ಹತ್ತಲ್ಲ.. ಇಪ್ಪತ್ತಲ್ಲ ಬರೋಬ್ಬರಿ 300 ಕೋಟಿ ಮೌಲ್ಯದ ಡ್ರಗ್ಸ್ ವಶ, 13 ಮಂದಿಯ ಬಂಧನ
ಅಹಮದಾಬಾದ್, ಏಪ್ರಿಲ್. 28: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನೊಂದಿಗೆ 'ಆಪರೇಷನ್ ಪ್ರಯೋಗಶಾಲಾ' ಎಂಬ ಜಂಟಿ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆ ಅಂಗವಾಗಿ ಶನಿವಾರ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಮೂರು ರಹಸ್ಯ ಡ್ರಗ್ ತಯಾರಿಕಾ ಲ್ಯಾಬ್‌ಗಳನ್ನು ಭೇದಿಸಿ ಅಂದಾಜು 300 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ.
ಗುಜರಾತ್ ಮತ್ತು ರಾಜಸ್ಥಾನದಾದ್ಯಂತ ದಾಳಿ ನಡೆಸಿ 300 ಕೋಟಿ ಮೌಲ್ಯದ ಮೆಫೆಡ್ರೋನ್ ಹೊಂದಿದ್ದ ಆರೋಪದ ಮೇಲೆ 13 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಹಮದಾಬಾದ್ ನಿವಾಸಿ ಮನೋಹರಲಾಲ್ ಎನಾನಿ ಮತ್ತು ರಾಜಸ್ಥಾನದ ಕುಲದೀಪ್ ಸಿಂಗ್ ರಾಜಪುರೋಹಿತ್ ಅವರು ಮೆಫೆಡ್ರೋನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದ್ದಾರೆ ಎಂದು ಎಟಿಎಸ್ ಪಡೆದ ಸುಳಿವಿನ ನಂತರ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಎಟಿಎಸ್ 22.028 ಕಿಲೋಗ್ರಾಂಗಳಷ್ಟು ಮೆಫೆಡ್ರೋನ್ ಮತ್ತು 124 ಕಿಲೋಗ್ರಾಂಗಳಷ್ಟು ಲಿಕ್ವಿಡ್ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದೆ. ಒಟ್ಟಾರೆಯಾಗಿ 300 ಕೋಟಿ ಮೌಲ್ಯದ ಡ್ರಗ್ಸ್ ವಶವಾಗಿದೆ. ರಾಜಪುರೋಹಿತ್ ಗಾಂಧಿನಗರದಲ್ಲಿ ನಡೆದ ದಾಳಿಯ ಸಮಯದಲ್ಲಿ ಮನೋಹರಲಾಲ್ ಎನಾನಿಯನ್ನು ಬಂಧಿಸಲಾಗಿದೆ" ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜಸ್ಥಾನದ ಸಿರೋಹಿ ಮತ್ತು ಜೋಧ್‌ಪುರದಲ್ಲಿರುವ ಘಟಕಗಳು ಹಾಗೂ ಗಾಂಧಿನಗರದ ಪಿಪ್ಲಾಜ್ ಗ್ರಾಮ ಮತ್ತು ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಭಕ್ತಿನಗರ ಕೈಗಾರಿಕಾ ಪ್ರದೇಶದಲ್ಲಿನ ಘಟಕಗಳ ಮೇಲೆ ದಾಳಿ ನಡೆಸಲಾಗಿದೆ. ರಾಜಸ್ಥಾನದ ಕೈಗಾರಿಕಾ ಘಟಕದಲ್ಲಿ ಮೆಫೆಡ್ರೋನ್ ಉತ್ಪಾದನೆಯಲ್ಲಿ ತೊಡಗಿದ್ದಕ್ಕಾಗಿ 2015 ರಲ್ಲಿ ಡಿಆರ್ಐನಿಂದ ಬಂಧಿಸಲ್ಪಟ್ಟ ಮನೋಹರಲಾಲ್ ಎನಾನಿ ಏಳು ವರ್ಷಗಳ ಕಾಲ ಜೈಲಿನಲ್ಲಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
ಎಲ್ಲಾ ಆರೋಪಿಗಳು ಪರಸ್ಪರ ಸಂಪರ್ಕ ಹೊಂದಿದ್ದು, ವಲ್ಸಾದ್ ಜಿಲ್ಲೆಯ ವಾಪಿ ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಯಿಂದ ಕಚ್ಚಾ ವಸ್ತುಗಳನ್ನು ಪಡೆಯುತ್ತಿದ್ದರು. ಅವರ ಡ್ರಗ್ಸ್ ಉತ್ಪಾದನೆಯ ಅವಧಿಯನ್ನು ನಿರ್ಧರಿಸಲು ತನಿಖೆಗಳು ನಡೆಯುತ್ತಿವೆ,. ಈ ಹಿಂದೆ ಮಾಡುತ್ತಿದ್ದ ಮಾರಾಟವನ್ನೇ ಮಾಡುತ್ತಿದ್ದಾರೆಯೇ ಅಥವಾ ಸಂಪೂರ್ಣ ಕಾರ್ಯಾಚರಣೆಯಲ್ಲಿ ಬೇರೆಯವರು ಭಾಗಿಯಾಗಿರಬಹುದೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ.

ಜಲೋರ್ ಜಿಲ್ಲೆಯ ಭಿನ್ಮಲ್ ಮತ್ತು ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಓಸಿಯಾನ್‌ನಲ್ಲಿರುವ ಮೂರು ಲ್ಯಾಬ್‌ಗಳಿಂದ ಒಟ್ಟು 149 ಕೆಜಿ ಮೆಫೆಡ್ರೋನ್ ಅಥವಾ 'ಮಿಯಾಂವ್ ಮಿಯಾವ್' (ಪುಡಿ ಮತ್ತು ದ್ರವ ರೂಪದಲ್ಲಿ), 50 ಕೆಜಿ ಎಫೆಡ್ರೆನ್ ಮತ್ತು 200 ಲೀಟರ್ ಅಸಿಟೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಏಜೆನ್ಸಿಗಳ ತಂಡಗಳು ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಇದೇ ರೀತಿಯ ಪ್ರಯೋಗಾಲಯದ ಮೇಲೆ ದಾಳಿ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿಗುತ್ತಿದೆ ಎಂದು ವರದಿಯಾಗಿದೆ.












Click it and Unblock the Notifications