ದೇಶ ಒಡೆಯವುದು ಕಾಂಗ್ರೆಸ್ ಕಾಯಕ : ನರೇಂದ್ರ ಮೋದಿ

ಕಾನ್ಪುರ, ಅ.19 : "ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತಿದ್ದೇವೆ. ನಮಗೆ ಮತ ನೀಡಿ, ದೇಶವನ್ನು ಅಭಿವೃದ್ಧಿ ಮಾಡುತ್ತೇವೆ" ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೇಶದ ಜನರಿಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತವನ್ನು ಕಟ್ಟೋಣ ಬನ್ನಿ ಎಂದು ಕರೆ ನೀಡಿದ್ದಾರೆ.

ಶನಿವಾರ ಉತ್ತರ ಪ್ರದೇಶದ ಕಾನ್ಪುರದಲ್ಲಿ ನರೇಂದ್ರ ಮೋದಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುವ ಮೂಲಕ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಕಾಂಗ್ರೆಸ್ ದೇಶವನ್ನು ಒಡೆಯುತ್ತಿದೆ. ನಾವು ಒಗ್ಗಟ್ಟಿನಲ್ಲಿ ನಂಬಿಕೆ ಹೊಂದಿದ್ದು, ದೇಶವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಮೋದಿ ಹೇಳಿದರು.

ದೇಶವನ್ನು ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಬ್ರಿಟಿಷರಿಂದ ಕಲಿತಿದೆ. ಆದ್ದರಿಂದ ದೇಶವನ್ನು ಜಾತಿ, ಮತ, ವರ್ಗಗಳ ಆಧಾರದ ಮೇಲೆ ಒಡೆದು ಆಡಳಿತ ನಡೆಸುತ್ತದೆ. ಬಿಜೆಪಿ ಒಗ್ಗಟ್ಟು ಮತ್ತು ಅಭಿವೃದ್ಧಿಯಲ್ಲಿ ನಂಬಿಕೆ ಹೊಂದಿದೆ. ಆದ್ದರಿಂದ ತಮಗೆ ಮತ ನೀಡಿ ಎಂದು ಮೋದಿ ಮನವಿ ಮಾಡಿದರು.

ತಮ್ಮ ಭಾಷಣದ ತುಂಬಾ ಕೇಂದ್ರ ಯುಪಿಎ ಸರ್ಕಾರವನ್ನು ಟೀಕಿಸಿದ ಮೋದಿ, ಬಾಯಲ್ಲಿ ಚಿನ್ನದ ಚಮಚವಿಟ್ಟುಕೊಂಡು ಹುಟ್ಟಿದವರಿಗೆ ಬಡತನದ ಬಗ್ಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕುಟುಕಿದರು. (ಮೋದಿ ಭಾಷಣದ ಮುಖ್ಯಾಂಶಗಳು)

ಕಾಂಗ್ರೆಸ್ ಮುಕ್ತ ಭಾರತ ಕಟ್ಟೋಣ

ಕಾಂಗ್ರೆಸ್ ಮುಕ್ತ ಭಾರತ ಕಟ್ಟೋಣ

ಬಿಜೆಪಿ ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತಿದೆ. ನಮಗೆ ಬೆಂಬಲ ನೀಡಿ. ದೇಶವನ್ನು ನಾವು ಅಭಿವೃದ್ಧಿ ಪಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಹೇಗೆ ಈಡೇರಿಸಿದೆ ಎಂಬ ಉದಾಹರಣೆಗಳು ನಿಮ್ಮ ಮುಂದಿವೆ. ಬನ್ನಿ ಕಾಂಗ್ರೆಸ್ ಮುಕ್ತ ಭಾರತ ಕಟ್ಟೋಣ ಎಂದು ಮೋದಿ ಕರೆ ನೀಡಿದರು.

ಬಡತನದ ಬಗ್ಗೆ ಕಾಂಗ್ರೆಸ್ ಗೆ ತಿಳಿದಿಲ್ಲ

ಬಡತನದ ಬಗ್ಗೆ ಕಾಂಗ್ರೆಸ್ ಗೆ ತಿಳಿದಿಲ್ಲ

ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರಿಗೆ ಬಡತನದ ಬಗ್ಗೆ ತಿಳಿದಿಲ್ಲ. ನಾನು ಬಡತನದಿಂದ ಬೆಳೆದು ಬಂದಿದ್ದೇನೆ. ಆದ್ದರಿಂದ ಅವರ ಕಷ್ಟಗಳ ಅರಿವಿದೆ ಎಂದು ಹೇಳುವ ಮೂಲಕ ನರೇಂದ್ರ ಮೋದಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕುಟುಕಿದರು.

ವೋಟ್ ಬ್ಯಾಂಕ್ ರಾಜಕಾರಣ

ವೋಟ್ ಬ್ಯಾಂಕ್ ರಾಜಕಾರಣ

ಕಾಂಗ್ರೆಸ್ ಸರ್ಕಾರ ಸಂಕಷ್ಟ ಎದುರಾದಾಗ ವೋಟ್ ಬ್ಯಾಂಕ್ ರಾಜಕಾರಣದ ಮೊರೆ ಹೋಗುತ್ತದೆ. ದೇಶವನ್ನು ಜಾತಿ, ಮತ ಎಂದು ವಿಭಜಿಸಿ ಆಡಳಿತ ನಡೆಸುತ್ತದೆ. ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಸರ್ಕಾರ ಬ್ರಿಟಿಷರಿಂದ ಕಲಿತಿದೆ ಎಂದು ಮೋದಿ ದೂರಿದರು.

ಇದು ಕಾಂಗ್ರೆಸ್ ನಲ್ಲಿ ಮಾತ್ರ ಸಾಧ್ಯ

ಇದು ಕಾಂಗ್ರೆಸ್ ನಲ್ಲಿ ಮಾತ್ರ ಸಾಧ್ಯ

ಪಾಕಿಸ್ತಾನ ನಮ್ಮ ದೇಶದ ಯೋಧರನ್ನು ಹತ್ಯೆ ಮಾಡಿದಾಗ ರಕ್ಷಣಾ ಸಚಿವರು ಮತ್ತು ಸೇನೆ ವಿಭಿನ್ನವಾದ ಹೇಳಿಕೆ ನೀಡಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಹೀಗೆ ಆಗಲು ಸಾಧ್ಯ. ಅವರು ಹೇಳಿಕೆಗಳನ್ನು ಹೇಗೆ ಬೇಕಾದರೂ ತಿರುಚುತ್ತಾರೆ.

ಉತ್ತಮ ಭವಿಷ್ಯಕ್ಕಾಗಿ ಮತ ನೀಡಿ

ಉತ್ತಮ ಭವಿಷ್ಯಕ್ಕಾಗಿ ಮತ ನೀಡಿ

ನಾವು ದೆಹಲಿಯಲ್ಲಿ ರಚಿಸುವ ಸರ್ಕಾರ ನಿಮ್ಮ ಮಕ್ಕಳ ಉತ್ತಮ ಭವಿಷ್ಯ ರೂಪಿಸುತ್ತದೆ. ಅದಕ್ಕಾಗಿ ನೀವು ಬಿಜೆಪಿಗೆ ಮತ ನೀಡಿ. ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡಿರುವ ನೀವು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿ ಎಂದು ಮೋದಿ ಮನವಿ ಮಾಡಿದರು.

ಅವರು ದ್ರೋಹದಲ್ಲಿ ಪಾಲುದಾರರು

ಅವರು ದ್ರೋಹದಲ್ಲಿ ಪಾಲುದಾರರು

ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕೆಲವು ಪಕ್ಷಗಳು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿವೆ. ಕಾಂಗ್ರೆಸ್ ದೇಶದ ಜನರಿಗೆ ಮಾಡಿದ ದ್ರೋಹದಲ್ಲಿ ಅವರ ಪಾಲು ಇದೆ ಎಂದು ಹೇಳುವ ಮೂಲಕ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷವನ್ನು ಟೀಕಿಸಿದರು.

ಪಶ್ಚಾತಾಪ ಪಟ್ಟಿಲ್ಲ

ಪಶ್ಚಾತಾಪ ಪಟ್ಟಿಲ್ಲ

ಬೆಲೆ ಏರಿಕೆಯ ಬಗ್ಗೆ ಸೋನಿಯಾ ಗಾಂಧಿ, ರಾಜಕುಮಾರ (ರಾಹುಲ್ ಗಾಂಧಿ) ಪಶ್ಚಾತಾಪ ಪಟ್ಟಿಲ್ಲ. ಪ್ರಧಾನಿ ಮನಮೋಹನ್ ಸಿಂಗ್ ಸಹ ಬೆಲೆ ಏರಿಕೆಯಾಗುತ್ತಿರುವಾಗ ಅದನ್ನು ತಡೆಯಲು ಪ್ರಯತ್ನಿಸಿಲ್ಲ. ಇಂತಹ ಸರ್ಕಾರ ನಿಮಗೆ ಬೇಕೆ? ಎಂದು ಜನರನ್ನು ಪ್ರಶ್ನಿಸಿದರು.

Array

ಮೋದಿ ಭಾರತದ ಭವಿಷ್ಯ

ಭಾರತದ ಭವಿಷ್ಯ ನರೇಂದ್ರ ಮೋದಿ

ಜನರ ಬೆಂಬಲಕ್ಕೆ ಧನ್ಯವಾದ

ಜನರಿಗೆ ಮೋದಿ ಧನ್ಯವಾದ

ಬಡವರನ್ನು ಅಣಕಿಸುತ್ತಿದೆ

ಕಾಂಗ್ರೆಸ್ ಬಡವರನ್ನು ಹಾಸ್ಯ ಮಾಡುತ್ತಿದೆ

ಜನರಿಗೆ ಉತ್ತರ ನೀಡಿ

ದೇಶದ ಜನರಿಗೆ ಉತ್ತರ ನೀಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+