ಲೂಟಿಕೋರ ಕಾಂಗ್ರೆಸ್ ಕಿತ್ತೊಗೆಯಿರಿ : ಮೋದಿ ಕರೆ

ರಾಂಚಿ, ಡಿ. 29 : ಜಾರ್ಖಂಡ್‌ನಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿದ್ದು, ಅದನ್ನು ಬಳಸಿಕೊಂಡು ಉತ್ತಮ ಯೋಜನೆ ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಿದರೆ ರಾಜ್ಯದ ಅಭಿವೃದ್ಧಿ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಭಾನುವಾರ ನರೇಂದ್ರ ಮೋದಿ ರಾಂಚಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ ರಾಜ್ಯದಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿದ್ದು, ಅದನ್ನು ಬಳಸಿಕೊಂಡು ಉತ್ತಮ ಯೋಜನೆ ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮೋದಿ ದೂರಿದರು.

ಜಾರ್ಖಂಡ್‌ನಲ್ಲಿ ಕಲ್ಲಿದ್ದಲು ನಿಕ್ಷೇಪವಿದ್ದು, ಅದನ್ನು ಬಳಸಿಕೊಂಡು ಉಳಿದ ರಾಜ್ಯಗಳು ವಿದ್ಯುತ್ ಸೌಲಭ್ಯ ಪಡೆಯುತ್ತಿವೆ. ಆದರೆ, ಜಾರ್ಖಂಡ್ ರಾಜ್ಯ ವಿದ್ಯುತ್ ಕೊರತೆ ಎದುರಿಸುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಮೋದಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ಭ್ರಷ್ಟಾಚಾರದಿಂದ ಬೇಸತ್ತಿರುವ ದೇಶದ ಜನರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು. [ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು]

ನಮಗೆ ಅಭಿವೃದ್ಧಿ ಬೇಕು, ಪೊಳ್ಳು ಭರವಸೆಯಲ್ಲ

ನಮಗೆ ಅಭಿವೃದ್ಧಿ ಬೇಕು, ಪೊಳ್ಳು ಭರವಸೆಯಲ್ಲ

ಜಾರ್ಖಂಡ್ ನಲ್ಲಿ ಕಲ್ಲಿದ್ದಲಿದೆ ಆದರೆ ರಾಜ್ಯಕ್ಕೆ ವಿದ್ಯುತ್ ದೊರೆಯುತ್ತಿಲ್ಲ. ರಾಜ್ಯದಲ್ಲಿ ಎಲ್ಲವೂ ಇದ್ದರೂ ಏನೂ ಇಲ್ಲದಂತಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಕಾರಣ, ನಮಗೆ ವಿದ್ಯುತ್ ಬೇಕೇ ಹೊರತು ಪೊಳ್ಳು ಭರವಸೆಗಳಲ್ಲ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಹಣ ಲೂಟಿಮಾಡುವುದು ಕಾಂಗ್ರೆಸ್ ಕಾಯಕ

ಹಣ ಲೂಟಿಮಾಡುವುದು ಕಾಂಗ್ರೆಸ್ ಕಾಯಕ

ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್ ಕೇವಲ ಹಣ ಲೂಟಿ ಮಾಡುವತ್ತ ಗಮನ ಹರಿಸಿದೆ. ದೇಶದ ಅಭಿವೃದ್ಧಿ ಮಾಡುತ್ತಿಲ್ಲ, ಜನತೆ ಕಾಂಗ್ರೆಸ್‌ನ ಭ್ರಷ್ಟಾಚಾರದಿಂದ ಬೇಸತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದರು.

ನಿಮ್ಮ ಅಭಿವೃದ್ಧಿಯನ್ನು ನಾವು ಮಾಡುತ್ತೇವೆ

ನಿಮ್ಮ ಅಭಿವೃದ್ಧಿಯನ್ನು ನಾವು ಮಾಡುತ್ತೇವೆ

ಜಾರ್ಖಂಡ್ ರಾಜ್ಯ ರಚನೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾತ್ರ ದೊಡ್ಡದು. ಜಾರ್ಖಂಡ್ ಅಭಿವೃದ್ಧಿಯಾಗಬೇಕು ಎಂಬುದು ವಾಜಪೇಯಿಯವರ ಕನಸಾಗಿತ್ತು. ಆದರೆ, ಆ ಕಸನು ನನಸಾಗಿಲ್ಲ. ವಾಜಪೇಯಿ ಕನಸು ನನಸು ಮಾಡಲು ಹಾಗೂ ಜಾರ್ಖಂಡ್‌ ರಾಜ್ಯವನ್ನು ಅಭಿವೃದ್ಧಿಪಡಿಸಲು ನಾನು ಶ್ರಮಿಸುತ್ತೇನೆ ಎಂದು ನರೇಂದ್ರ ಮೋದಿ ಭರವಸೆ ನೀಡಿದರು.

ಜಾರ್ಖಂಡ್ ಎಂಬ ಪದ ದೆಹಲಿಯಲ್ಲಿ ಕೇಳಿಲ್ಲ

ಜಾರ್ಖಂಡ್ ಎಂಬ ಪದ ದೆಹಲಿಯಲ್ಲಿ ಕೇಳಿಲ್ಲ

ಯಾವುದೇ ರಾಜ್ಯದ ಬೆಳವಣಿಗೆಗೆ 8-12ವರ್ಷ ಸಾಕು. ಜಾರ್ಖಂಡ್ ರಾಜ್ಯ ರಚನೆಯಾಗಿಯೂ 12 ವರ್ಷವಾಗಿದೆ. ಆದರೆ, ಅದು ಅಭಿವೃದ್ಧಿಯಾಗಿಲ್ಲ ಇದಕ್ಕೆ ಕಾಂಗ್ರೆಸ್ ಕಾರಣ. ನವದೆಹಲಿಯ ಸಂಸತ್ ಭವನದಲ್ಲಿ ಕಾಂಗ್ರೆಸ್ ಒಮ್ಮೆಯೂ ಜಾರ್ಖಂಡ್ ಬಗ್ಗೆ ಮಾತನಾಡಿಲ್ಲ. ಆದ್ದರಿಂದ ರಾಜ್ಯ ಅಭಿವೃದ್ಧಿಯಾಗಿಲ್ಲ ಇಂತಹ ರಾಜ್ಯ ನಿಮಗೆ ಬೇಕೆ? ಎಂದು ಮೋದಿ ಪ್ರಶ್ನಿಸಿದರು.

ಜಾರ್ಖಂಡ್ ವಿರೋಧಿ ಕಾಂಗ್ರೆಸ್

ಜಾರ್ಖಂಡ್ ವಿರೋಧಿ ಕಾಂಗ್ರೆಸ್

ಭವಿಷ್ಯ ರೂಪಿಸಿಕೊಳ್ಳಲು ಸಶಕ್ತರಾಗಿರುವ ಸ್ವಾಭಿಮಾನಿ ಜಾರ್ಖಂಡ್ ಜನರ ಕೂಗು ಕೇಂದ್ರ ಸರ್ಕಾರಕ್ಕೆ ಕೇಳುತ್ತಿಲ್ಲ. ರಾಜ್ಯದ ಜನತೆಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅಟಲ್ ಜಿ ಪ್ರತ್ಯೇಕ ರಾಜ್ಯವನ್ನಾಗಿ ಮಾಡಿ, ಅವಕಾಶ ನೀಡಿದರು. ಆದರೆ, ಕಾಂಗ್ರೆಸ್ ಜಾರ್ಖಂಡ್ ವಿರೋಧಿ ಕಾಂಗ್ರೆಸ್ ಅದಕ್ಕೆ ಅವಕಾಶ ನೀಡಲಿಲ್ಲ. ಇಂತಹ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಮೋದಿ ಜನರಿಗೆ ಕರೆ ನೀಡಿದರು.

14 ಸ್ಥಾನಗಳನ್ನು ಕೊಡಿ

14 ಸ್ಥಾನಗಳನ್ನು ಕೊಡಿ

2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 14 ಸ್ಥಾನಗಳನ್ನು ರಾಜನಾಥ್ ಸಿಂಗ್ ಅವರ ಕೈಗೆ ಕೊಡಿ ನಿಮ್ಮ ರಾಜ್ಯವನ್ನು ನಾನು ಅಭಿವೃದ್ಧಿ ಮಾಡುತ್ತೇನೆ ಎಂದು ಮೋದಿ ಜನರಿಗೆ ಭರವಸೆ ನೀಡಿದರು. 14 ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಮೋದಿ ಹೇಳಿದರು.

ಒಡೆದು ಆಳುವುದು ಕಾಂಗ್ರೆಸ್ ನೀತಿ

ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ

ಪ್ರತ್ಯೇಕ ರಾಜ್ಯ ನೀಡಿದರೆ

ಪ್ರತ್ಯೇಕ ರಾಜ್ಯದ ಬೇಡಿಕೆ ಕಾಂಗ್ರೆಸ್ ಈಡೇರಿಸಿತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+