ರಾಷ್ಟ್ರೀಯ ಪಿಂಚಣಿ ಯೋಜನೆ ವಯೋಮಿತಿ ಏರಿಕೆ
ನವದೆಹಲಿ, ಸೆ. 12: ರಾಷ್ಟ್ರೀಯ ಪಿಂಚಣಿ ಯೋಜನೆಯ ವಯೋಮಿತಿಯನ್ನು 60ರಿಂದ 65ಕ್ಕೆ ಏರಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ಸೋಮವಾರ ಹೇಳಿದೆ.
ಸಮಾವೇಶವೊಂದರಲ್ಲಿ ಮಾತನಾಡಿದ ಪಿಎಫ್‌ಆರ್‌ಡಿಎಯ ಅಧ್ಯಕ್ಷ ಹೇಮಂತ್ ಕಾಂಟ್ರಾಕ್ಟರ್, ಈ ಬದಲಾವಣೆಗೆ ಪಿಂಚಣಿ ನಿಯಂತ್ರಣ ಮಂಡಳಿ ಈಗಾಗಲೆ ಅನುಮೋದನೆ ನೀಡಿದೆ ಹಾಗೂ ಈ ಬಗ್ಗೆ ಶೀಘ್ರದಲ್ಲಿ ಅಧಿಸೂಚನೆ ನೀಡಲಾಗುವುದು ಎಂದರು.

ಈಗ ರಾಷ್ಟ್ರೀಯ ಪಿಂಚಣಿ ಯೋಜನೆ 18ರಿಂದ 60 ವರ್ಷದ ಜನರಿಗೆ ಮುಕ್ತವಾಗಿದೆ. ವಯೋಮಿತಿಯನ್ನು 65ಕ್ಕೆ ಏರಿಸಲು ಮಂಡಳಿ ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.
ಗ್ರಾಹಕ ಸ್ನೇಹಿ ಹಾಗೂ ಎನ್‌ಪಿಎಸ್ ಅನ್ನು ಹೆಚ್ಚು ಆಕರ್ಷಣೀಯಗೊಳಿಸುವ ಮೂಲಕ ಪಿಂಚಣಿ ನಿಧಿಯನ್ನು ವರ್ಗಾಯಿಸುವ ಸೌಲಭ್ಯ ಒದಗಿಸುವುದು ಇದರ ಉದ್ದೇಶ. ಪಿಂಚಣಿ ಯೋಜನೆಯಲ್ಲಿ ಸುಧಾರಣೆ ತರಲಾಗುತ್ತಿದೆ ಎಂದು ಹೇಮಂತ್ ಕಾಂಟ್ರಾಕ್ಟರ್ ಅವರು ಹೇಳಿದರು.












Click it and Unblock the Notifications