ಮೋದಿ ಚುನಾವಣೆ ಪ್ರಚಾರ, ಗಿನ್ನಿಸ್ ದಾಖಲೆ?

ನವದೆಹಲಿ, ಜೂ. 15: ಗುಜರಾತಿನ ಮಾಜಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಕೈಗೊಂಡ ಪ್ರಚಾರ ಕಾರ್ಯ ಫಲ ನೀಡಿ ಇಂದು ಮೋದಿ ದೇಶದ ಪ್ರಧಾನಿಯಾಗಿರುವ ಕಥೆ ಎಲ್ಲರಿಗೂ ತಿಳಿದಿದೆ. ವೈವಿಧ್ಯಮಯ ಪ್ರಚಾರ ಕಾರ್ಯ ನಡೆಸಿದ್ದ ಮೋದಿ ಅವರು ಈಗ ಗಿನ್ನಿಸ್ ದಾಖಲೆ ಪುಸ್ತಕ ಸೇರುವ ಸಾಧ್ಯತೆ ಕಂಡು ಬಂದಿದೆ.

ಹೈಟೆಕ್ ಪ್ರಚಾರ, 3 ಡಿ ಪ್ರಚಾರಗಳ ಜತೆ ಭಾರತ ಸಂಕಲ್ಪ, ಭಾರತ್ ವಿಜಯ್ ಯಾತ್ರೆ ಹೆಸರಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಗುಜರಾತಿನಿಂದ ಅರುಣಾಚಲ ಪ್ರದೇಶದವರೆಗೂ ನರೇಂದ್ರ ಮೋದಿ ಅವರು ಕೈಗೊಂಡ ಚುನಾವಣಾ ಪ್ರಚಾರ ಇಡೀ ವಿಶ್ವದ ಗಮನ ಸೆಳೆದಿತ್ತು.

ಚುನಾವಣಾ ಪ್ರಚಾರದ ಭರ್ಜರಿ ಲಾಭದೊಂದಿಗೆ ಬಿಜೆಪಿ ಕಂಡರಿಯದ ಯಶಸ್ಸು ಗಳಿಸಿದ್ದು ಈಗ ಇತಿಹಾಸ. ಲೋಕಸಭೆ ಚುನಾವಣೆ 2014ರ ಸಂದರ್ಭದಲ್ಲಿ ಮೋದಿ ನಡೆಸಿದ ಚುನಾವಣಾ ಮೆರವಣಿಗೆಗಳು ಈಗ ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. [ಲೋಕಸಭೆ ಚುನಾವಣೆ ಚುನಾವಣೆ ಪ್ರಚಾರ ಚಿತ್ರಗಳು]

Narendra Modi may enter Guinness Book of World Records

ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಸರಿಸುಮಾರು 1,800ಕ್ಕೂ ಅಧಿಕ ಸಾರ್ವಜನಿಕ ಸಮಾವೇಶಗಳನ್ನುದ್ದೇಶಿಸಿ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅತೀ ಹೆಚ್ಚು ಸಾರ್ವಜನಿಕ ಚುನಾವಣಾ ಪ್ರಚಾರ ಮೆರವಣಿಗೆ /ಸಭೆಗಳಲ್ಲಿ ಭಾಗವಹಿಸಿದ ದಾಖಲೆ ಮೋದಿ ಅವರ ಪಾಲಾಗಲಿದೆ. [ಫಲಿತಾಂಶ 2014: ಪಕ್ಷಗಳ ಬಲಾಬಲ]

ಈ ದಾಖಲೆ ಸದ್ಯ ಜಗತ್ತಿನ ಯಾವುದೇ ರಾಜಕಾರಣಿ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಮೋದಿ ಹೆಸರನ್ನು ಗಿನ್ನಿಸ್ ಬುಕ್ ​'ಗೆ ಸೇರಿಸುವಂತೆ ಆಗ್ರಾ ಮೂಲದ ವರ್ಲ್ಡ್ ರೆಕಾರ್ಡ್ ಹೋಲ್ಡರ್ಸ್ ಆರ್ಗನೈಜೇಶನ್(WRHO) ಗಿನ್ನಿಸ್ ದಾಖಲೆ ಸಂಸ್ಥೆಗೆ ಮನವಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ WRHO ಪ್ರಧಾನ ಕಾರ್ಯದರ್ಶಿ ಡಾ. ಪಾರ್ಥಸಾರಥಿ ಸೇನ್ ಶರ್ಮ, ಚುನಾವಣೆಯ ಸಂದರ್ಭದಲ್ಲಿ ಮೋದಿ ಒಟ್ಟು 1,800 ಸಾರ್ವಜನಿಕ ಭಾಷಣಗಳನ್ನು ಮಾಡಿರುವ ವಿವರಗಳನ್ನು ಗಿನ್ನಿಸ್ ದಾಖಲೆಗೆ ಕಳುಹಿಸಲಾಗಿದೆ.

ಗಿನ್ನಿಸ್ ರೆಕಾರ್ಡ್ ಸಮಿತಿಯಿಂದ ಪ್ರತಿಕ್ರಿಯೆ ರೂಪದಲ್ಲಿ ಇಮೇಲ್ ಬಂದಿದ್ದು ನಾವು ಕಳಿಸಿದ ದಾಖಲೆಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದು ಪಾರ್ಥಸಾರಧಿ ತಿಳಿಸಿದ್ದಾರೆ. ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಚುನಾವಣೆ ಎಂದರೆ ಹಲವು ಅಚ್ಚರಿಗಳ ತವರು ಎನ್ನುವುದು ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+