Get Updates
Get notified of breaking news, exclusive insights, and must-see stories!

ನಾರಾಯಣ ಮೂರ್ತಿ ಅಳಿಯನಿಗೆ ಹೀನಾಯ ಸೋಲು ಕರುಣಿಸಿದ ಬ್ರಿಟಿಷರು!

ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯನಿಗೆ ಇಂದು ತೀವ್ರ ಆಘಾತವಾಗಿದೆ. ಇಡೀ ಜಗತ್ತು ಕಳೆದ 1 ವಾರದಿಂದ ನಾರಾಯಣ ಮೂರ್ತಿ ಅಳಿಯನ ಮೇಲೆ ಗಮನ ಇಟ್ಟು ಕೂತ್ತಿತ್ತು. ಈ ನಡುವೆ ಮತ್ತೊಮ್ಮೆ ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ಆಯ್ಕೆ ಆಗಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಆಗಿದ್ದು ಏನು ಗೊತ್ತೆ? ಬನ್ನಿ ತಿಳಿಯೋಣ.

ಅಷ್ಟಕ್ಕೂ ಭಾರತ ಮೂಲದ ನಂಟು ಹೊಂದಿರುವ ರಿಷಿ ಸುನಕ್ ಅವರು 2022ರಲ್ಲಿ ಬ್ರಿಟನ್ ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ನಾರಾಯಣ ಮೂರ್ತಿಯ ಮಗಳ ಗಂಡ ಕೂಡ ಆಗಿರುವ ರಿಷಿ ಸುನಕ್ ಹೊಸ ಇತಿಹಾಸ ಸೃಷ್ಟಿ ಮಾಡಿದ್ರು. ಭಾರತ ಮೂಲದ ರಿಷಿ ಸುನಕ್ ಬ್ರಿಟನ್‌ಗೆ ಪ್ರಧಾನಿ ಆಗಿದ್ದು ದಾಖಲೆ ಸೃಷ್ಟಿ ಮಾಡಿತ್ತು, ಇದುವರೆಗೂ ಯಾವುದೇ ಭಾರತೀಯ ಮಾಡದ ಸಾಧನೆ ಅದಾಗಿತ್ತು. ಹೀಗಿದ್ದಾಗ ಮತ್ತೊಮ್ಮೆ ಆಯ್ಕೆ ಆಗುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ರಿಷಿ ಸುನಕ್ ಇದೀಗ ಹೀನಾಯ ಸೋಲು ಕಂಡಿದ್ದಾರೆ. ಹಾಗಾದ್ರೆ ರಿಷಿ ಸೋಲಿಗೆ ಕಾರಣ ಏನು? ಬನ್ನಿ ತಿಳಿಯೋಣ.

Narayana Murthy Son In Law Rishi Sunak Has Got This Results In The Britain General Elections

650 ಸ್ಥಾನದಲ್ಲಿ 326 ಸ್ಥಾನ!

ಹೌದು, ಬ್ರಿಟನ್‌ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದಲ್ಲಿ ಲೇಬರ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು. ಭಾರತ ಮೂಲದ ಪ್ರಧಾನಿ ಹಾಗೂ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ರಿಷಿ ಸುನಕ್ ಅವರು ಹೀನಾಯ ಸೋಲು ಕಂಡಿದ್ದಾರೆ. ಬ್ರಿಟನ್ ಸಂಸತ್ತಿನ ಒಟ್ಟಾರೆ 650 ಕ್ಷೇತ್ರಗಳಲ್ಲಿ ಸರಳ ಬಹುಮತಕ್ಕೆ ಬೇಕಾದ 326 ಸ್ಥಾನ ಈಗಾಗಲೇ ಲೇಬರ್ ಪಕ್ಷದ ಪಾಲಾಗಿದೆ. ಈ ಮೂಲಕವೇ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯನಿಗೆ ಭೀಕರ ಸೋಲು ಎದುರಾಗಿದೆ. ಅಲ್ಲದೆ ಈ ವಿಚಾರ ಈಗ ಜಾಗತಿಕವಾಗಿ ದೊಡ್ಡ ಮಟ್ಟಿಗೆ ಚರ್ಚೆಗೆ ವೇದಿಕೆ ಒದಗಿಸಿದೆ.

ಸೋಲಿನ ಹೊಣೆ ಹೊತ್ತ ಸುನಕ್!

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪ್ರಸಕ್ತ ಚುನಾವಣೆಯ ಹೀನಾಯ ಸೋಲಿನ ಹೊಣೆ ಹೊತ್ತುಕೊಂಡು ಪ್ರತಿಕ್ರಿಯೆ ನೀಡಿ, ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷ ಜಯಗಳಿಸಿದೆ. ಸ್ಟಾರ್ಮರ್ ಕೀರ್ ಅವರನ್ನ ಈಗಾಗಲೇ ಅಭಿನಂದಿಸಿದ್ದೇನೆ. ಅವರ ಪಕ್ಷಕ್ಕೆ ಗೆಲುವಾಗಿದೆ ನನ್ನ ಪಕ್ಷದ ಸೋಲಿನ ಹೊಣೆ ನಾನೇ ಹೊತ್ತುಕೊಳ್ಳುತ್ತೇನೆ ಎಂದು ಕೂಡ ಹೇಳಿದ್ದಾರೆ. ಅಲ್ಲದೆ ಅಧಿಕಾರ ಇಲ್ಲದಿದ್ದರೂ ನನ್ನ ಸೇವೆ ಮಾತ್ರ ನಿರಂತರ ಎಂದಿದ್ದಾರೆ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್.

ಹಾಗೇ ಈ ಚುನಾವಣೆಯಲ್ಲಿ ಮತ್ತೊಂದು ಪ್ರಮುಖವಾದ ಸಂಗತಿ ಏನು ಅಂದ್ರೆ ಗ್ರ್ಯಾಂಟ್ ಶಾಪ್ಸ್, ಪೆನ್ನಿ ಮೊರ್‌ಡೌಂಟ್, ಜೇಕಪ್ ರೀಸ್ ಸೇರಿ ರಿಷಿ ಸುನಕ್ ಸಂಪುಟದಲ್ಲಿ ದೊಡ್ಡ ಹೆಸರು ಮಾಡಿದ್ದ ಸಚಿವರು & ಸಂಸದರು ಕೂಡ ಹೀನಾಯ ಸೋಲು ಕಂಡಿದ್ದಾರೆ. ಈ ಮೂಲಕ ರಿಷಿ ಸುನಕ್ ಅವರ ಆಡಳಿತದ ಬಗ್ಗೆ ಬ್ರಿಟನ್ ಜನರಲ್ಲಿ ತೀವ್ರ ಅಸಮಾಧಾನ ಇತ್ತು ಎಂದು ವಿಶ್ಲೇಷಣೆ ಮಾಡ್ತಿದ್ದಾರೆ ತಜ್ಞರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+