• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ?, ಚೀನಾ; ಕುತೂಹಲ ಮೂಡಿಸಿದ ಮೋದಿ ಭಾಷಣ

|
Google Oneindia Kannada News

ನವದೆಹಲಿ, ಜೂನ್ 30 : ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಸಂಜೆ 4 ಗಂಟೆಗೆ ಭಾಷಣ ಮಾಡಲಿದ್ದಾರೆ. ಕೊರೊನಾ ವೈರಸ್ ಸೋಂಕು, ಚೀನಾ ವಿಚಾರ ಯಾವುದರ ಬಗ್ಗೆ ಮಾತನಾಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ನರೇಂದ್ರ ಮೋದಿ ಮಂಗಳವಾರ ಸಂಜೆ 4 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಯಾವ ವಿಚಾರದ ಬಗ್ಗೆ ಮಾತನಾಡಲಿದ್ದಾರೆ? ಎಂಬುದು ನಿಗೂಢವಾಗಿದೆ.

ಇದೀಗ ಅಧಿಕೃತ: Tik Tok ಸೇರಿದಂತೆ 59 Apps ಬಳಕೆ ನಿಷೇಧಇದೀಗ ಅಧಿಕೃತ: Tik Tok ಸೇರಿದಂತೆ 59 Apps ಬಳಕೆ ನಿಷೇಧ

ಕೇಂದ್ರ ಸರ್ಕಾರ ಸೋಮವಾರ ರಾತ್ರಿ ಟಿಕ್ ಟಾಕ್, ಶೇರ್ ಇಟ್ ಸೇರಿದಂತೆ 59 ಚೀನಾದ ಅಪ್ಲಿಕೇಶನ್‌ಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಗಡಿಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಸಂಘರ್ಷದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿತ್ತು.

ಅನ್‌ಲಾಕ್‌2 ಮಾರ್ಗಸೂಚಿ ಪ್ರಕಟ: ಶಾಲೆ, ಜಿಮ್, ಚಿತ್ರಮಂದಿರಕ್ಕೆ ಸಿಕ್ಕಿಲ್ಲ ಅನುಮತಿಅನ್‌ಲಾಕ್‌2 ಮಾರ್ಗಸೂಚಿ ಪ್ರಕಟ: ಶಾಲೆ, ಜಿಮ್, ಚಿತ್ರಮಂದಿರಕ್ಕೆ ಸಿಕ್ಕಿಲ್ಲ ಅನುಮತಿ

ಮತ್ತೊಂದು ಕಡೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. ಈ ಹಿನ್ನಲೆಯಲ್ಲಿ ಮೋದಿ ಯಾವ ವಿಚಾರದ ಕುರಿತು ಮಾತನಾಡಲಿದ್ದಾರೆ? ಎಂದು ಕಾದು ನೋಡಬೇಕಿದೆ.

ಈ ಚೀನಿ App ಬಳಸುತ್ತಿದ್ದರೆ ಅಪಾಯ ಎಚ್ಚರಿಕೆಈ ಚೀನಿ App ಬಳಸುತ್ತಿದ್ದರೆ ಅಪಾಯ ಎಚ್ಚರಿಕೆ

ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿದ್ದ 5ನೇ ಹಂತದ ಲಾಕ್ ಡೌನ್ ಇಂದು ಮುಕ್ತಾಯಗೊಳ್ಳಲಿದೆ. ಸರ್ಕಾರ ಈಗಾಗಲೇ ಜುಲೈ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಅದರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಆದ್ದರಿಂದ ನರೇಂದ್ರ ಮೋದಿ ಕೊರೊನಾ ವಿಚಾರದ ಬದಲು ಚೀನಾ ವಿಚಾರವನ್ನು ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಗಡಿಯಲ್ಲಿ ಭಾರತ, ಚೀನಾ ಯೋಧರ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಮೋದಿ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು.

English summary
Indian prime minister Narendra Modi will address the nation on June 30, 2020 evening at 4 pm. Prime Minister's office tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X