ಪ್ರಧಾನಿ ಮೋದಿ ಗತಜನ್ಮದ ರಹಸ್ಯ ಬಯಲು
ನವದೆಹಲಿ, ಸೆ.9: ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ರಿ? ಪುನರ್ಜನ್ಮದ ಬಗ್ಗೆ ಸಂಶೋಧನೆ ನಡೆಸುವ ಅಮೆರಿಕ ಸಂಸ್ಥೆಯೊಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ಜನ್ಮದ ರಹಸ್ಯವನ್ನು ಹೊರ ಹಾಕಿದೆ.
ಹಲವು ವಿಚಿತ್ರ, ವಿಶಿಷ್ಟ, ವಿಜ್ಞಾನಕ್ಕೆ ನಿಲುಕದ ವಿಷಯಗಳ ಬಗ್ಗೆ ಸಂಶೋಧನೆ ನಡೆಸುವ ಇನ್ಸ್ಟಿಟ್ಯೂಟ್ ಫಾರ್ ಇಂಟ್ರಿಗ್ರೇಷನ್ ಆಫ್ ಸೈನ್ಸ್, ಇಂಟ್ಯೂಷನ್ ಅಂಡ್ ಸ್ಪಿರಿಟ್(IISIS) ಸಂಸ್ಥೆ ಮೋದಿ ಅವರ ಪುನರ್ಜನ್ಮದ ಕಥೆ ಹೇಳುತ್ತಿದೆ.
ಇತ್ತೀಚೆಗೆ ಭಾರತೀಯ ಮೂಲದ IISIS ಬೆಂಬಲಿಗರೊಬ್ಬರು ಪ್ರಧಾನಿ ಮೋದಿ ಅವರು ತಮ್ಮ ಹಿಂದಿನ ಜನ್ಮದಲ್ಲಿ ಏನಾಗಿದ್ದರು ಎಂದು ಪ್ರಶ್ನೆ ಕೇಳಿದ್ದರು. ಈ ಬಗ್ಗೆ ಕೆವಿನ್ ರೈಸನ್ ಜೊತೆ ನಡೆಸಿದ ಸಂವಾದದಲ್ಲಿ ಅಹ್ತುನ್ ರೆ ಸ್ಪೀರಿಟ್ ಮಾರ್ಗದರ್ಶಿ ನೀಡಿದ ಉತ್ತರವನ್ನು ಕೆವಿನ್ ಅವರು ಪ್ರಕಟಿಸಿದ್ದಾರೆ.[ದೆವ್ವದ ಕತೆಗಳು ಎ೦ದರೇ ಸಾಕು ಕಿವಿ ನೆಟ್ಟಗೆ!]
ಭಾರತದ ಆಧಾತ್ಮ ಗುರುಗಳ ಪ್ರಕಾರ ವ್ಯಕ್ತಿಯ ಸಾವಿನ ನಂತರ ಭೌತಿಕ ಶರೀರವನ್ನು ತೊರೆಯುವ ಆತ್ಮವು ಮತ್ತೊಂದು ಶರೀರವನ್ನು ಮೂರು ಕಾಲ ಘಟ್ಟಗಳಲ್ಲಿ ಪ್ರವೇಶಿಸುವ ಅವಕಾಶ ಹೊಂದಿರುತ್ತದೆ. ಯಾವಾಗ? ಯಾವ ದೇಹ ಎಂಬುದು ರಹಸ್ಯ. ಅದನ್ನೇ ಜನ್ಮ ರಹಸ್ಯ ಮತ್ತು ಮೃತ್ಯು ರಹಸ್ಯ ಎಂದು ಕರೆಯಲ್ಪಡುತ್ತದೆ. [ಆತ್ಮದ ಜೊತೆ ಸಂಭಾಷಣೆ : ಹೀಗೂ ಉಂಟೇ?]

ಇದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು
ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ರಿ? ಪುನರ್ಜನ್ಮದ ಬಗ್ಗೆ ಸಂಶೋಧನೆ ನಡೆಸುವ ಅಮೆರಿಕ ಸಂಸ್ಥೆಯೊಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ಜನ್ಮದ ರಹಸ್ಯವನ್ನು ಹೊರ ಹಾಕಿದೆ. ಇದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು

ಮೋದಿ ಪುನರ್ಜನ್ಮ ಕಥೆ ವೆಬ್ ನಲ್ಲಿ ಲಭ್ಯ
ಹಲವು ವಿಚಿತ್ರ, ವಿಶಿಷ್ಟ, ವಿಜ್ಞಾನಕ್ಕೆ ನಿಲುಕದ ವಿಷಯಗಳ ಬಗ್ಗೆ ಸಂಶೋಧನೆ ನಡೆಸುವ ಇನ್ಸ್ಟಿಟ್ಯೂಟ್ ಫಾರ್ ಇಂಟ್ರಿಗ್ರೇಷನ್ ಆಫ್ ಸೈನ್ಸ್, ಇಂಟ್ಯೂಷನ್ ಅಂಡ್ ಸ್ಪಿರಿಟ್(IISIS) ಸಂಸ್ಥೆ ಮೋದಿ ಅವರ ಪುನರ್ಜನ್ಮದ ಕಥೆ ಹೇಳುತ್ತಿದೆ. ಈ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಸಂಶೋಧನೆ ಪ್ರಕಾರ ಮೋದಿ ಮುಸ್ಲಿಂ ಆಗಿದ್ರು
ಈ ಸಂಶೋಧನೆ ಪ್ರಕಾರ ಮೋದಿ ಅವರು ತಮ್ಮ ಹಿಂದಿನ ಜನ್ಮದಲ್ಲಿ ಮುಸ್ಲಿಮರಾಗಿದ್ದರು. ಅಲ್ಲದೆ, ಮುಂದೆ ಭಾರತದ ಖ್ಯಾತ ರಾಜಕೀಯ ಮುಖಂಡರಾದರು.

ಹಿಂದಿನ ಜನ್ಮದಲ್ಲಿ ಮೋದಿ ಏನಾಗಿದ್ರು?
ಆಲೀಗಢದ ಮುಸ್ಲಿಂ ವಿಶ್ವವಿದ್ಯಾಲಯ ಸಂಸ್ಥಾಪಕ ಹಾಗೂ ಮುಸ್ಲಿಂ ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನ ಸ್ಥಾಪನೆಗಾಗಿ ಪ್ರಸ್ತಾಪನೆ ಮಂಡಿಸಿದ ಮೊದಲಿಗರಾದ ಸೈಯದ್ ಅಹ್ಮದ್ ಖಾನ್ ಅವರೇ ಪುನರ್ಜನ್ಮ ತಾಳಿ ನರೇಂದ್ರ ದಾಮೋದರ್ ಮೋದಿ ಆಗಿದ್ದಾರೆ

ಯಾವ ವಿಧಾನ ಅನುಸರಿಸಲಾಗುತ್ತದೆ
ಪುನರ್ಜನ್ಮ ಸಂಶೋಧನೆಯಲ್ಲಿ ಒಬ್ಬ ವ್ಯಕ್ತಿಯ ಹಿಂದಿನ ಜನ್ಮದ ರಹಸ್ಯ ತಿಳಿಯಲು ಕೆಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಪ್ರಮುಖವಾಗಿ ವ್ಯಕ್ತಿಯ ಮುಖ ಲಕ್ಷಣ, ರಾಜಕೀಯ ಬೆಳವಣಿಗೆ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಮುಸ್ಲಿಂ ವ್ಯಕ್ತಿಯ ಆತ್ಮ ಹಿಂದೂವಾಗಿದ್ದು ಹೇಗೆ
ಮುಸ್ಲಿಂ ವ್ಯಕ್ತಿಯ ಆತ್ಮ ಹಿಂದೂವಾಗಿದ್ದು ಹೇಗೆ? ಆತ್ಮ ಅವಿನಾಶಿ, ಆತ್ಮಕ್ಕೆ ಯಾವುದೇ ಜಾತಿ ಭೇದವಿಲ್ಲ. ಹೀಗಾಗಿ ಮುಸ್ಲಿಂ ವ್ಯಕ್ತಿಯ ದೇಹದಲ್ಲಿದ್ದ ಆತ್ಮ ಈಗ ಹಿಂದೂ ಪ್ರತಿಪಾದಕ ಮೋದಿ ಅವರ ದೇಹ ಹೊಕ್ಕಿದ ಎಂದು ಉತ್ತರವೂ ಸಿಕ್ಕಿದೆ.

ಸಂಶೋಧನಾ ಸಂಸ್ಥೆ ನೀಡುವ ಸ್ಪಷ್ಟನೆ ಹೀಗಿದೆ
* ಮೋದಿ ಹಾಗೂ ಸೈಯದ್ ಅವರ ಮುಖ ಲಕ್ಷಣಗಳಲ್ಲಿ ಸಾಮ್ಯತೆಯಿದೆ. ಕೂದಲಿನ ಮಾದರಿ ಇಲ್ಲಿ ಬಹುಮುಖ್ಯವಾಗುತ್ತದೆ.
* ಮೋದಿ ಹಾಗೂ ಸೈಯದ್ ಇಬ್ಬರೂ ತಮ್ಮಮ್ಮ ಕಾರ್ಯಕ್ಷೇತ್ರಗಳಲ್ಲಿ ಯಶಸ್ಸು ಕಾಣಲು ತಾವು ನಂಬಿದ್ದ ಮತ ಧರ್ಮದ ತಳಹದಿಯನ್ನು ಬಳಸಿಕೊಂಡರು ಹಾಗೂ ರಾಜಕೀಯವಾಗಿ ಬೆಳೆಯಲು ಇದು ಸಹಕಾರಿಯಾಯಿತು.
* ಇಬ್ಬರು ಬೇರೆ ಬೇರೆ ಮತ ಧರ್ಮಗಳನ್ನು ಪಾಲನೆ ಮಾಡಿದರೂ ವ್ಯಕ್ತಿತ್ವದಲ್ಲಿ ಕೂಡಾ ಸಾಮ್ಯತೆಯಿದೆ. ಶಾಂತಿ ಕೇಂದ್ರಿಕೃತವಾದ ವ್ಯಕ್ತಿತ್ವ ಇವರದಾಗಿದ್ದು ವಿಶ್ವಶಾಂತಿಗಾಗಿ ಜನರ ಧಾರ್ಮಿಕ ಭಾವನೆಗಳನ್ನು ಗಟ್ಟಿಗೊಳಿಸುತ್ತಾರೆ.

ಆತ್ಮ ಹೊಸ ದೇಹವನ್ನು ಯಾವಾಗ ಪ್ರವೇಶಿಸುತ್ತದೆ
ಆತ್ಮವು, ಗರ್ಭ ಧರಿಸುವ ಕ್ಷಣದಲ್ಲಿ ಪ್ರವೇಶಿಸುತ್ತದೆ ಅಥವಾ ಅದು ಐದನೆಯ ತಿಂಗಳಿನಲ್ಲಿ ಪ್ರವೇಶಿಸುತ್ತದೆ ಅಥವಾ ಹುಟ್ಟುವ ಸಮಯದಲ್ಲಿ. ಹೀಗೆ ಮೂರು ಭಾಗಗಳಿವೆ, ಆದರೆ ಅದು ಯಾವಾಗ ಪ್ರವೇಶಿಸುತ್ತದೆ ಎಂದು ನಿರ್ಧರಿಸಲು ಯಾವುದೇ ಮಾರ್ಗವಿಲ್ಲ.
ಗರ್ಭಿಣಿಯರು ಬಯಸಿದಂತೆ ಆತ್ಮವೂ ಉತ್ತಮ ದೇಹ ಒಳ ಪ್ರವೇಶಿಸುತ್ತದೆ. ಹೀಗಾಗಿ ಗರ್ಭಿಣಿಯರ ಎಲ್ಲಾ ಬಯಕೆ ಪೂರೈಸಲು ಕುಟುಂಬಸ್ಥರು ಸಿದ್ಧರಿರುತ್ತಾರೆ. ಜೊತೆಗೆ ಸದಾ ಕಾಲ ಒಳ್ಳೆಯ ವಾತಾವರಣದಲ್ಲೇ ಗರ್ಭಿಣಿಯರನ್ನು ಇರಿಸಲಾಗುತ್ತದೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications