ಬಾಲ್ಯದಲ್ಲಿ ಮೊಸಳೆ ಹಿಡಿದಿದ್ದ ಕತೆ ಹೇಳಿದ ನರೇಂದ್ರ ಮೋದಿ
Recommended Video
ನವದೆಹಲಿ, ಆಗಸ್ಟ್ 13: ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾದ ನರೇಂದ್ರ ಮೋದಿ ಹಾಗೂ ಸಾಹಸಿ ಬೇರ್ ಗ್ರಿಲ್ಸ್ ಅವರ 'ಮ್ಯಾನ್ ವರ್ಸರ್ ವೈಲ್ಡ್' ಕಾರ್ಯಕ್ರಮ ಹಲವರ ಗಮನ ಸೆಳೆದಿದೆ.
ಈ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಮತ್ತು ಬೇರ್ ಗ್ರಿಲ್ಸ್ ಅವರು ಉತ್ತರಾಖಂಡ್‌ನ ಕಾಡುಗಳಲ್ಲಿ ಅಲೆದಾಡುತ್ತಾರೆ. ಕಾರ್ಯಕ್ರಮದಲ್ಲಿ ಮೋದಿ ಮತ್ತು ಬೇರ್ ಗ್ರಿಲ್ಸ್ ನಡುವೆ ನಡೆದಿರುವ ಸಂಭಾಷಣೆ ಸ್ವಾರಸ್ಯಕರವಾಗಿದೆ. ಸಂಭಾಷಣೆಯ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ.
ನರೇಂದ್ರ ಮೋದಿ ಅವರು ತಮ್ಮ ಬಾಲ್ಯ, ಪ್ರಕೃತಿಯ ಬಗ್ಗೆ ತಮಗಿರುವ ಪ್ರೀತಿ, ರಾಜಕೀಯ, ವೈಯಕ್ತಿಕ ಜೀವನ ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಬಾಲ್ಯದಲ್ಲಿ ನಡೆದ ಸ್ವಾರಸ್ಯಕರ ಕತೆಯೊಂದನ್ನು ಮೋದಿ ಅವರು ಬೇರ್ ಗ್ರಿಲ್ಸ್ ಜೊತೆ ಹಂಚಿಕೊಂಡಿದ್ದಾರೆ.

ಬಾಲ್ಯದಲ್ಲಿ ನರೇಂದ್ರ ಮೋದಿ ಅವರು ನದಿಯಲ್ಲಿ ಈಜಾಡುತ್ತಿದ್ದಾಗ ಮೊಸಳೆ ಮರಿಯೊಂದನ್ನು ಕಂಡರಂತೆ. ಅದನ್ನು ಸಾಕಬೇಕು ಎನಿಸಿ ಅದನ್ನು ಹಿಡಿದು ಮನೆಗೆ ಕೊಂಡೊಯ್ದರಂತೆ, ಆದರೆ ಮೋದಿ ಅವರ ತಾಯಿಯವರು ಬೈದಿದ್ದಕ್ಕೆ ಅದನ್ನು ಮತ್ತೆ ನದಿಗೆ ಬಿಟ್ಟು ಬಂದರಂತೆ ಮೋದಿ.
ಬಾಲ್ಯದಲ್ಲಿ ಬಡತನ ಇತ್ತು, ಆದರೆ ಶಿಸ್ತಿನಿಂದಲೇ ಶಾಲೆಗೆ ಹೋಗಬೇಕು ಎಂಬ ಕಾರಣಕ್ಕೆ ತಾಮ್ರದ ಚಂಬಿಗೆ ಇದ್ದಿಲು ಹಾಕಿ ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಂಡು ಶಾಲೆಗೆ ಹೋಗುತ್ತಿದ್ದೆ ಎಂದು ಮೋದಿ ಅವರು ಹೇಳಿದ್ದಾರೆ.
ಹುಲಿಗಳು ತುಂಬಿರುವ ಕಾಡಿನಲ್ಲಿ ಸಂಚರಿಸುವುದಕ್ಕೆ ನೀವು ಸಿದ್ಧರಿದ್ದೀರಾ? ಎಂದು ಗ್ರಿಲ್ಸ್ ಮೋದಿ ಅವರನ್ನು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸಿದ ಮೋದಿ, 'ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಇದೆ ಎಂದುಕೊಂಡಾಗಲೇ ಸಮಸ್ಯೆಗಳು ಪ್ರಾರಂಭವಾಗುತ್ತವೆ. ನಾವು ಪ್ರಕೃತಿಯಲ್ಲಿ ಒಬ್ಬರು ಎಂದು ಕೊಂಡರೆ ಸಮಸ್ಯೆಗಳು ಬರುವುದಿಲ್ಲ' ಎಂದು ಹೇಳಿದರು.
'ಜನಸೇವೆಯೇ ಮೊದಲ ಆದ್ಯತೆ ಆದಾಗ ರಜೆ, ಕೆಲಸದ ದಿನ ಎಂಬುದೆಲ್ಲಾ ನಗಣ್ಯ, ಮುಖ್ಯಮಂತ್ರಿ ಆದಂದಿನಿಂದಲೂ ನಾನು ರಜೆ ತೆಗೆದುಕೊಂಡಿಲ್ಲ. ಕಳೆದ 18 ವರ್ಷದಲ್ಲಿ ಈ ಪ್ರವಾಸವೇ ನನ್ನ ಮೊದಲ ರಜೆ' ಎಂದು ಮೋದಿ ಅವರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.











Click it and Unblock the Notifications