• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

75ನೇ ಮನ್ ಕೀ ಬಾತ್; ಕೇಳುಗರಿಗೆ ಧನ್ಯವಾದ ಅರ್ಪಿಸಿದ ಮೋದಿ

|

ನವದೆಹಲಿ, ಮಾರ್ಚ್ 28: "ದೇಶದ ಮೂಲೆ ಮೂಲೆಯ ಜನರ ಜೊತೆ ನಾವು ಮನ್ ಕೀ ಬಾತ್ ಮೂಲಕ ಮಾತನಾಡಿದ್ದೇವೆ. ಇಂದು 75ನೇ ಆವೃತ್ತಿಯ ಕಾರ್ಯಕ್ರಮವಾಗಿದೆ. ಇದಕ್ಕಾಗಿ ಹಲವಾರು ಜನರು ನನಗೆ ಅಭಿನಂದನೆ ಸಲ್ಲಿಸಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತದ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಇದು ಮನ್ ಕೀ ಬಾತ್ ಅವೃತ್ತಿಯ 75ನೇ ಕಾರ್ಯಕ್ರಮವಾಗಿದೆ.

ಪರಿಸರ, ನದಿ, ತಂತ್ರಜ್ಞಾನ, ರೈತ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ನಾವು ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾರತದ ನಿರ್ಮಾಣಕ್ಕೆ ಯೋಗದಾನ ಮಾಡಿದ ಮಹಿನೀಯರ ಬಗ್ಗೆ ಮಾತನಾಡಿದ್ದೇವೆ ಎಂದು ಮೋದಿ ಹೇಳಿದರು.

ದೇಶ ಉದ್ದೇಶಿಸಿ ಮೋದಿ ಭಾಷಣ; ಮನ್ ಕೀ ಬಾತ್ ಮುಖ್ಯಾಂಶಗಳು

"ನನ್ನ ಈ ವಿಚಾರ ಯಾತ್ರೆಯಲ್ಲಿ ಹಲವಾರು ಜನರು ಪಾಲ್ಗೊಂಡಿದ್ದಾರೆ. ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ಎಲ್ಲಾ ಕೇಳುಗರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದರು.

ಜೀವ ವೈವಿಧ್ಯವನ ಭಾಗ-10: ಮನ್ ಕಿ ಬಾತ್; ಹೇಳಿದ್ದನ್ನು ಮಾಡಿ ಪ್ಲೀಸ್

"ನಾವು ಸ್ವಾತಂತ್ರ್ಯ ಸಂಗ್ರಾಮದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ದೇಶದ ವಿವಿಧ ಪ್ರದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಾರ್ಖಂಡ್‌ ಆದಿವಾಸಿ ಜನರ ಸ್ವಾತಂತ್ರ್ಯ ಹೋರಾಟದ ಮಾಹಿತಿಯನ್ನು ಬೇರೆಯವರಿಗೆ ತಿಳಿಸಿ ಎಂದು ಮನವಿ ಮಾಡಿದ್ದಾರೆ" ಎಂದು ಮೋದಿ ಹೇಳಿದರು.

ಮೋದಿ ಭಾಷಣದ ಮುಖ್ಯಾಂಶಗಳು

* ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಜನರು ಕೋವಿಡ್ ವಿರುದ್ಧದ ಹೋರಾಟ ಆರಂಭಿಸಿದರು. ಆರೋಗ್ಯ ಕಾರ್ಯಕರ್ತರು ಪ್ರತಿಯೊಬ್ಬ ಜನರ ಜೀವ ಉಳಿಸಲು ಪಣತೊಟ್ಟರು. ಲಸಿಕೆ ಯಾವಾಗ ಬರುತ್ತದೆ? ಎಂಬ ಚರ್ಚೆಗಳು ನಡೆದವು ಎಂದು ಮೋದಿ ಹೇಳಿದರು.

* ಇಂದು ನಮಗೆ ಹೆಮ್ಮೆ ಇದೆ. ವಿಶ್ವದಲ್ಲಿಯೇ ಅತಿದೊಡ್ಡ ಕೋವಿಡ್ ಲಸಿಕಾ ಅಭಿಯಾನವನ್ನು ನಡೆಸುತ್ತಿದ್ದೇವೆ. ಜನರು ತಮ್ಮ ಮನೆಯಲ್ಲಿರುವ ಹಿರಿಯರಿಗೆ ಲಸಿಕೆ ಹಾಕಿಸಿ ಅದರ ಫೋಟೋವನ್ನು ಟ್ವೀಟರ್‌ಗಳಲ್ಲಿ ಹಾಕುತ್ತಿದ್ದಾರೆ.

* ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಮಿಥಾಲಿ ರಾಜ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಯನ್ನು ಸಲ್ಲಿಸಿದರು. ಮಿಧಾಲಿ ರಾಜ್‌ನ ಕಠಿಣ ಶ್ರಮ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಪ್ರೇರಣೆ ಎಂದು ಮೋದಿ ಹೇಳಿದರು.

* ಚೆನ್ನೈ ಲೈಟ್ ಹೌಸ್ ಬಗ್ಗೆ ಗುರುಪ್ರಸಾದ್ ಅವರು ವಿಸ್ತಾರವಾದ ವಿವರಗಳನ್ನು ನೀಡಿದ್ದಾರೆ. ಲೈಟ್ ಹೌಸ್ ಕಾರ್ಯ ನಿರ್ವಹಣೆ, ಅಲ್ಲಿರುವ ಮ್ಯೂಸಿಯಂ ಬಗ್ಗೆಯೂ ಮಾಹಿತಿಗಳನ್ನು ನೀಡಿದ್ದಾರೆ. ಇದು ಪ್ರವಾಸೋದ್ಯಮ ಕೇಂದ್ರವಾಗಿದೆ.

* ಗುಜರಾತ್‌ನ ಜಿಂಜೋರಾದಲ್ಲಿ ಒಂದು ಲೈಟ್ ಹೌಸ್ ಇದೆ. ಈ ಲೈಟ್ ಹೌಸ್‌ನಿಂದ ಸಮುದ್ರ 100 ಕಿ. ಮೀ. ದೂರದಲ್ಲಿದೆ.

* 2004ರಲ್ಲಿ ಭಾರತದಲ್ಲಿ ಸುನಾಮಿ ಬಂದಾಗ ನಾವು ಲೈಟ್ ಹೌಸ್ ನಲ್ಲಿ ಕೆಲಸ ಮಾಡುವ 14 ಕಾರ್ಮಿಕರನ್ನು ಕಳೆದುಕೊಂಡಿದ್ದೇವೆ.

* ಕೃಷಿಯಲ್ಲಿ ಆಧುನೀಕರಣ ಅಳವಡಿಕೆ ಮಾಡಿಕೊಳ್ಳುವಲ್ಲಿ ನಾವು ತಡ ಮಾಡಿದ್ದೇವೆ. ಈಗ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಿಕೊಳ್ಳುತ್ತಿದ್ದೇವೆ. ಈಗ ಜೇನು ಕೃಷಿಯೂ ದೇಶದಲ್ಲಿ ಪ್ರಸಿದ್ಧವಾಗುತ್ತಿದೆ.

* ಪಶ್ಚಿಮ ಬಂಗಾಳದ ಒಂದು ಗ್ರಾಮದಲ್ಲಿ ಜೇನು ಸಾಕಣೆಯಲ್ಲಿ ತೊಡಗಿದ್ದಾರೆ. ಇಲ್ಲಿ ಸಿಗುವ ಜೇನು ತುಪ್ಪಕ್ಕೆ ಭಾರೀ ಬೇಡಿಕೆ ಇದೆ. ಗುಜರಾತ್‌ನಲ್ಲಿ ಬನಾಸ್ಕಟ್ ನಲ್ಲಿ ಜೇನು ಸಾಕಣೆಯಿಂದಲೇ ಸಾವಿರಾರು ರೂಪಾಯಿ ಆದಾಯವನ್ನು ಗಳಿಸುತ್ತಿದ್ದಾರೆ.

* ಜೇನುತುಪ್ಪಕ್ಕೆ ದೇಶದಲ್ಲಿ ಭಾರೀ ಬೇಡಿಕೆ ಇದೆ. ಔಷಧಿ, ಆಹಾರ ಸೇರಿದಂತೆ ವಿವಿಧ ವಲಯಗಳಲ್ಲಿ ಜೇನು ತುಪ್ಪದ ಅಗತ್ಯವಿದೆ. ದೇಶದ ರೈತರು ಕೃಷಿಯ ಜೊತೆ ಜೇನು ಸಾಕಣೆಯಲ್ಲಿ ತೊಡಗಬೇಕು ಎಂದು ನಾನು ಬಯಸುತ್ತೇನೆ.

* ಕೆಲವು ದಿದನಗಳ ಹಿಂದೆ ನಾವು ವಿಶ್ವಗುಬ್ಬಿ ದಿನವನ್ನು ಆಚರಣೆ ಮಾಡಿದೆವು. ಈಗ ಹಲವು ವರ್ಷಗಳ ಹಿಂದೆ ಗುಬ್ಬಿ ಕಾಣುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ. ಈಗ ಅವುಗಳನ್ನು ಸಂರಕ್ಷಣೆ ಮಾಡಬೇಕಿದೆ. ಬನರಾಸ್‌ನಲ್ಲಿ ಗುಬ್ಬಿಗಳ ವಾಸಕ್ಕಾಗಿಯೇ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

* ಹೋಳಿ ಹಬ್ಬದ ಮಹತ್ವವನ್ನು ವಿವರಿಸಿದ ಪ್ರಧಾನಿ ಮೋದಿ ಯುಗಾದಿ ಮೂಲಕ ಹೊಸ ವರ್ಷ ಆರಂಭವಾಗುತ್ತದೆ ಎಂದು ಹೇಳಿದ ಮೋದಿ, ಬೇರೆ ಬೇರೆ ರಾಜ್ಯದಲ್ಲಿ ಆಚರಣೆ ಮಾಡುವ ಹಬ್ಬಗಳ ಬಗ್ಗೆ ಹೇಳಿದರು.

* ಈ ಹಬ್ಬಗಳ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಶುಭಾಶಯಗಳನ್ನು ಸಲ್ಲಿಸಿದರು. ಈಸ್ಟರ್ ಹಬ್ಬದ ಸಂದರ್ಭದಲ್ಲಿ ದೇಶ ಮತ್ತು ವಿದೇಶದ ಕ್ರಿಶ್ಚಿಯನ್ ಸಮುದಾಯದವರಿಗೆ ಶುಭಾಶಯಗಳನ್ನು ಸಲ್ಲಿಸಿದರು.

English summary
Prime minister of India Narendra Modi Mann ki baat radio program March 28, 2020. Modi addressed the nation. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X