ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಜಾಫರ್‌ನಗರ: ಕಲಾವಿದರು ಗೋರಂಟಿ ಹಚ್ಚಿದರೆ ಪರಿಣಾಮ ಎದುರಿಸಬೇಕಾಗುತ್ತದೆ- ಬಿಜೆಪಿ ಶಾಸಕ ಎಚ್ಚರಿಕೆ

|
Google Oneindia Kannada News

ಕರ್ವಾ ಚೌತ್ ಹಬ್ಬಕ್ಕೂ ಮುನ್ನ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಹಿಂದೂ ಮಹಿಳೆಯರ ಕೈಗೆ 'ಇತರ ಸಮುದಾಯ'ಕ್ಕೆ ಸೇರಿದ ಮೆಹಂದಿ ಕಲಾವಿದರು ಗೋರಂಟಿ ಹಚ್ಚಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹಿಂದೂ ಮಹಾಸಭಾದ ಸದಸ್ಯರು ಎಚ್ಚರಿಸಿದ್ದಾರೆ.

ಮೆಹಂದಿ ಅಂಗಡಿಗಳನ್ನು ತೆರೆದಿರುವ ಮುಸ್ಲಿಂ ಯುವಕರ ಉದ್ದೇಶಗಳು "ವಿಭಿನ್ನ" ಮತ್ತು ಅವರ ಮನಸ್ಸಿನಲ್ಲಿ "ಲವ್ ಜಿಹಾದ್" ಇದೆ ಎಂದು ಖತೌಲಿಯ ಬಿಜೆಪಿ ಶಾಸಕ ವಿಕ್ರಮ್ ಸೈನಿ ಬುಧವಾರ ಹೇಳಿದ್ದಾರೆ.

ಕೊರಗ ಕಾಲೋನಿಯ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಪಾರ್ಟಿ: ಲಾಠಿ ಬೀಸಿದ ಪೊಲೀಸರುಕೊರಗ ಕಾಲೋನಿಯ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಪಾರ್ಟಿ: ಲಾಠಿ ಬೀಸಿದ ಪೊಲೀಸರು

"ಅವರು ಈ [ಮೆಹಂದಿ ಕೆಲಸದ] ನೆಪದಲ್ಲಿ ಲವ್ ಜಿಹಾದ್ ನಡೆಸುತ್ತಾರೆ. ಇಂತಹ ಹಲವು ಪ್ರಕರಣಗಳು ನಡೆದಿವೆ. ನನ್ನ ವಿನಂತಿಯು [ಹಿಂದೂ ಮಹಿಳೆಯರಿಗೆ] ಮನೆಯಲ್ಲಿ ಅಥವಾ ನಮ್ಮ ಸಮುದಾಯದವರು ತೆರೆದಿರುವ ಅಂಗಡಿಗಳು ಮತ್ತು ಬ್ಯೂಟಿ ಪಾರ್ಲರ್‌ಗಳಿಂದ ಮೆಹಂದಿಯನ್ನು ಹಚ್ಚಿಸಕೊಳ್ಳಬೇಕು" ಎಂದು ಸೈನಿ ಹೇಳಿದರು.

Muzaffarnagar: Muslim Artists will face consequences if they apply henna- BJP MLA warns

ಇದಕ್ಕಾಗಿ ವಿಶ್ವ ಹಿಂದೂ ಪರಿಷತ್ (VHP) 13 ಮೆಹಂದಿ ಸ್ಟಾಲ್‌ಗಳನ್ನು ತೆರೆಯಿತು ಮತ್ತು ಮುಸ್ಲಿಂ ಪುರುಷ ಮೇಕಪ್ ಕಲಾವಿದರು ಹಿಂದೂ ಮಹಿಳೆಯರಿಗೆ ಮೆಹಂದಿ ಅಥವಾ ಗೋರಂಟಿ ಹಾಕುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅದರ ಸದಸ್ಯರಿಗೆ ಜವಾಬ್ದಾರಿ ವಹಿಸಿದೆ. ಅವರು ಮೆಹಂದಿ ಕಲಾವಿದರ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸುವ ಮೂಲಕ ಅವರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ಕರ್ವಾ ಚೌತ್ ಜನಪ್ರಿಯ ಹಿಂದೂ ಹಬ್ಬವಾಗಿದ್ದು, ವಿವಾಹಿತ ಮಹಿಳೆಯರು ತಮ್ಮ ಗಂಡನ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ವಿವಾಹಿತ ಮಹಿಳೆಯರು ಕರ್ವಾ ಚೌತ್ ಆಚರಣೆಗಳ ಭಾಗವಾಗಿ ವರ್ಣರಂಜಿತ ವಿನ್ಯಾಸಗಳಲ್ಲಿ ಮೆಹಂದಿಯನ್ನು ಹಚ್ಚಿಕೊಳ್ಳುತ್ತಾರೆ.

ಲವ್ ಜಿಹಾದ್‌ಗೆ ಬಲಿಯಾಗದಂತೆ ನಮ್ಮ ಸಹೋದರ ಸಹೋದರಿಯರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿಂದೂ ಮಹಾಸಭಾ ಸದಸ್ಯ ಲೋಕೇಶ್ ಸೈನಿ ಹೇಳಿದ್ದಾರೆ. ಹಿಂದೂ ಮಹಿಳೆಯರು ಕರ್ವಾ ಚೌತ್‌ನ ಮಹತ್ವವನ್ನು ಅರ್ಥಮಾಡಿಕೊಳ್ಳುವ ಸ್ಟಾಲ್ ಮಾಲೀಕರ ಬಳಿಗೆ ಹೋಗಬೇಕು ಎಂದು ಅವರು ಹೇಳಿದರು.

Muzaffarnagar: Muslim Artists will face consequences if they apply henna- BJP MLA warns

2021 ರಲ್ಲಿ, ಮುಜಾಫರ್‌ನಗರದಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ಹೀಗಾಗಿ ಹಿಂದೂ ಮಹಿಳೆಯರಿಗೆ ಯಾವುದೇ ಮುಸ್ಲಿಂ ವ್ಯಕ್ತಿಗಳು ಗೋರಂಟಿ ಹಾಕುವಂತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮೆರವಣಿಗೆಯನ್ನು ಕೈಗೊಂಡಿದ್ದಕ್ಕಾಗಿ ಗುಂಪಿನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

English summary
Members of the Hindu Mahasabha have warned mehndi artists belonging to 'other communities' of applying henna on the hands of Hindu women in Uttar Pradesh's Muzaffarnagar ahead of the Karva Chauth festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X