ಅಧಿಕಾರ ಸ್ವೀಕರಿಸಿದ ವಾರದಲ್ಲೇ ಮೋದಿ ವಿದೇಶ ಪ್ರವಾಸ

ಬೆಂಗಳೂರು, ಮೇ 31: ನರೇಂದ್ರ ಮೋದಿ ಅವರ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ನಿನ್ನೆ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಒಂದು ವಾರದಲ್ಲೇ ಮೋದಿ ಅವರು ತಮ್ಮ ಮೊದಲ ವಿದೇಶ ಪ್ರವಾಸ ಹೊರಡುತ್ತಿದ್ದಾರೆ.

ಜೂನ್ 7 ಮತ್ತು 8ನೇ ತಾರೀಖಿನಂದು ಮೋದಿ ಅವರು ಶ್ರೀಲಂಕಾ ಮತ್ತು ಮಾಲ್ಡಿವ್ಸ್‌ಗೆ ಪ್ರವಾಸ ಹೊರಟಿದ್ದು, ಮೊದಲಿಗೆ ಮಾಲ್ಡಿವ್ಸ್‌ಗೆ ಭೇಟಿ ನೀಡಿ ಆ ನಂತರ ಶ್ರೀಲಂಕಾಕ್ಕೆ ಭೇಟಿ ನೀಡುತ್ತಿದ್ದಾರೆ.

ಸಂಸತ್ತನ್ನು ಉದ್ದೇಶಿಸಿ ಮಾತನಾಡುವಂತೆ ಮಾಲ್ಡಿವ್ಸ್‌ ನ ಅಧ್ಯಕ್ಷ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಹಾಗಾಗಿ ಮೋದಿ ಅವರು ಮೊದಲು ಮಾಲ್ಡಿವ್ಸ್‌ಗೆ ಭೇಟಿ ನೀಡಿ ಆ ನಂತರ ಶ್ರೀಲಂಕಾಕ್ಕೆ ತೆರಳಲಿದ್ದಾರೆ.

Narendra Modi visiting Maldives and Sri Lanka on June 7-8

ಮೋದಿ ಅವರ ಶ್ರೀಲಂಕಾ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಇತ್ತೀಚೆಗಷ್ಟೆ ಭಾರಿ ಭಯೋತ್ಪಾದಕ ದಾಳಿಗೆ ತುತ್ತಾಗಿರುವ ಶ್ರೀಲಂಕಾಕ್ಕೆ ದಾಳಿಯಾದ ಕೆಲವೇ ದಿನಗಳ ಅವಧಿಯಲ್ಲಿ ಮೋದಿ ಭೇಟಿ ನೀಡುತ್ತಿದ್ದಾರೆ. ಇದು ಆ ದೇಶದ ಸ್ಥೈರ್ಯ ಹೆಚ್ಚಿಸಿ ಶ್ರೀಲಂಕಾ ಮತ್ತು ಭಾರತದ ಬಾಂದವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಭವ ಇದೆ.

ಮೋದಿ ಅವರು ಕಳೆದ ಅವಧಿಯಲ್ಲಿ ಸಾಕಷ್ಟು ವಿದೇಶ ಪ್ರವಾಸ ಮಾಡಿದ್ದರು, ಇದು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಗೌರವವನ್ನು ತಂದುಕೊಟ್ಟಿತ್ತು, ಬಂಡವಾಳದ ಹರಿವೂ ತಂದಿತ್ತು. ಅದರ ಜೊತೆಗೆ ಟೀಕೆಗಳಿಗೂ ಗುರಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+