ಪ್ರಧಾನಿ ಮೋದಿ-ಕಾಂಗ್ರೆಸ್ ಇಬ್ಬರಿಂದಲೂ ತಪ್ಪು ಮಾಹಿತಿ
Recommended Video

ಬೆಂಗಳೂರು, ಮೇ 4: ಕಲಬುರಗಿಯಲ್ಲಿ ಗುರುವಾರ ಪ್ರಚಾರ ಭಾಷಣ ನಡೆಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ಕುರಿತು ಪ್ರಸ್ತಾಪಿಸಿದ್ದರು. ಈ ಇಬ್ಬರನ್ನೂ ಕಾಂಗ್ರೆಸ್ ಅವಮಾನಿಸಿತ್ತು ಎಂದು ಆರೋಪಿಸಿದ್ದರು.
ಅವರು ಈ ವೇಳೆ ನೀಡಿದ್ದ ಮಾಹಿತಿಯಲ್ಲಿ ತಪ್ಪು ಅಂಶಗಳಿವೆ ಎಂದು ಕಾಂಗ್ರೆಸ್ ವಿವರವಾದ ಟ್ವೀಟ್ ಮಾಡಿತ್ತು. ಆದರೆ, ಕಾಂಗ್ರೆಸ್ ಮಾಡಿರುವ ಪ್ರತಿ ಟ್ವೀಟ್‌ನಲ್ಲಿಯೂ ತಪ್ಪುಗಳಿವೆ.
1948ರಲ್ಲಿ ಜನರಲ್ ತಿಮ್ಮಯ್ಯ ಅವರ ನೇತೃತ್ವದಲ್ಲಿ ಯುದ್ಧದಲ್ಲಿ ಭಾರತ ಜಯಗಳಿಸಿತು. ಆದರೆ, ಯುದ್ಧದ ಬಳಿಕ ಕಾಶ್ಮೀರವನ್ನು ರಕ್ಷಿಸಿದ ನಾಯನನ್ನು ಪ್ರಧಾನಿ ನೆಹರೂ ಮತ್ತು ರಕ್ಷಣಾ ಸಚಿವ ಕೃಷ್ಣ ಮೆನನ್ ಅವಮಾನಿಸಿದ್ದರು ಎಂದು ಮೋದಿ ಆರೋಪಿಸಿದ್ದರು.

ಆದರೆ, ಸ್ವಾತಂತ್ರ್ಯಾನಂತರ ನಡೆದ ಮೊದಲ ಸಮರದಲ್ಲಿ ಜನರಲ್ ಫ್ರಾನ್ಸಿಸ್ ಬುಚರ್ ಸೇನೆಯ ನೇತೃತ್ವ ವಹಿಸಿದ್ದರು. ಜನರಲ್ ತಿಮ್ಮಯ್ಯ ಅವರು ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೇನೆಯ ನೇತೃತ್ವ ವಹಿಸಿದ್ದರು, ಅವರು ಸೇನಾ ಮುಖ್ಯಸ್ಥರಾಗಿದ್ದ 1957ರಲ್ಲಿ.
ಈ ವಿಚಾರದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಮುಂದಾದ ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸರ್ಜೆವಾಲ, 'ಮೋದಿ ಅವರೇ, ಇತಿಹಾಸದ ಕುರಿತು ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ. ನಳಂದಾದಿಂದ ಮಿಸೆಸ್ ಸಿರಿಸೇನಾ ಅವರವರೆಗೂ, ಮೋಹನ್‌ಲಾಲ್ ಅವರಿಂದ ಜನರಲ್ ತಿಮ್ಮಯ್ಯ ಅವರವರೆಗೂ ಪ್ರಮಾದಗಳನ್ನು ಮಾಡುತ್ತಲೇ ಇದ್ದೀರಿ. ಕರ್ನಾಟಕದ ಹೆಮ್ಮೆ ಜನರಲ್ ತಿಮ್ಮಯ್ಯ ಅವರು 1947-52ರ ಅವಧಿಯಲ್ಲಿ ಇಂಗ್ಲೆಂಡ್‌ನ ಹೈ ಕಮಿಷನರ್ ಆಗಿದ್ದರು, ಸೇನಾ ಮುಖ್ಯಸ್ಥರಲ್ಲ ಎಂದು ಟ್ವೀಟ್ ಮಾಡಿದ್ದರು.
Modi ji,
— Randeep Singh Surjewala (@rssurjewala) 3 May 2018
Better start reading from a paper to brush up your knowledge of history.
Gen Thimayya became Army Chief only on 8th May 1957 and not 1947 as you alleged.
V K Krishna Menon was ambassador to UK between 1947-52 & not Defence Minister as you alleged.
ತಾವು ತಪ್ಪು ಮಾಹಿತಿ ನೀಡಿದ್ದು ಅರಿವಾದ ಕೂಡಲೇ ಸರ್ಜೆವಾಲ ಆ ಟ್ವೀಟ್‌ಅನ್ನು ಅಳಿಸಿಹಾಕಿ ಹೊಸ ಟ್ವೀಟ್ ಮಾಡಿದ್ದರು. ಜನರಲ್ ತಿಮ್ಮಯ್ಯ ಅವರು ಸೇನಾ ಮುಖ್ಯಸ್ಥರಾಗಿದ್ದು 1957ರ ಮೇ 8 ರಂದು. ನೀವು ಹೇಳಿರುವಂತೆ 1947ರಲ್ಲಿ ಅಲ್ಲ. ಅಲ್ಲದೆ, ಕೃಷ್ಣಮೆನನ್ ಅವರು 1947-52 ಇಂಗ್ಲೆಂಡ್‌ನ ರಾಯಭಾರಿಯಾಗಿದ್ದರು. ನೀವು ಆರೋಪಿಸಿರುವಂತೆ ರಕ್ಷಣಾ ಸಚಿವರಲ್ಲ ಎಂದು ಟ್ವೀಟ್ ಮಾಡಿದ್ದರು.
ಮೋದಿ ಅವರ ಹೇಳಿಕೆಗಳು ಸುಳ್ಳು ಎಂಬುದನ್ನು ಸಾಬೀತುಪಡಿಸುವ ತರಾತುರಿಯಲ್ಲಿ ಕಾಂಗ್ರೆಸ್ ಕೂಡ ತಪ್ಪು ಮಾಹಿತಿಗಳನ್ನು ನೀಡುತ್ತಿದೆ. ಇದು ಜನರಲ್ಲಿ ಗೊಂದಲಗಳನ್ನು ಉಂಟುಮಾಡುತ್ತಿದೆ.












Click it and Unblock the Notifications