ನಾಸಿಕ್ BPO ಕೇಸ್: ಉದ್ಯೋಗಿಗಳಿಗೆ ಕಿರುಕುಳ, 9 ಮಂದಿ ಬಂಧನ; 'ಕಾರ್ಪೋರೇಟ್ ಜಿಹಾದ್' ಚರ್ಚೆ

ಮುಂಬೈ: ಮಹಾರಾಷ್ಟ್ರ ರಾಜ್ಯದ ನಾಸಿಕ್‌ನಲ್ಲಿ ಪ್ರಮುಖ ಬಿಪಿಓ ಕಚೇರಿಯಲ್ಲಿ ವ್ಯವಸ್ಥಿತ ಲೈಂಗಿಕ ಮತ್ತು ಧಾರ್ಮಿಕ ಶೋಷಣೆಯ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಹಿಳಾ ಉದ್ಯೋಗಿಗಳು ನೀಡಿದ ದೂರಿನ ಮೇರೆಗೆ 09 ಒಂಬತ್ತು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರೂ ಸೇರಿದ್ದಾರೆ.

'ಕಾರ್ಪೋರೇಟ್ ಜಿಹಾದ್' ಹೆಸರಿನಲ್ಲಿ ಚರ್ಚೆ

ಮುಂಬೈನಿಂದ 180 ಕಿ.ಮೀ. ದೂರದಲ್ಲಿರುವ ನಾಸಿಕ್ ನಲ್ಲಿ ಈ ಬಿಪಿಓ ಘಟಕವಿದ್ದು, ಸದ್ಯ ಈ ಪ್ರಕರಣವು ದೇಶವ್ಯಾಪಿ ಸದ್ದು ಮಾಡುತ್ತಿದೆ. ಸ್ವಯಂಘೋಷಿತ ಸಿದ್ಧರಾಮ ಅಶೋಕ್ ಖರಾತ್ ವಿರುದ್ಧದ ಲೈಂಗಿಕ ಶೋಷಣೆ ವಿವಾದದ ಬೆನ್ನಲ್ಲೇ ಈ ಸ್ಫೋಟಕ ಪ್ರಕರಣ ಹೊರಬಿದ್ದಿದೆ. 08 ಉದ್ಯೋಗಿಗಳು ನೀಡಿದ ದೂರುಗಳ ಆಧಾರದಲ್ಲಿ ಹಲವರನ್ನು ಬಂಧಿಸಲಾಗಿದೆ. ಅದರಲ್ಲಿ ಎಂಟು ಮಂದಿ ಮುಸ್ಲಿಮರು ಎಂಬುದು ಮತ್ತಷ್ಟು ಚರ್ಚೆ ಆಗುತ್ತಿದೆ. ಬಲಪಂಥೀಯ ಸಂಘಟನೆಗಳು ಈ ಪ್ರಕರಣವನ್ನು "ಲವ್ ಜಿಹಾದ್" ಮತ್ತು "ಕಾರ್ಪೊರೇಟ್ ಜಿಹಾದ್" ಎಂದು ಬಣ್ಣಿಸಿವೆ.

Nashik BPO Case

ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಬಿಜೆಪಿ ಸೇರಿದಂತೆ ಇತರ ಸಂಘಟನೆಗಳ ನಾಯಕರು ಈ ನಡೆಯನ್ನು ಖಂಡಿಸಿದ್ದಾರೆ. ಬಡ್ತಿಗಾಗಿ ಗೋಮಾಂಸ ತಿನ್ನುವಂತೆಯು ಕಂಪನಿಯಲ್ಲಿ ಉದ್ಯೋಗಿಗಳ ಮೇಲೆ ಒತ್ತಡ ಹೇರಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದು, ಇದನ್ನು ನಾಯಕರು ಖಂಡಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ನಾಸಿಕ್ ನಲ್ಲಿರುವ ಕಚೇರಿಯಲ್ಲಿ ಬಂಧಿತರು, ದೂರುದಾರು ಉದ್ಯೋಗಿಗಳು ಸೇರಿ ಹಲವು ಕೆಲಸ ಮಾಡುತ್ತಿದ್ದರು. ಕಳೆದ ತಿಂಗಳು ಮಾರ್ಚ್ 25 ರಂದು ಸ್ಥಳಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದ ಉದ್ಯೋಗಿಯೋಬ್ಬರು ಕಚೇರಿಯಲ್ಲಿ 2022ರಿಂದ 2026ರ ನಡುವೆ ಮಹಿಳೆಯೋರ್ವಳು ಸೇರಿದಂತೆ ತನ್ನ ಮೂವರು ಸಹೋದ್ಯೋಗಿಗಳು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು. ಪುರುಷ ಸಹೋದ್ಯೋಗಿಯೊಬ್ಬರು ತನ್ನನ್ನು ಹಲವು ಬಾರಿ ಲೈಂಗಿಕವಾಗಿ ಶೋಷಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ತಿಳಿಸಿದ್ದಳು.

ಆರೋಪಗಳ ಸೂಕ್ಷ್ಮತೆಯನ್ನು ಗಂಭೀರವಾಗಿ ಪರಿಗಣಿಸಿದ ನಾಸಿಕ್ ಪೊಲೀಸರು ತನಿಖೆ ಆರಂಭಿಸಿದ್ದರು. ಇತರ ಉದ್ಯೋಗಿಗಳು ಕಷ್ಟ, ಧಾರ್ಮಿಕ ತೊಂದರೆ ಅನುಭವಿಸಿದ್ದಲ್ಲಿ ಮುಂದೆ ಬರುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ಏಪ್ರಿಲ್ 3ರ ವೇಳೆಗೆ, ಎಂಟು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಒಟ್ಟು ಒಂಬತ್ತು ಉದ್ಯೋಗಿಗಳಿಂದ ದೂರೂ ದಾಖಲಾಗಿದೆ. ಇವುಗಳಲ್ಲಿ ಲೈಂಗಿಕ ಮತ್ತು ಧಾರ್ಮಿಕ ಕಿರುಕುಳದ ಆರೋಪಗಳಿವೆ. ಮಾನವ ಸಂಪನ್ಮೂಲ ವಿಭಾಗಕ್ಕೆ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಹಲವು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಂಧಿತರ ಮೇಲೆ ಎಫ್‌ಐಆರ್

ಪೊಲೀಸರು ಇದುವರೆಗೆ ಆಸಿಫ್ ಅನ್ಸಾರಿ, ಶಫಿ ಶೇಖ್, ಶಾರುಖ್ ಖುರೇಷಿ, ರಜಾ ಮೆಮನ್, ತೌಸಿಫ್ ಅತ್ತರ್ ಮತ್ತು ಡ್ಯಾನಿಶ್ ಶೇಖ್ ಅವರನ್ನು ಬಂಧಿಸಿದ್ದಾರೆ. ಕಳೆದ ತಿಂಗಳು ಒಂಬತ್ತು ಉದ್ಯೋಗಿಗಳು (ಎಂಟು ಮಹಿಳೆಯರು) ಸಲ್ಲಿಸಿದ ದೂರುಗಳ ಆಧಾರದ ಮೇಲೆ ಒಟ್ಟು ಒಂಬತ್ತು ಎಫ್‌ಐಆರ್‌ಗಳನ್ನು (ಅತ್ಯಾಚಾರ, ಲೈಂಗಿಕ ಕಿರುಕುಳ, ದೌರ್ಜನ್ಯ) ದಾಖಲಿಸಲಾಗಿದೆ.

ಆರೋಪಿಗಳ ಲೈಂಗಿಕ ದೌರ್ಜನ್ಯ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಬಗ್ಗೆ ಮಾಹಿತಿ ನೀಡಿದರೂ ಕ್ರಮಕ್ಕೆ ವಿಫಲರಾದ ಕಂಪನಿಯ ಸಹಾಯಕ ಜನರಲ್ ಮ್ಯಾನೇಜರ್ (HR) ಅವರನ್ನು ಶುಕ್ರವಾರ ಬಂಧಿಸಲಾಗಿದೆ. ಲೈಂಗಿಕ ಶೋಷಣೆ, ಲೈಂಗಿಕ ಕಿರುಕುಳ, ಅನುಚಿತ ಹೇಳಿಕೆಗಳು ಮತ್ತು ಸನ್ನೆಗಳು ಕೇಳಿ ಬಂದಿವೆ. ಮೆಸೆಜ್ ಮಾಡಿ ಖಾಸಗಿ ಭಾಗ ತೋರಿಸುವುದಾಗಿ ಹೇಳಿದ್ದರು ಎಂದು ಉದ್ಯೋಗಿಯೊಬ್ಬರು ದೂರಿನಲ್ಲಿ ವಿವರಿಸಿದ್ದಾರೆ

ದೈಹಿಕ ಸಂಬಂಧ, ಗೋಮಾಂಸ ಸೇವನೆಗೆ ಒತ್ತಾಯ

ಬಂಧಿತರಲ್ಲಿ ಕೆಲವರು ಹಿಂದೂ ದೇವರುಗಳ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ. ಮತಾಂತರಕ್ಕೆ ಒತ್ತಾಯಿಸಿದ್ದಲ್ಲದೇ ಗೋಮಾಂಸ ಸೇರಿದಂತೆ ಮಾಂಸಾಹಾರ ಸೇವನೆಗೆ ಬಲವಂತಪಡಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಮಹಿಳೆಯೊಬ್ಬರಿಗೆ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ ಆರೋಪವೂ ಕೇಳಿ ಬಂದಿದೆ. ವಿಶೇಷ ತನಿಖಾ ತಂಡದ (SIT) ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆ.

ಈ ಪ್ರಕರಣ ರಾಜಕೀಯ ಮತ್ತು ಧಾರ್ಮಿಕವಾಗಿಯೂ ಚರ್ಚೆಗೆ ಕಾರಣವಾಗುತ್ತಿದೆ. ಬಿಜೆಪಿ ನಾಯಕರು 'ಇದನ್ನು ಕಾಪೋರೇಟ್ ಜಿಹಾದ್' ಎಂದು ಕರೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ರಾಜ್ಯ ಸಚಿವ ನಿತೇಶ್ ರಾಣೆ ಇದನ್ನು "ಕಾರ್ಪೊರೇಟ್ ಜಿಹಾದ್" ಎಂದು ಕರೆದಿದ್ದಾರೆ.

ಬಿಜೆಪಿ ಸಿ.ಟಿ. ರವಿ ಆಕ್ರೋಶ

ಬಿಜೆಪಿ ನಾಯಕ ಸಿ.ಟಿ.ರವಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದೇಶಾದ್ಯಂತ ಲವ್ ಜಿಹಾದ್ ತೀವ್ರ ಸಂಚಲನ ಸೃಷ್ಟಿಸುತ್ತಿದೆ. ಅಮಾಯಕ ಹಿಂದೂ ವಿದ್ಯಾರ್ಥಿನಿಯರನ್ನು ಪ್ರೀತಿಯ ಹೆಸರಿನಲ್ಲಿ ತಲೆ ಕೆಡಿಸಿ, ಅಕ್ರಮವಾಗಿ ಮತಾಂತರ ನಡೆಸುವ ದಂಧೆಯ ಕುರಿತು ನೂರಾರು ದೂರುಗಳು ದಾಖಲಾಗಿವೆ. ಇದೆಲ್ಲದರ ನಡುವೆ, ಅದೇ ಗುಮ್ಮ ಕಾರ್ಪೋರೇಟ್ ಜಿಹಾದ್ ರೂಪದಲ್ಲಿ ನಮ್ಮ ನಡುವೆ ಬಂದಿದೆ!

ಮುಂಬಡ್ತಿ ಬೇಕೆಂದರೆ ಗೋಮಾಂಸ ತಿನ್ನಿ ಎಂದು ಧಮಕಿ ಹಾಕುತ್ತಿರುವ ಬೆಳವಣಿಗೆಗಳು ಪ್ರಸಿದ್ಧ ಐಟಿ ಕಂಪನಿಗಳಲ್ಲಿ ನಡೆಯುತ್ತಿರುವುದು ಅಕ್ಷಮ್ಯ. ತಕ್ಷಣವೇ ಸಂಬಂಧಪಟ್ಟ ಕಂಪನಿಗಳು ಇಂತಹ ಒತ್ತಡ ಹೇರಿದವರನ್ನು ವಜಾಗೊಳಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+