• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಧರೊಂದಿಗೆ ಸಿಯಾಚಿನ್ ನಲ್ಲಿ ಮೋದಿ ದೀಪಾವಳಿ

|
Google Oneindia Kannada News

ಶ್ರೀನಗರ, ಅ. 23: ಪ್ರವಾಹ ಸಂತ್ರಸ್ತರು ಮತ್ತು ಸೈನಿಕರೊಂದಿಗೆ ನರೇಂದ್ರ ಮೋದಿ ಈ ಬಾರಿ ದೀಪಾವಳಿ ಆಚರಿಸಲಿದ್ದಾರೆ. ಪ್ರಾಣದ ಹಂಗು ತೊರೆದು ಹಗಲಿರುಳು ದೇಶವನ್ನು ಕಾಯುತ್ತಿರುವ ಸೈನಿಕರ ಜತೆ ಹಬ್ಬ ಆಚರಿಸುತ್ತೇನೆ. ಹಾಗಾಗಿ ಜಮ್ಮು ಕಾಶ್ಮೀರದ ಸಿಯಾಚಿನ್ ಗೆ ಭೇಟಿ ನೀಡಿ ಯೋಧರೊಂದಿಗೆ ಸಮಯ ಕಳೆಯಲಿದ್ದೇನೆ ಎಂದು ನರೇಂದ್ರ ಮೋದಿ ಟ್ಟಿಟ್ಟರ್ ನಲ್ಲಿ ತಿಳಿಸಿದ್ದಾರೆ.

ದೇಶದ ಜನತೆ ಯೋಧರ ಜತೆ ಸದಾ ಇರುತ್ತದೆ. ಇಂಥ ವಿಶೇಷ ದಿನದಂದು ವೀರ ಯೊಧರೊಂದಿಗೆ ಹಬ್ಬ ಆಚರಿಸುತ್ತಿರುವುದು ಹೆಮ್ಮೆ ತಂದಿದೆ. ಭೀಕರ ಪ್ರವಾಹದಿಂದ ಸಂತ್ರಸ್ತರಾದ ಕಾಶ್ಮೀರದ ಜನರ ನೋವನ್ನು ಹತ್ತಿರದಿಂದ ಆಲಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.[ಸಲ್ಮಾನ್ ಖಾನ್ ರನ್ನು ಹಾಡಿ ಹೊಗಳಿದ ಮೋದಿ]


ಬಿಸಿಲಿರಲಿ, ಚಳಿಯಿರಲಿ ಮನೆಮಂದಿಯನ್ನೆಲ್ಲ ದೂರ ಇಟ್ಟು ದೇಶ ಕಾಯುತ್ತಿರುವ ಯೋಧರೊಂದಿಗೆ ಸಮಯ ಕಳೆಯುವುದು ಸಂತಸ ತಂದಿದೆ. ರಾಷ್ಟ್ರದ ಜನರ ಒಕ್ಕೊರಲ ಅಭಿಪ್ರಾಯವನ್ನು ಸೈನಿಕರಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಸಿಯಾಚಿನ್ ಗೆ ಭೇಟಿ ನೀಡಿದ ನಂತರ ನರೇಂದ್ರ ಮೋದಿ ಶ್ರೀನಗರಕ್ಕೆ ಆಗಮಿಸಿ ಪ್ರವಾಹ ಸಂತ್ರಸ್ತರೊಂದಿಗೆ ದಿನ ಕಳೆಯಲಿದ್ದಾರೆ.

ಸಿಯಾಚಿನ್ ಎಲ್ಲಿದೆ?
ಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿರುವ ಸಿಯಾಚಿನ್ ಯಾವಾಗಲೂ ಹಿಮಚ್ಛಾದಿತಯವಾಗಿರುತ್ತದೆ. ಭಾರತ ಮತ್ತು ಪಾಕಿಸ್ತಾನದ ಗಡಿ ಯಲ್ಲಿರುವ ಸಿಯಾಚಿನ್ ಸಮುದ್ರ ಮಟ್ಟದಿಂದ 18,875ಅಡಿ ಎತ್ತರದಲ್ಲಿದೆ.
ಕೊಂಚ ಅತ್ತ ಇತ್ತ ಸುಳಿದರೆ ಪಾಕಿಸ್ತಾನ, ಚೀನಾದ ಸರಹದ್ದುಗಳು. ಹಿಮಾಲಯದ ಕಾರಕೋರಂ ಪರ್ವತ ಶ್ರೇಣಿಗಳಲ್ಲಿ ಇರುವ ಸಿಯಾಚಿನ್ ಹಿಮನದಿ ಪ್ರದೇಶಕ್ಕೆ ತೆರಳಲು ಎಷ್ಟು ಧೈರ್ಯವಿದ್ದರೂ ಸಾಲದು ಆದರೆ ನಮ್ಮ ಯೋಧರು ಅಲ್ಲಿ ಗಡಿ ಕಾಯುತ್ತಿದ್ದಾರೆ. ಮೈನಸ್ 50 ಡಿಗ್ರಿ ಉಷ್ಣಾಂಶದಲ್ಲಿ ರಾಷ್ಟ್ರಕ್ಕೆ ರಕ್ಷಾಕವಚವಾಗಿ ನಿಂತಿದ್ದಾರೆ.

English summary
Prime Minister Narendra Modi will spend time with soldiers at Siachen ahead of his scheduled visit to J&K to be with flood-hit people of the state on Diwali. The Prime Minister on Thursday heaped praise on soldiers for standing firm to protect the country braving the extreme conditions at Siachen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X