ಗೆಳೆಯನ ಅಗಲಿಕೆಗೆ ದೂರದ ದೇಶದಿಂದಲೇ ಕಣ್ಣೀರಿಟ್ಟ ಪ್ರಧಾನಿ ಮೋದಿ
ನವದೆಹಲಿ, ಆಗಸ್ಟ್ 24: ಈ ತಿಂಗಳ ಆರಂಭದಲ್ಲಷ್ಟೇ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಕಳೆದುಕೊಂಡು ಆಘಾತ ಅನುಭವಿಸಿದ್ದ ಬಿಜೆಪಿಗೆ ಮತ್ತೊಂದು ಕಹಿ ಸುದ್ದಿ ಎದುರಾಗಿದೆ. ಅರುಣ್ ಜೇಟ್ಲಿ ಅವರ ನಿಧನದಿಂದ ಬಿಜೆಪಿ ದೊಡ್ಡ ಚಿಂತನಾ ಶಕ್ತಿಯೊಂದನ್ನು ಕಳೆದುಕೊಂಡಿದೆ.
ಅರುಣ್ ಜೇಟ್ಲಿ ಅವರಿಗೆ ಪರಮಾಪ್ತರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಬಹುರಾಷ್ಟ್ರಗಳ ಪ್ರವಾಸದಲ್ಲಿರುವ ಮೋದಿ ಅವರು ಶನಿವಾರ ಯುಎಇಯಲ್ಲಿದ್ದಾರೆ. ದೂರದ ಊರಿನಿಂದಲೇ ಅವರು ದುಃಖ ಹಂಚಿಕೊಂಡಿದ್ದಾರೆ. ಮೋದಿ ಅವರು ಇದೇ ವಿದೇಶ ಪ್ರವಾಸ ಮೊಟಕುಗೊಳಿಸಿ ಬರಲಿದ್ದಾರೆಯೇ ಅಥವಾ ಭಾನುವಾರ ಆಗಮಿಸಲಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ.
ಜೇಟ್ಲಿ ಅವರ ಅಗಲುವಿಕೆಯ ನೋವನ್ನು ಹಂಚಿಕೊಂಡು ಮೋದಿ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಜೇಟ್ಲಿ ಒಬ್ಬ ರಾಜಕೀಯ ದಿಗ್ಗಜ. ಬೌದ್ಧಿಕ ಮತ್ತು ಕಾನೂನಿನ ಜ್ಞಾನವುಳ್ಳವರು. ಭಾರತಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದ ಮಹಾನ್ ನಾಯಕ ಅವರು. ಅವರ ನಿಧನ ಅತೀವ ದುಃಖ ತಂದಿದೆ. ಅವರ ಪತ್ನಿ ಸಂಗೀತಾ ಅವರೊಂದಿಗೆ ಮತ್ತು ಮಗ ರೋಹನ್ ಅವರೊಂದಿಗೆ ಮಾತನಾಡಿ ನನ್ನ ಸಂತಾಪ ಸೂಚಿಸಿದ್ದೇನೆ. ಓಂ ಶಾಂತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಬಹುಮುಖಿ ವ್ಯಕ್ತಿಯತ್ವದ ಜೇಟ್ಲಿ
'ಜೀವನಪೂರ್ತಿ ಮೇಧಾವಿತನದ ವರ ಪಡೆದವರು, ಅದ್ಭುತ ಹಾಸ್ಯ ಪ್ರಜ್ಞೆ ಮತ್ತು ಚರಿಷ್ಮಾ ಹೊಂದಿದ್ದ ಅರುಣ್ ಜೇಟ್ಲಿ ಅವರನ್ನು ಸಮಾಜದ ಎಲ್ಲ ವರ್ಗಗಳ ಜನರೂ ಮೆಚ್ಚಿಕೊಳ್ಳುತ್ತಿದ್ದರು. ಅವರು ಬಹುಮುಖಿ ವ್ಯಕ್ತಿತ್ವವುಳ್ಳವರು. ಭಾರತದ ಸಂವಿಧಾನ, ಇತಿಹಾಸ, ಸಾರ್ವಜನಿಕ ನೀತಿ, ಅಧಿಕಾರ ಮತ್ತು ಆಡಳಿತದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು' ಎಂದು ಮೋದಿ ಸ್ಮರಿಸಿದ್ದಾರೆ.

ಬೆಳವಣಿಗೆಗೆ ಮಹತ್ವದ ಕೊಡುಗೆ
'ತಮ್ಮ ಸುದೀರ್ಘಾವಧಿ ರಾಜಕೀಯ ವೃತ್ತಿ ಬದುಕಿನಲ್ಲಿ ಅರುಣ್ ಜೇಟ್ಲಿ ಅವರು ವಿವಿಧ ಸಚಿವ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಈ ಮೂಲಕ ಅವರು ಭಾರತದ ಆರ್ಥಿಕ ಬೆಳವಣಿಗೆಗೆ, ನಮ್ಮ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಲು, ಜನಪರ ಕಾನೂನುಗಳನ್ನು ಸೃಷ್ಟಿಸಲು ಮತ್ತು ಇತರೆ ದೇಶಗಳೊಂದಿಗೆ ವ್ಯಾಪಾರ ವೃದ್ಧಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ' ಎಂದು ಶ್ಲಾಘಿಸಿದ್ದಾರೆ.

ಪಕ್ಷದ ನೆಚ್ಚಿನ ವ್ಯಕ್ತಿ
'ಬಿಜೆಪಿ ಮತ್ತು ಅರುಣ್ ಜೇಟ್ಲಿ ನಡುವಿನದ್ದು ಮುರಿಯಲಾಗದ ಬಾಂಧವ್ಯ. ಪ್ರಖರ ವಿದ್ಯಾರ್ಥಿ ನಾಯಕರಾಗಿ ತುರ್ತು ಪರಿಸ್ಥಿತಿ ವೇಳೆ ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಮುಂಚೂಣಿ ಹೋರಾಟದಲ್ಲಿದ್ದರು. ಅವರು ನಮ್ಮ ಪಕ್ಷದ ಅತಿ ಮೆಚ್ಚುಗೆಯ ವ್ಯಕ್ತಿಯಾಗಿ ಅವರು ಬೆಳೆದಿದ್ದರು. ಪಕ್ಷದ ಕಾರ್ಯಕ್ರಮಗಳನ್ನು ಮತ್ತು ಸಿದ್ಧಾಂತಗಳನ್ನು ಸಮಾಜದಲ್ಲಿ ಅಭಿವ್ಯಕ್ತಿಸುವ ಸಾಮರ್ಥ್ಯ ಹೊಂದಿದ್ದರು' ಎಂದಿದ್ದಾರೆ.

ಮಿಸ್ ಮಾಡಿಕೊಳ್ಳಲಿದ್ದೇವೆ
'ಜೇಟ್ಲಿ ಅವರ ನಿಧನದಿಂದ ನಾನು ಹಲವು ದಶಕಗಳಿಂದ ಬಲ್ಲೆನೆಂಬ ಗೌರವ ಹೊಂದಿದ್ದ ಮೌಲ್ಯಯುತ ಗೆಳೆಯನನ್ನು ಕಳೆದುಕೊಂಡಿದ್ದೇನೆ. ವಿಚಾರಗಳ ಕುರಿತ ಅವರ ಒಳನೋಟಗಳು ಮತ್ತು ವಿಚಾರಗಳನ್ನು ಕೂಲಂಕಷವಾಗಿ ಅರ್ಥಮಾಡಿಕೊಳ್ಳುವ ಶಕ್ತಿ ಕೆಲವೇ ಮಂದಿಗೆ ಇರುವಂಥದ್ದು. ಅವರು ಚೆನ್ನಾಗಿ ಬದುಕಿದ್ದರು, ಅನೇಕ ಸಂತಸದ ಸ್ಮರಣೀಯ ಗಳಿಗೆಗಳೊಂದಿಗೆ ನಮ್ಮನ್ನು ಅವರು ಬಿಟ್ಟುಹೋಗಿದ್ದಾರೆ. ನಾವು ಅವರನ್ನು ಮಿಸ್ ಮಾಡಿಕೊಳ್ಳಲಿದ್ದೇವೆ' ಎಂದು ಹೇಳಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications