NCLAT ಆದೇಶದಿಂದ ಸಂಕಷ್ಟದಲ್ಲಿದ್ದ ಗೋಫಸ್ಟ್ ಸಂಸ್ಥೆಗೆ ರಿಲೀಫ್, ಏನಿದು?

ನವದೆಹಲಿ, ಮೇ 22: ಆರ್ಥಿಕ ಬಿಕ್ಕಟ್ಟು ಸಮಸ್ಯೆ ಎದುರಿಸುತ್ತಿದ್ದ ಏರ್‌ಲೈನ್ಸ್‌ಗೋ ಫಸ್ಟ್ ಸಂಸ್ಥೆಗೆ ತುಸು ರಿಲೀಫ್ ಸಿಕ್ಕಿದೆ. ವಿಮಾನ ಪೂರೈಕಾ ಸಂಸ್ಥೆಗಳು ಸಲ್ಲಿಸಿದ್ದ ಇನ್ಸಾಲ್ವೆನ್ಸಿ ಅರ್ಜಿ ಸ್ವೀಕರಿಸಿದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT)ಯು ರಾಷ್ಟ್ರೀಯ ಮೇಲ್ಮನವಿ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಆದೇಶವನ್ನು ಎತ್ತಿಹಿಡಿದಿದೆ.

ಗೋಫಸ್ಟ್ ಏರ್​ಲೈನ್ಸ್ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿದ್ದಂತೆ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತು. ಇದೆಲ್ಲದರ ಕುರಿತು ಏರ್‌ಲೈನ್ಸ್ಗೆ ವಿಮಾನಗಳನ್ನು ಗುತ್ತಿಗೆಯಾಗಿ ನೀಡಿರುವ ಕಾನೂನು ನ್ಯಾಯಮಂಡಳಿ (NCLT)ಗೆ ಮೇಲ್ಮನವಿ ಸಲ್ಲಿಸಿದ್ದವು. ಈ ವೇಳೆ ಕಾನೂನು ನ್ಯಾಯಮಂಡಿ ನೀಡಿರುವ ಆದೇಶವನ್ನೇ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಒಪ್ಪಿದೆ. ಗೋ ಫಸ್ಟ್ ಸಂಸ್ಥೆಗೆ ವಿಮಾನ ಗುತ್ತಿಗೆ ನೀಡಿರುವ ಮಾಲೀಕರು NCLAT ಸೂಕ್ತ ಅರ್ಜಿಯನ್ನು ಸಲ್ಲಿಸಬಹುದು ಎಂದು ತಿಳಿಸಿದೆ.

GoFirst Gets Relief

ಈ ಆದೇಶದಿಂದಾಗಿ ಏರ್‌ಲೈನ್ ಸಂಸ್ಥೆಗೆ ನೀಡಿದ್ದ ತಮ್ಮ ವಿಮಾನಗಳನ್ನು ಮರು ಸ್ವಾಧೀನಪಡಿಸಿಕೊಳ್ಳಲು ಧಾವಿಸಿದ ವಿಮಾನ ಗುತ್ತಿಗೆದಾರರ ಕಂಪನಿಗಳಿಗೆ ಹಿನ್ನಡೆ ಆದಂತಾಗಿದೆ.

ಅರ್ಜಿ ಸಲ್ಲಿಸಿದ್ದ ವಿಮಾನ ಪೂರೈಕಾ ಕಂಪನಿಗಳು ಅರ್ಜಿಯಲ್ಲಿ ಗೋ ಫಸ್ಟ್ ಸಂಸ್ಥೆ ತನ್ನದಲ್ಲದ ವಿಮಾನಗಳನ್ನು ಇಟ್ಟುಕೊಳ್ಳುತ್ತಿದೆ ಎಂದು ಆರೋಪಿಸಿದ್ದವು. ಸಂಸ್ಥೆ ಇಟ್ಟುಕೊಳ್ಳಲು ಬಯಸುವ ವಿಮಾನಗಳು ತಮ್ಮವೆಂದು ಹೇಳಿದ್ದವು. 26 ವಿಮಾನಗಳ ಹಾರಾಟ ಇದ್ದರೂ ಸಹಿತ ಮುಂಗಡವಾಗಿ ವಿಮಾನದ ಟಿಕೆಟ್​ಗಳನ್ನು ಕಾಯ್ದಿರಿಸಿದರೂ ಗೋ ಫಸ್ಟ್ ಸ್ವಯಂಪ್ರೇರಿತವಾಗಿ ಇನ್ಸಾಲ್ವೆನ್ಸಿ ಅರ್ಜಿ ಹಾಕುವ ಅವಶ್ಯಕತೆ ಏನಿತ್ತು ಎಂದು ನ್ಯಾಯಮಂಡಳಿ ಪ್ರಶ್ನಿಸಿತು.

700-800 ಕೋಟಿ ರೂ. ಬಾಕಿ ಉಳಿಸಿಕೊಂಡ ಏರ್‌ಲೈನ್ಸ್

ಕಂನಿಗಳಿಂದ ವಿಮಾನಗಳನ್ನು ಗುತ್ತಿಗೆ ಪಡೆದ ಗೋ ಫಸ್ಟ್ ಏರ್​ಲೈನ್ಸ್ ಸಂಸ್ಥೆ ತನಗೆ 700-800 ಕೋಟಿ ರೂ ಹಣ ನೀಡುವುದನ್ನು ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ನಾವು ಮೇಲ್ಮನವಿ ಮೂಲಕ ಪ್ರಶ್ನಿಸಿದ್ದೇವೆ. ಹೀಗಿದ್ದರು. ವಾಸ್ತವ ಪರಿಸ್ಥಿತಿಯನ್ನು ಅಂದಾಜಿಸದೆಯೇ, ಗೋಫಸ್ಟ್​ನ ಇನ್ಸಾಲ್ವೆನ್ಸಿ ಅರ್ಜಿಯನ್ನೇ ಒಪ್ಪಿಕೊಂಡಿತು ಎಂದು ಗುತ್ತಿಗಾರ ಸಂಸ್ಥೆಯಾದ ಎಸ್​ಎಂಬಿಸಿ ಏವಿಯೇಶನ್ ಸಂಸ್ಥೆ ಬೇಸರ ವ್ಯಕ್ತಪಡಿಸಿದೆ.

GoFirst Gets Relief

ಏರ್‌ಲೈನ್ಸ್ ಗೋ ಫಸ್ಟ್ ಸಲ್ಲಿಸಿದ್ದ ಅರ್ಜಿ ಸ್ವೀಕಸಿದ NCLT ಮೇ 10ರಂದು ಆದೇಶ ನೀಡಿತ್ತು. ಅದರಲ್ಲಿ ಗೋಫಸ್ಟ್​ನ ವಿಮಾನಗಳ ಮಾಲೀಕರು 6 ತಿಂಗಳು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿತ್ತು. ಗೋಫಸ್ಟ್​ಗೆ ಅತಿಹೆಚ್ಚು ವಿಮಾನಗಳನ್ನು ಲೀಸ್​ಗೆ ನೀಡಿರುವ ಐರ್ಲೆಂಡ್ ಮೂಲದ ಎಸ್​ಎಂಬಿಸಿ ಏವಿಯೇಷನ್ ಕ್ಯಾಪಿಟಲ್ ವಿಶ್ವದ ಅತಿದೊಡ್ಡ ವಿಮಾನ ಗುತ್ತಿಗೆದಾರ ಸಂಸ್ಥೆಯಾಗಿದೆ. ಎನ್​ಸಿಎಲ್​ಟಿ ಆದೇಶ ಬರುವ ಮುನ್ನವೇ ತಾವು ಗೋಫಸ್ಟ್​ಗೆ ನೀಡಿದ್ದ ಲೀಸ್ ಒಪ್ಪಂದವನ್ನು ಕಡಿತಗೊಳಿಸಿದೆ. ಹೀಗಾಗಿ ನೀಡಲಾದ ವಿಮಾನಗಳನ್ನು ಸಂಸ್ಥೆ ಇಟ್ಟುಕೊಳ್ಳುವಂತಿಲ್ಲ ಎಂದು ಕಂಪನಿ ಪ್ರತಿಪಾದಿಸಿದೆ.

ಸದ್ಯ ಮೇಲ್ಮನವಿ ಮೂಲಕ ವಿಚಾರಣೆ ನಡೆಸಿದ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಲಿಯು (NCLAT) ವಿಮಾನ ಮಾಲೀಕ ಸಂಸ್ಥೆಗಳಿಗೆ ಎನ್​ಸಿಎಲ್​ಟಿ ಬಳಿಕ ಬೇರೊಂದು ಸೂಕ್ತ ಅರ್ಜಿ ಸಲ್ಲಿಸಿ ತಮ್ಮ ದೂರು ದಾಖಲಿಸುವಂತೆ ಹೇಲಿದೆ. ಇದರಿಂದಾಗಿ ಏರ್‌ಲೈನ್ಸ್‌ಗೆ ಸದ್ಯ ರಿಲೀಫ್ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+