National Highway: ಗೋವಾ-ಮುಂಬೈ ಹೆದ್ದಾರಿ ಯೋಜನೆ ವಿಳಂಬ: ಗಡ್ಕರಿ ನಿರ್ಧಾರಕ್ಕೆ ಪ್ರಶಂಸೆ, ಕರ್ನಾಟಕಕ್ಕೆ ಏನು ಲಾಭ?

National Highway 66: ಕರ್ನಾಟಕ ರಾಜ್ಯಕ್ಕೂ ಸಂಪರ್ಕ ಕೊಂಡಿಯಾಗಿರುವ ಗೋವಾರ-ಮುಂಬೈ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ (National Highway 66) ಯೋಜನೆ ಒಂದೂವರೆ ದಶಕ ಕಳೆದರು ಪೂರ್ಣಗೊಂಡಿಲ್ಲ. ತಮ್ಮದೇ ಇಲಾಖೆಯ ವ್ಯಾಪ್ತಿಯಲ್ಲಿ ಯೋಜನೆಯು ಇಷ್ಟೊಂದು ವಿಳಂಬವಾಗಿದ್ದಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತೀನ್ ಗಡ್ಕರಿ ಅವರು ಕೈಗೊಂಡ ನಿರ್ಧಾರಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

ಗೋವಾರ ಮತ್ತು ಮುಂಬೈ ನಡುವಿನ ಸಂಚಾರ ಸಮಯವನ್ನು ತೀವ್ರವಾಗಿ ತಗ್ಗಿಸಲಿರುವ, ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಯು 2011ರಲ್ಲೇ ಆರಂಭವಾಗಿದೆ. ಈವರೆಗೆ ಯೋಜನೆ ಪೂರ್ಣಗೊಂಡಿಲ್ಲ. ನಾಲ್ಕು ಲೈನ್ ಹೆದ್ದಾರಿ ನಿರ್ಮಾಣ ಇಷ್ಟೊಂದು ಅಮೆ ಗತಿಯಲ್ಲಿ ಸಾಗಿದ್ದಕ್ಕೆ ಸ್ವತಃ ಸಚಿವ ನಿತಿನ್ ಗಡ್ಕರಿ ಅವರೇ ಅಸಮಾಧಾನ ಹೊರ ಹಾಕಿದ್ದಾರೆ.

National Highway 66

ಕಾರ್ಯಕ್ರಮಕ್ಕೆ ಬರಲ್ಲ: ಕೆಚ್ಚೆದೆಯ ನಡೆಗೆ ಮೆಚ್ಚುಗೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ವ್ಯಾಪ್ತಿಯಲ್ಲಿ ಗೋವಾ-ಮುಂಬೈ ಮಧ್ಯೆ ಸುಮಾರು 470 ಕಿಲೋ ಮೀಟರ್ ಚತುಷ್ಪಥ ರಸ್ತೆ ನಿರ್ಮಿಸಲಾಗುತ್ತಿದೆ. ಒಂದೂವರೆ ದಶಕ ಕಳೆದರೂ ಇನ್ನೂ ಕಾಮಗಾರಿ ಕುಂಟುತ್ತಾ ಸಾಗಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ನಾನು ಬರುವುದಿಲ್ಲ ಎಂದು ಗಡ್ಕರಿ ಖಡಕ್ ನಿರ್ಧಾರ ಕೈಗೊಂಡಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ತಮ್ಮದ ಇಲಾಖೆ ಬಗ್ಗೆ ಬೇಸರ ಹೊರ ಹಾಕಿ, ವಿಳಂಬ ಒಪ್ಪಿಕೊಂಡು ಕಾರ್ಯಕ್ರಮ ಬಹಿಷ್ಕರಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಇವರ ಕೆಚ್ಚೆದೆಯ ರಾಜಕೀಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ: ಗಡ್ಕರಿ ಎಚ್ಚರಿಕೆ

ಗೋವಾ-ಮುಂಬೈ ರಸ್ತೆ ಯೋಜನೆ ಪೂರ್ಣಗೊಂಡರೆ ಸಾಕಷ್ಟು ಪ್ರಯೋಜನೆಗಳಿವೆ. ಕರ್ನಾಟಕ ಕರಾವಳಿ ಸೇರಿ ದೇಶದ ದಕ್ಷಿಣ ಭಾರತದ ಪಶ್ಚಿಮ ಕರಾವಳಿ ಉದ್ದಕ್ಕೂ ಸಂಪೂರ್ಣ ಹೆದ್ದಾರಿ ಸೌಲಭ್ಯ ಸಿಕ್ಕಂತಾಗುತ್ತದೆ. ಆದರೆ ನಿರಂತರವಾಗಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದಕ್ಕೆ ನಿತಿನ್ ಗಡ್ಕರಿ ಅವರು ಯೋಜನೆ ಪಡೆದ ಗುತ್ತಿಗೆದಾರ ಸಂಸ್ಥೆ ಹಾಗೂ ಅಭಿವೃದ್ಧಿ ಇಲಾಖೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಕಾಮಗಾರಿ ವಿಳಂಬ ಮಾಡುವ ಗುತ್ತಿಗೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದಂತಾಗಿದೆ.

ಯೋಜನೆ ಪ್ರಯೋಜನ: ಸಂಚಾರ ಸಮಯ ಇಳಿಕೆ

ರಾಷ್ಟ್ರೀಯ ಹೆದ್ದಾರಿ 66ರ ಯೋಜನೆ ಪೂರ್ಣಗೊಂಡರೆ ಮುಂಬೈ- ಗೋವಾ ಸಂಪರ್ಕಿಸಲು ಹಾಲಿ ಗರಿಷ್ಠ 13 ಗಂಟೆ ಬೇಕು, ಅದು ಮುಂದೆ 6 ಗಂಟೆಗೆ ಇಳಿಯಲಿದೆ. ಇದರಿಂದ ರಸ್ತೆ ಸರಕು ಸಾಗಣೆ, ಪ್ರಯಾಣಕ್ಕು ಅನುಕೂಲವಾಗಲಿದೆ. ಕರಾವಳಿ ಭಾಗದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ. ಕರ್ನಾಟಕ ಭಾಗದಿಂದ ಗೋವಾ ಮೂಲಕ ಮುಂಬೈ ಸಂಪರ್ಕ ಸುಧಾರಿಸುತ್ತದೆ.

ಕರ್ನಾಟಕಕ್ಕೆ ಹೆದ್ದಾರಿ ಸಂಪರ್ಕ ಕೊಂಡಿ

NH 66 ಹೆದ್ದಾರಿಯು ಕರ್ನಾಟಕಕ್ಕೆ ಸಂಪರ್ಕ ಕೊಂಡಿಯಾಗಲಿದೆ. ಗೋವಾ ಮಾರ್ಗವಾಗಿ ಕರ್ನಾಟಕದ ಕಾರವಾರ, ಕುಮಟಾ, ಭಟ್ಕಳ, ಉಡುಪಿ, ಮಂಗಳೂರು ನಗರಗಳ ರಸ್ತೆ ಸಂಪರ್ಕ ಹೆಚ್ಚಾಗುತ್ತದೆ. ಮುಂದೆ ಯೋಜನೆ ಕೇರಳವರೆಗೆ ವಿಸ್ತರಣೆ ಆಗುವ ಸಾಧ್ಯತೆ ಇದೆ. ಮುಖ್ಯವಾಗಿ ಸರಕು ಸಾಗಣೆಗೆ ಹೆಚ್ಚಿನ ಅನುಕೂಲವಾಗಲಿದೆ. ವಿಮಾನ ಸಾರಿಗೆ ಹಾಗೂ ಇತರ ಮಾರ್ಗ ಅನುಸರಿಸುವ ತಾಪತ್ರಯ ತಪ್ಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+