ಹುಟ್ಟುಹಬ್ಬದ ದಿನ 'ನಮೋ'ಗೆ ಭರ್ಜರಿ ಗಿಫ್ಟ್

ಗಾಂಧಿನಗರ, ಸೆ.17: ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಮುಂದಿನ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ದೇಶದಾದ್ಯಂತ ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ.

ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾ ಬಾ ಅವರ ಪಾದಕ್ಕೆರಗಿ ಆಶೀರ್ವಾದ ಬೇಡಿದ್ದಾರೆ. ಜಗ ಮೆಚ್ಚಿದ ಮಗ ಮೋದಿ ಅವರಿಗೆ ಸಿಹಿ ತಿನಿಸಿದ ಅಮ್ಮ ತನ್ನ ಪುತ್ರನಿಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ತಾಯಿ ಕೊಟ್ಟ ಉಡುಗೊರೆ' ಯಥಾರ್ಥ ಗೀತಾ(ಶ್ರೀಮದ್ ಭಗವದ್ಗೀತಾ) ಪುಸ್ತಕವನ್ನು ಕಣ್ಣಿಗೆ ಒತ್ತಿಕೊಂಡು ಜನರ ಬಳಿಗೆ ಮೋದಿ ತೆರಳಿದರು.

ಮನೆಯಿಂದ ತೆರಳಿದ ಮೋದಿ ಅವರು ಜಮಲಾಪುರ, ಹಳೆ ಅಹಮದಾಬಾದಿನ ಮುಸ್ಲಿ ಪ್ರದೇಶಕ್ಕೆ ಕಾಲಿಟ್ಟರು ಅಲ್ಲಿ ಅವರಿಗಾಗಿ ನೂರಾರು ಮುಸ್ಲಿಮರು 64 ಕೆಜಿ ತೂಕದ ಕೇಕ್ ಇಟ್ಟುಕೊಂಡು ಕಾಯುತ್ತಿದ್ದರು. ಗುಜರಾತ್ ಬಿಜೆಪಿ ಅಲ್ಪಸಂಖ್ಯಾತರ ಘಟಕ ಕೂಡಾ ಮುಸ್ಲಿಮರಿಗೆ ಸಿಹಿ ಹಂಚಿ ಆನಂದಿಸಿದೆ. 245ಕ್ಕೂ ಅಧಿಕ ಕಾರ್ಪೋರೇಟರ್ ಗಳನ್ನು ಈ ಸಮುದಾಯ ನೀಡಿರುವುದು ಅಭಿವೃದ್ಧಿಯನ್ನು ಕಂಡು ಎಂಬುದು ಎಲ್ಲರಿಗೂ ಅರ್ಥವಾಗಬೇಕಿದೆ ಎಂದು ಬಿಜೆಪಿಯ ಲಘುಮತಿ ಮೋರ್ಚಾ ಮೆಹಬೂಬ್ ಅಲಿ ಛಿಸ್ಟಿ ಹೇಳಿದ್ದಾರೆ.

ಕಾಂಗ್ರೆಸ್ ಕೊಂಕು: ಅಟಲ್ ಬಿಹಾರಿ ವಾಜಪೇಯಿ ಹೇಳಿಕೊಟ್ಟ ರಾಜಧರ್ಮದ ಬಗ್ಗೆ ಭಾಷಣ ಮಾಡುವುದನ್ನೇ ಕಾಯಕ ಮಾಡಿಕೊಂಡರೇ ಹೇಗೆ ಮೋದಿ ಅವರು ಅದನ್ನು ಕಾರ್ಯಗತಗೊಳಿಸಬೇಕು. ವನಬಂಧು, ಸಾಗರ್ ಖೇದು ಯೋಜನೆಗಳು ಇನ್ನೂ ಯಶಸ್ವಿಯಾಗುವ ಮೊದಲೆ ಸಂಭ್ರಮ ಏತಕ್ಕಾಗಿ ಎಂದು ಜಿಪಿಸಿಸಿ ಅಧ್ಯಕ್ಷ ಅರ್ಜುನ್ ಮೋಧ್ವಾಡಿಯಾ ಪ್ರಶ್ನಿಸಿದ್ದಾರೆ.

ಅದೇನೆ ಇರಲಿ, ಬಿಜೆಪಿ ಘಟಕಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ, ವೆಬ್ ಸೈಟ್, ಮಾಧ್ಯಮಗಳಲ್ಲಿ ಮೋದಿ ಹುಟ್ಟುಹಬ್ಬದ ಸುದ್ದಿ ಸದ್ದು ಮಾಡಿದ್ದು ಸುಳ್ಳಲ್ಲ.. ಮೋದಿ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ ನೋಡಿ..

ಮುಸ್ಲಿಮರ ಜತೆ ಕೇಕ್

ಮುಸ್ಲಿಮರ ಜತೆ ಕೇಕ್

ಮನೆಯಿಂದ ತೆರಳಿದ ಮೋದಿ ಅವರು ಜಮಲಾಪುರ, ಹಳೆ ಅಹಮದಾಬಾದಿನ ಮುಸ್ಲಿ ಪ್ರದೇಶಕ್ಕೆ ಕಾಲಿಟ್ಟರು ಅಲ್ಲಿ ಅವರಿಗಾಗಿ ನೂರಾರು ಮುಸ್ಲಿಮರು 64 ಕೆಜಿ ತೂಕದ ಕೇಕ್ ಇಟ್ಟುಕೊಂಡು ಕಾಯುತ್ತಿದ್ದರು.

ಅಮ್ಮನ ಆಶೀರ್ವಾದ

ಅಮ್ಮನ ಆಶೀರ್ವಾದ

ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾ ಬಾ ಅವರ ಪಾದಕ್ಕೆರಗಿ ಆಶೀರ್ವಾದ ಬೇಡಿದ್ದಾರೆ. ಜಗ ಮೆಚ್ಚಿದ ಮಗ ಮೋದಿ ಅವರಿಗೆ ಸಿಹಿ ತಿನಿಸಿದ ಅಮ್ಮ ತನ್ನ ಪುತ್ರನಿಗೆ ವಿಶೇಷ ಉಡುಗೊರೆ ಕೊಟ್ಟರು

ಬಿಜೆಪಿ ಘಟಕ

ಬಿಜೆಪಿ ಘಟಕ

ಬಿಜೆಪಿ ಮಹಿಳಾ ಘಟಕದ ಸದಸ್ಯೆಯರು ಮೋದಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ

ಎಲ್ಲರ ಮೆಚ್ಚಿನ ನಾಯಕ

ಎಲ್ಲರ ಮೆಚ್ಚಿನ ನಾಯಕ


245ಕ್ಕೂ ಅಧಿಕ ಕಾರ್ಪೋರೇಟರ್ ಗಳನ್ನು ಈ ಸಮುದಾಯ ನೀಡಿರುವುದು ಅಭಿವೃದ್ಧಿಯನ್ನು ಕಂಡು ಎಂದು ಬಿಜೆಪಿಯ ಲಘುಮತಿ ಮೋರ್ಚಾ ಮೆಹಬೂಬ್ ಅಲಿ ಛಿಸ್ಟಿ ಹೇಳಿದ್ದಾರೆ.

ಬಾಲಕ ಮೋದಿ

ಬಾಲಕ ಮೋದಿ

ದಾಮೋದರದಾಸ್ ಮೂಲ್ಚಂದ್ ಮೋದಿ ಹಾಗೂ ಹೀರಾಬೆನ್ ಮೋದಿ ಅವರ ಪುತ್ರನಾಪಿ ಮೆಹ್ಸಾನ, ಗುಜರಾತ್ ನಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಸಂಘಟನಾ ಚತುರನಾಗಿದ್ದರು.

ಆರಂಭದ ದಿನಗಳಲ್ಲಿ

ಆರಂಭದ ದಿನಗಳಲ್ಲಿ

ಸೆ.17, 1950ರಂದು ಜನಿಸಿದ ಮೋದಿ ಅವರು ಆರಂಭದ ದಿನಗಳಲ್ಲಿ ಅಹಮದಾಬಾದಿನ ಬಸ್ ಟರ್ಮಿನಲ್ ನಲ್ಲಿ ಸೋದರನ ಜತೆ ಚಹಾ ಅಂಗಡಿ ನಡೆಸುತ್ತಿದ್ದರು. ಇಂದು ದೇಶವನ್ನು ಮುನ್ನಡೆಸುವ ಸಮರ್ಥ ವ್ಯಕ್ತಿ ಎಂದು ಬಿಜೆಪಿ ಆಯ್ಕೆ ಮಾಡಿರುವುದು ಸಾಧನೆಗೆ ಸಿಕ್ಕ ಪ್ರತಿಫಲವಾಗಿದೆ.

ಕತ್ತಲಿನಿಂದ ಬೆಳಕಿನೆಡೆಗೆ

ಕತ್ತಲಿನಿಂದ ಬೆಳಕಿನೆಡೆಗೆ

ಚಿಕ್ಕಂದಿನಲ್ಲಿ ಮೋದಿ ಅವರಿದ್ದ ಮನೆಯಲ್ಲಿ ವಿದ್ಯುತ್ ಪೂರೈಕೆ ಇರಲಿಲ್ಲ. ಶಾಲೆ ನಂತರ ಚಹಾದಂಗಡಿಯಲ್ಲಿ ಮೋದಿ ಕೆಲಸಕ್ಕೆ ಹೋಗುತ್ತಿದ್ದರು. ಇಂದು ಗುಜರಾತ್ ರಾಜ್ಯವನ್ನು ವಿದ್ಯುತ್ ಉತ್ಪಾದನೆ, ಪೂರೈಕೆ, ಪ್ರಸರಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆ ಮೋದಿ ಮಾಡಿದ್ದಾರೆ.

ಹುಡುಗು ಬುದ್ದಿ ಮೋದಿಯಲ್ಲಿತ್ತು

ಹುಡುಗು ಬುದ್ದಿ ಮೋದಿಯಲ್ಲಿತ್ತು

ಎಲ್ಲರಂತೆ ಮೋದಿ ಕೂಡಾ ಸರಿಯಾದ ಸಮಯಕ್ಕೆ ಅಂದುಕೊಂಡ ಕಾರ್ಯ ಆಗದಿದ್ದರೆ ಹಠ ಹಿಡಿಯುತ್ತಿದ್ದರಂತೆ. ಮನೆಯಿಂದ ಸಿಟ್ಟು ಮಾಡಿಕೊಂಡು ಹೊರಬಂದ ಮೋದಿ ಅವರನ್ನು ಕೈ ಬೀಸಿ ಕರೆದಿದ್ದು ಹಿಮಾಲಯ. ಅಲ್ಲಿ ಅವರಿಗೆ ದರ್ಶನವಾಗಿತ್ತು ಹಿಂದೂತ್ವದ ಸಾರ.

ಕಾಯಕವೇ ಕೈಲಾಸ

ಕಾಯಕವೇ ಕೈಲಾಸ

ಹಿಮಾಲಯದಲ್ಲಿ ಎರಡು ವರ್ಷ ಕೈಯಲ್ಲಿ ಬಿಡಿಗಾಸು ಇಲ್ಲದೆ ಅಲೆದ ಮೋದಿ ಅವರು ಜ್ಞಾನಾರ್ಜನೆ ಮೂಲಕ ಸಮಯವನ್ನು ಸದುಪಯೋಗಪಡಿಸಿಕೊಂಡರೂ ಕುಟುಂಬ, ಕರ್ತವ್ಯದ ಅರಿವಾಗಿ ಮತ್ತೆ ಊರಿಗೆ ಮರಳಿದರಂತೆ. ಊರಲ್ಲಿ ಎಂದಿನಂತೆ ಚಹಾ ಅಂಗಡಿ ಕೆಲಸ ಕಾಯುತ್ತಿತ್ತು.

ಆರೆಸ್ಸೆಸ್ ಅಡಿಪಾಯ

ಆರೆಸ್ಸೆಸ್ ಅಡಿಪಾಯ

ಮೋದಿ ಅವರಲ್ಲಿ ಶಿಸ್ತು, ಉತ್ತಮ ಮಾತುಗಾರಿಕೆ, ಸಂಘಟನಾ ಚತುರತೆ ಎಲ್ಲವೂ ಹೇಳಿಕೊಟ್ಟಿದ್ದು ಆರೆಸ್ಸೆಸ್. ಇದೇ ಮುಂದೆ ರಾಜಕೀಯ ಪ್ರವೇಶಕ್ಕೆ ನಾಂದಿ ಹಾಡಿತು.

ರಾಜನೀತಿ

ರಾಜನೀತಿ

ರಾಜ್ಯಶಾಸ್ತ್ರ ಅಧ್ಯಯನ ಮಾಡಿರುವ ಮೋದಿ ಅವರು 1995ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಬೆಳೆಯುವ ಮುನ್ನ ವಿವಿಧ ಹಂತಗಳಲ್ಲಿ ದುಡಿದಿದ್ದಾರೆ.

ತಮಾಷೆಗೆ

ಹುಟ್ಟುಹಬ್ಬದ ದಿನ ತಮಾಷೆಗೆ ಟ್ವೀಟ್

ಹುಟ್ಟುಹಬ್ಬದ ದಿನ ಟ್ವೀಟ್

ಹುಟ್ಟುಹಬ್ಬದ ದಿನ ಮೋದಿ ಅವರು ಟ್ವೀಟ್ ಮಾಡಿ ವಿಶ್ವಕರ್ಮ ಜಯಂತಿ ಶುಭ ಹಾರೈಸಿದ್ದಾರೆ.

ಮೋದಿಗೆ ಮಲ್ಲಿಕಾ ವಿಶ್

ದೇಶದ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಮೋದಿಗೆ ವಿಶ್ ಮಾಡಿದ ಮಲ್ಲಿಕಾ ಶೆರಾವತ್

ಗುಜರಾತ್ ಅಭಿವೃದ್ಧಿ

ಗುಜರಾತ್ ಅಭಿವೃದ್ಧಿ

2001 ರಲ್ಲಿ ಕೇಶು ಭಾಯಿ ಪಟೇಲ್ ರಾಜೀನಾಮೆ ನಂತರ ಅಧಿಕಾರ ಚುಕ್ಕಾಣಿ ಹಿಡಿದ ಮೋದಿ ಅವರು ಸತತ ನಾಲ್ಕು ಬಾರಿ ಬಿಜೆಪಿ ಬಾವುಟ ಎತ್ತರಕ್ಕೆ ಹಾರಿಸಿದ್ದಾರೆ.

 ಕರಾಳ ನೆನಪು

ಕರಾಳ ನೆನಪು

2002ರ ಗೋಧ್ರಾ ಹತ್ಯಾಕಾಂಡಕ್ಕೆ ಗುಜರಾತಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಆರೋಪ ಬಂದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಮೋದಿ ಮೇಲೆ ಮುನಿಸಿಕೊಂಡಿದ್ದರಂತೆ. ಅಡ್ವಾಣಿ ಅವರೇ ವಾಜಪೇಯಿ ಅವರಿಗೆ ಪರಿಸ್ಥಿತಿ ಬಗ್ಗೆ ವಿವರಿಸಿ ಮೋದಿ ಪರ ನಿಂತರಂತೆ.. ಆದರೆ, ಮೋದಿ ಎಂದರೆ ದೂರದ ಅಮೆರಿಕಕ್ಕೂ 2002ರ ಘಟನೆ ನೆನಪಾಗುತ್ತದೆ.

ಪ್ರಧಾನಿ ಅಭ್ಯರ್ಥಿಯಾಗಿ

ಪ್ರಧಾನಿ ಅಭ್ಯರ್ಥಿಯಾಗಿ

ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರನ್ನು ಸೆ.13ರಂದು ಬಿಜೆಪಿ ಆಯ್ಕೆ ಮಾಡಿತು. ಇದರಿಂದ ಅಡ್ವಾಣಿ ಮನಸ್ಸಿಗೆ ಘಾಸಿ ಆಗಿದೆ ಎನ್ನಲಾಗಿತ್ತು. ಅದರೆ, ಅಡ್ವಾಣಿ ಅವರು ಮೋದಿ ಸರಿಯಾದ ಆಯ್ಕೆ ಎಂದು ಬಹಿರಂಗ ಸಮಾವೇಶದಲ್ಲಿ ಘೋಷಿಸಿ ಬಿಜೆಪಿಯ ಘನತೆ ಕಾಪಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+