾಪುರದಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಅವರು ಕಾಂಗ್ರೆಸ್‌ನ ಶಾಹು ಮಹಾರಾಜ್ ಛತ್ರಪತಿ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಸೋಲಾಪುರ: ಬಿಜೆಪಿ ಅಭ್ಯರ್ಥಿ ರಾಮ್ ಸತ್ಪುತೆ ಅವರ ಪರವಾಗಿ ಪ್ರಧಾನಿ ಮೋದಿ ಸೋಲಾಪುರದಲ್ಲಿ ಪ್ರಚಾರ ನಡೆಸಿದ್ದರು. ಆದರೆ ಅವರನ್ನು ಕಾಂಗ್ರೆಸ್‌ನ ಪ್ರಣಿತಿ ಶಿಂಧೆ ಸೋಲಿಸಿದ್ದಾರೆ. ಅವರು 6,20,225 ಮತಗಳನ್ನು ಪಡೆದರೆ, ರಾಮ್ ಸತ್ಪುಟೆ ಅವರು 5,46,028 ಮತಗಳನ್ನು ಪಡೆದಿದ್ದಾರೆ.
ಸತಾರಾ: ಸತಾರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕರಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಉದಯನರಾಜೆ ಭೋಸಲೆ ಪರ ಪ್ರಧಾನಿ ಮೋದಿ ಸಾರ್ವಜನಿಕ ಸಭೆ ನಡೆಸಿದರು. ಇಲ್ಲಿ ಬಿಜೆಪಿ ಅಭ್ಯರ್ಥಿ ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿ ಶಶಿಕಾಂತ್ ಶಿಂಧೆ ಅವರನ್ನು ಸೋಲಿಸಿದ್ದಾರೆ.
ಮಾಧ: ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿ ಧರಿಶೀಲ್ ಮೋಹಿತೆ ಪಾಟೀಲ್ ಅವರಿ ಬಿಜೆಪಿ ಅಭ್ಯರ್ಥಿಯನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಂಜಿತ್‌ಸಿನ್ಹ ನಾಯ್ಕ್ ನಿಂಬಾಳ್ಕರ್‌ಗಾಗಿ ಮಾಧಾ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆ ನಡೆಸಿದ್ದರು.
ಧಾರಶಿವ್: ಶಿವಸೇನಾ (ಯುಬಿಟಿ) ಅಭ್ಯರ್ಥಿ ಓಂರಾಜ್ ನಿಂಬಾಳ್ಕರ್ ಅವರು ಎನ್‌ಸಿಪಿ (ಅಜಿತ್ ಪವಾರ್) ಪಕ್ಷದ ಅಭ್ಯರ್ಥಿ ಅರ್ಚನಾ ಪಾಟೀಲ್ ಅವರನ್ನು ಸೋಲಿಸಿದ್ದಾರೆ. ಅವರ ಪರವಾಗಿ ಪ್ರಧಾನಿ ಮೋದಿ ಧಾರಾಶಿವ್ (ಒಸ್ಮಾನಾಬಾದ್)ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.
ಲಾತೂರ್: ಬಿಜೆಪಿ ಅಭ್ಯರ್ಥಿ ಸುಧಾಕರ ಶೃಂಗಾರೆ ಪ ಪ್ರಧಾನಿ ಮೋದಿ ಕೂಡ ಲಾತೂರ್‌ನಲ್ಲಿ ಪ್ರಚಾರ ಮಾಡಿದ್ದರು. ಆದರೆ ಅವರು ಕಾಂಗ್ರೆಸ್‌ನ ಶಿವಾಜಿ ಕಾಲ್ಗೆ ವಿರುದ್ಧ 61,881 ಮತಗಳಿಂದ ಪರಾಭವಗೊಂಡಿದ್ದಾರೆ.
ಅಹಮದ್‌ನಗರ - ಬಿಜೆಪಿ ಅಭ್ಯರ್ಥಿ ಸುಜಯ್ ವಿಖೆಗಾಗಿ ಪ್ರಧಾನಿ ಮೋದಿ ಅಹ್ಮದ್‌ನಗರದಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಆದರೆ ಸುಜಯ್ ವಿಖೆ ಅವರನ್ನು ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿ ನೀಲೇಶ್ ಲಂಕಾ 28,929 ಮತಗಳಿಂದ ಸೋಲಿಸಿದ್ದಾರೆ.
ಬೀಡದ- ಬಿಜೆಪಿಯ ಬೀಡು ಕ್ಷೇತ್ರದ ಅಭ್ಯರ್ಥಿ ಪಂಕಜಾ ಮುಂಡೆ ಪರ ಪ್ರಧಾನಿ ಮೋದಿ ಸಾರ್ವಜನಿಕ ಸಭೆ ನಡೆಸಿದರು. ಆದರೆ ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿ ಬಜರಂಗ್ ಸೋನಾವಾನೆ ಅವರನ್ನು 6,553 ಮತಗಳ ತೆಳುವಾದ ಅಂತರದಿಂದ ಸೋಲಿಸಿದ್ದಾರೆ.
ನಂದೂರ್‌ಬಾರ್ - ಬಿಜೆಪಿ ಅಭ್ಯರ್ಥಿ ಹಿನಾ ಗವಿತ್‌ಗೆ ಮತ ಯಾಚಿಸಿ ಪ್ರಧಾನಿ ಮೋದಿ ನಂದೂರ್‌ಬಾರ್‌ಗೆ ತೆರಳಿದರು. ಆದರೆ ಅವರು ಕಾಂಗ್ರೆಸ್‌ನ ಗೋವಲ್ ಪದ್ವಿ ಅವರಿಂದ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ.
ಕಲ್ಯಾಣ್: ಕಲ್ಯಾಣ್‌ನಲ್ಲಿ ಶಿವಸೇನಾ (ಶಿಂಧೆ ಗುಂಪು) ಅಭ್ಯರ್ಥಿ ಶ್ರೀಕಾಂತ್ ಶಿಂಧೆಗಾಗಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆ ನಡೆಸಿದರು, ಅವರು ಎರಡು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಅವರು ಶಿವಸೇನಾ (ಯುಬಿಟಿ) ಅಭ್ಯರ್ಥಿ ವೈಶಾಲಿ ದಾರೆಕರ್ ಅವರನ್ನು ಸೋಲಿಸಿದ್ದಾರೆ..
ದಿಂಡೋರಿ: ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ರಾಜ್ಯ ಸಚಿವ ಭಾರತಿ ಪವಾರ್ ಅವರಿಗೆ ಮತ ಯಾಚಿಸಿ ಪ್ರಧಾನಿ ಮೋದಿ ದಿಂಡೋರಿಗೆ ತೆರಳಿದರು. ಆದರೆ ಅವರನ್ನು ಎನ್‌ಸಿಪಿ (ಎಸ್‌ಪಿ) ನಾಯಕ ಭಾಸ್ಕರ್ ಭಾಗೆ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.
(ಮಾಹಿತಿ ಕೃಪೆ: ಇಂಡಿಯಾ ಟುಡೇ)
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications