Nagaland Assembly Election Result 2023: ಕುತೂಹಲ ಕೆರಳಿಸಿರುವ 5 ಪ್ರಮುಖ ಹಣಾಹಣಿಗಳ ಬಗ್ಗೆ ತಿಳಿಯಿರಿ
ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಮತ್ತು ಬಿಜೆಪಿಯ ಮೈತ್ರಿಕೂಟವು ನಾಗಾಲ್ಯಾಂಡ್‌ನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. 60 ಸ್ಥಾನಗಳ ಕದನದಲ್ಲಿ, ಈ ಐದು ಕ್ಷೇತ್ರಗಳು ಹೆಚ್ಚು ಕುತೂಹಲ ಕೆರಳಿಸಿವೆ. ಕಾರಣ ತಿಳ
ನವದೆಹಲಿ, ಮಾರ್ಚ್ 02: ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಮತ್ತು ಬಿಜೆಪಿಯ ಮೈತ್ರಿಕೂಟವು ನಾಗಾಲ್ಯಾಂಡ್‌ನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಐದು ವರ್ಷಗಳ ಹಿಂದೆ ಅಧಿಕಾರ ಕಳೆದುಕೊಂಡ ನಾಗಾ ಪೀಪಲ್ಸ್ ಫ್ರಂಟ್ ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಎಂಬುದರ ಬಗ್ಗೆ ಜನರಿಗೆ ಕುತೂಹಲವಿದೆ. ಕಳೆದ ಐದು ವರ್ಷಗಳಲ್ಲಿ ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್ ಕಳೆಗುಂದುತ್ತಲೇ ಸಾಗುತ್ತಿದೆ. ಎನ್‌ಪಿಎಫ್‌ನ ಬಲವು ಕುಸಿದಿದೆ.
60 ಸ್ಥಾನಗಳ ಕದನದಲ್ಲಿ, ಈ ಐದು ಕ್ಷೇತ್ರಗಳು ಹೆಚ್ಚು ಕುತೂಹಲ ಕೆರಳಿಸಿವೆ.

ಉತ್ತರ ಅಂಗಮಿ-I
ಮುಖ್ಯಮಂತ್ರಿ ನೆಫಿಯು ರಿಯೊ ಉತ್ತರ ಅಂಗಮಿಯಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟದ ಸಿಎಂ ಅಭ್ಯರ್ಥಿ. ಅವರು ಐದನೇ ಅವಧಿಗೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. 1989 ರಿಂದ, ರಿಯೊ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅದರಲ್ಲಿ ಒಂದು ಬಾರಿಯೂ ಸೋಲು ಕಂಡಿಲ್ಲ. 2018ರ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೆಯಿವಿಲಿ ಸಚು ಅವರನ್ನು ಎದುರಿಸುತ್ತಿದ್ದಾರೆ.

ತ್ಯುಯಿ
ಬಿಜೆಪಿ ಅಭ್ಯರ್ಥಿಯಾಗಿರುವ ಉಪಮುಖ್ಯಮಂತ್ರಿ ವೈ ಪ್ಯಾಟನ್ ಅವರ ಭದ್ರಕೋಟೆಯಾಗಿರುವ ತ್ಯುಯಿ ಕ್ಷೇತ್ರವು ವೋಖಾ ಜಿಲ್ಲೆಯಲ್ಲಿದೆ. ಕ್ಷೇತ್ರದ ಚುನಾವಣೆಗಳು ಯಾವಾಗಲೂ ತೀವ್ರ ಪೈಪೋಟಿಯಿಂದ ಕೂಡಿವೆ. ಈ ಬಾರಿಯೂ ಸಹ, ಜನತಾ ದಳ (ಯುನೈಟೆಡ್) ರಾಜ್ಯಾಧ್ಯಕ್ಷ ಸೆಂಚುಮೋ ಲೋಥಾ ಅವರು ವೈ ಪ್ಯಾಟನ್ ಅವರಿಗೆ ಎದುರಾಳಿ ಆಗಿದ್ದಾರೆ. ಇಲ್ಲಿ ಚತುಷ್ಕೋನ ಸ್ಪರ್ಧೆ ಇದೆ. ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ವೈ ಕಿಕೋನ್ ಮತ್ತು ಸ್ವತಂತ್ರ ಅಭ್ಯರ್ಥಿ ಹಯಿತುಂಗ್ ತುಂಗೋ ಲೋಥಾ ಅವರೂ ಸಹ ಪ್ರಬಲ ಅಭ್ಯರ್ಥಿಗಳು ಎಂದು ಹೇಳಲಾಗುತ್ತಿದೆ.

ಫೆಕ್
ಫೆಕ್ ಕ್ಷೇತ್ರದಲ್ಲಿನ ಸ್ಪರ್ಧೆಯು ಎನ್‌ಪಿಎಫ್‌ಗೆ ನಿರ್ಣಾಯಕವಾಗಿದೆ. ಎನ್‌ಪಿಎಫ್ ಶಾಸಕಾಂಗ ಪಕ್ಷದ ನಾಯಕ ಕುಝೊಲುಜೊ ಅಜೊ ನಿನು ಅವರು ಇಲ್ಲಿಂದ ಸ್ಪರ್ಧೆಸಿದ್ದಾರೆ. ಎನ್‌ಪಿಎಫ್‌ನ ಬಹುತೇಕ ಎಲ್ಲಾ ಪ್ರಮುಖ ನಾಯಕರು ಎನ್‌ಡಿಪಿಪಿಗೆ ಸೇರ್ಪಡೆಗೊಂಡಿದ್ದಾರೆ. ಪಕ್ಷವು ಕೇವಲ 22 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಈ ಸನ್ನಿವೇಶದಲ್ಲಿ ಪಕ್ಷದ ನೈತಿಕ ಸ್ಥೈರ್ಯಕ್ಕೆ ಅಜೊ ನಿನ್ನು ಅವರ ಭವಿಷ್ಯ ನಿರ್ಣಾಯಕವಾಗಲಿದೆ. ನೀನು ಎನ್‌ಡಿಪಿಪಿಯ ಕುಪೋಟಾ ಖೇಸೋಹ್ ಮತ್ತು ಕಾಂಗ್ರೆಸ್‌ನ ಜಚಿಲ್ಹು ರಿಂಗಾ ವಡೆಯೊ ವಿರುದ್ಧ ಪೈಪೋಟಿ ನಡೆಸಿದ್ದಾರೆ.

ಅಟೊಯಿಜು
ಬಿಜೆಪಿಯ ಏಕೈಕ ಮಹಿಳಾ ಅಭ್ಯರ್ಥಿ ಕಾಹುಲಿ ಸೇಮಾ ಇಲ್ಲಿಂದ ಸ್ಪರ್ಧಿಸಿದ್ದಾರೆ. ಅವರು ಪ್ರಬಲ ಸ್ಪರ್ಧಿ ಎಂದು ಹೇಳಲಾಗುತ್ತಿದೆ. ಇದು ಗಮನಾರ್ಹವಾದುದು. ಏಕೆಂದರೆ ರಾಜ್ಯದಲ್ಲಿ ಇದುವರೆಗೆ ಮಹಿಳಾ ಶಾಸಕಿ ಆಯ್ಕೆಯಾಗಿಲ್ಲ. ಕಾಹುಲಿ ಸೇಮಾ ಅವರು ಲೋಕೋಪಯೋಗಿ ಇಲಾಖೆಯ ಮಾಜಿ ಮುಖ್ಯ ಇಂಜಿನಿಯರ್ ಮತ್ತು ಕಣದಲ್ಲಿರುವ ಮೂರನೇ ಶ್ರೀಮಂತ ಅಭ್ಯರ್ಥಿ. ಸೆಮಾ ಅವರು ಕಳೆದ ಎರಡು ಚುನಾವಣೆಗಳಲ್ಲಿ ಕ್ಷೇತ್ರದಿಂದ ಗೆದ್ದಿರುವ ಪಿಕ್ಟೊ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಪಿಕ್ಟೊ 2018 ರಲ್ಲಿ ಎನ್‌ಪಿಎಫ್ ಟಿಕೆಟ್‌ನಲ್ಲಿ ಗೆದ್ದಿದ್ದರು. 2021 ರಲ್ಲಿ ಎನ್‌ಡಿಪಿಪಿಗೆ ಸೇರ್ಪಡೆಗೊಂಡರು. ಆದರೆ ಪಕ್ಷದಿಂದ ಟಿಕೆಟ್ ನೀಡದ 21 ಶಾಸಕರಲ್ಲಿ ಅವರು ಒಬ್ಬರು. ಅವರು ಈಗ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ದಿಮಾಪುರ್ III
ಮಹಿಳೆಯರು ಸ್ಪರ್ಧಿಸುತ್ತಿರುವ ನಾಲ್ಕು ಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿ ಕಣದಲ್ಲಿರುವ ಐವರು ಅಭ್ಯರ್ಥಿಗಳು ತೀವ್ರ ಪೈಪೋಟಿಯಲ್ಲಿ ತೊಡಗಿದ್ದಾರೆ. ಎನ್‌ಡಿಪಿಪಿ ಅಭ್ಯರ್ಥಿ ಹೆಕಾನಿ ಜಖಾಲು ಅವರು ಆಡಳಿತಾರೂಢ ಮೈತ್ರಿಕೂಟದ ಭಾರೀ ಪ್ರಚಾರದ ಬೆಂಬಲವನ್ನು ಹೊಂದಿದ್ದಾರೆ. ಅವರ ಪ್ರಾಥಮಿಕ ಎದುರಾಳಿ, ಹಾಲಿ ಶಾಸಕ ಅಝೆಟೊ ಜಿಮೊಮಿ. ಎರಡು ಬಾರಿ ಶಾಸಕರಾಗಿದ್ದ ಜಿಮೋಮಿ ಅವರನ್ನು ಎನ್‌ಡಿಪಿಪಿ ಅಭ್ಯರ್ಥಿಯಾಗಿ ಘೋಷಿಸಲು ನಿರಾಕರಿಸಿತು. ಈಗ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇತರ ಮೂವರು ಅಭ್ಯರ್ಥಿಗಳು ವೆಟೆಟ್ಸೊ ಲಸುಹ್ (ಕಾಂಗ್ರೆಸ್), ಜನಪ್ರಿಯ ಕಾರ್ಯಕರ್ತ ಕಹುಟೊ ಚಿಶಿ (ಸ್ವತಂತ್ರ), ಮತ್ತು ಲುನ್ ತುಂಗ್ನುಂಗ್ (ಸ್ವತಂತ್ರ).
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications