'ನನ್ನ ಮಗಳ ಹೆಸರು ಜ್ಯೋತಿ, ನೀವೂ ಹಾಗೆಯೇ ಕರೆಯಿರಿ'

ನವದೆಹಲಿ, ಡಿಸೆಂಬರ್, 16: ಅದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕರಾಳ ದಿನ. ಡಿಸೆಂಬರ್ 16, 2012 ಅಮಾಯಕ ಹೆಣ್ಣೊಬ್ಬಳು ಕಾಮುಕರಿಗೆ ಬಲಿಯಾಗಿದ್ದಳು. ನಂತರ ಇಡೀ ದೇಶ, ಯುವಜನತೆ ಹೋರಾಟಕ್ಕೆ ಇಳಿದಿತ್ತು. ನಿರ್ಭಯಾ, ದಾಮಿನಿಯಾಗಿ ಅದೆಷ್ಟೋ ಬದಲಾವಣೆಗೆ ಕಾರಣವಾಗಿದ್ದ ಹುಡುಗಿಯ ಮೇಲೆರಗಿದವರಿಗೆ ಗಲ್ಲು ಶಿಕ್ಷೆಯೆನೋ ಆಗಿದೆ.

ಆದರೆ ಇಂದು ಆ ನತದೃಷ್ಟ ಯುವತಿಯ ಹೆಸರನ್ನು ಆಕೆಯ ತಾಯಿಯೇ ಬಹಿರಂಗ ಮಾಡಿದ್ದಾರೆ. 'ನನ್ನ ಮಗಳ ಹೆಸರನ್ನು ಹೇಳಲು ನನಗೆ ಯಾವ ನಾಚಿಕೆಯಿಲ್ಲ. ಅತ್ಯಾಚಾರಿಗಳಿಗೆ ನಾಚಿಕೆಯಾಗಬೇಕು. ನನ್ನ ಮಗಳ ಹೆಸರು ಜ್ಯೋತಿ, ಜ್ಯೋತಿ ಸಿಂಗ್.. ಎಂದು ನಿರ್ಭಯಾಳ ತಾಯಿ ದೆಹಲಿಯ ಸಮಾರಂಭವೊಂದರಲ್ಲಿ ಭಾವುಕರಾಗಿ ಹೇಳಿದ್ದಾರೆ.[ಚಲಿಸುತ್ತಿದ್ದ ವಾಹನದಲ್ಲಿ ನಡೆದ ಹತ್ತು ಅತ್ಯಾಚಾರಗಳು]

rape

ನನ್ನ ಮಗಳನ್ನು ಇನ್ನು ಮುಂದೆ, ನಿರ್ಭಯಾ ಅಥವಾ ದಾಮಿನಿ ಎಂದು ಕರೆಯಬೇಡಿ. ಜ್ಯೋತಿ ಎಂದೇ ಕರೆಯಿರಿ ಎಂದು ಪ್ರತಿ ದಿನ ನೋವು ನುಂಗಿಕೊಳ್ಳುತ್ತಿರುವ ತಾಯಿ ಆಶಾ ದೇವಿ ಮನವಿ ಮಾಡಿಕೊಂಡಿದ್ದಾರೆ.[ದಿಲ್ಲಿ ರೇಪ್: ಬಾಲ ಅತ್ಯಾಚಾರಿಗೆ ಮೂರೇ ವರ್ಷ ಜೈಲು]

ಮಗಳ ಆತ್ಮಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಪ್ರಕರಣದಲ್ಲಿದ್ದ ಬಾಲಾಪರಾಧಿ ಡಿಸೆಂಬರ್ 20 ರಂದು ಬಿಡುಗಡೆ ಆಗುತ್ತಿದ್ದಾನೆ. ಆತನನ್ನು ಬಿಡುಗಡೆ ಮಾಡಬಾರದು ಆತ ಸಮಾಜಕ್ಕೆ ಕಂಟಕ ಎಂದು ತಂದೆ ತಮ್ಮ ನೋವನ್ನು ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+