ದುಬಾರಿಯಾಗುವ ಮುನ್ನ ಮುಸ್ಲಿಮರು ಎಚ್ಚೆತ್ತುಕೊಳ್ಳಲಿ, ಭಾರತೀಯರ ವಿಶ್ವಾಸ ಗೆಲ್ಲಲಿ

ಜಹೀರ್ ಅಬ್ಬಾಸ್, ಜಾವೇದ್ ಮಿಯಾಂದಾದ್, ಇಮ್ರಾನ್ ಖಾನ್ ಮುಂತಾದ ಕ್ರಿಕೆಟಿಗರನ್ನು ಹೊಂದಿದ್ದ, ಪಾಕಿಸ್ತಾನ ತಂಡ, ಭಾರತದ ವಿರುದ್ದ ಜಯಗಳಿಸಿದಾಗ, ಇಂಡಿಯಾದಲ್ಲೇ ಪಟಾಕಿ ಹೊಡೆದು ಸಂಭ್ರಮಿಸಿದ ಕಾಲವಿತ್ತು.

ಭಾರತದಲ್ಲಿ ಯಾವುದೇ ಉಗ್ರ ಕೃತ್ಯಗಳು ನಡೆದಾಗ, ಇದರ ಹಿಂದಿನ ಕೈವಾಡ ಯಾರದ್ದು ಎನ್ನುವುದು ಲೋಕಕ್ಕೆಲ್ಲಾ ಗೊತ್ತಿರುವ ವಿಚಾರವಾಗಿದ್ದರೂ, ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಇಂತಹ ಘಟನೆಗಳನ್ನು ಖಂಡಿಸಿದ ಉದಾಹರಣೆಗಳು ವಿರಳ.

ಕೆಲವೇ ಕೆಲವು ಮೂಲಭೂತವಾದಿಗಳ ಖಟ್ಟರ್ ಧೋರಣೆಯಿಂದ ಇಡೀ ಸಮುದಾಯ ಟಾರ್ಗೆಟ್ ಆಗುತ್ತಿರುವ ಉದಾಹರಣೆ, ಅಂದಿನಿಂದ ಇಂದಿನ ಕೊರೊನಾದ ವರೆಗೆ ಸಿಗುತ್ತಲೇ ಇವೆ. ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಘಟನೆಯ ನಂತರವಂತೂ, ಮುಸ್ಲಿಮರನ್ನು ನೋಡುವ ರೀತಿಯೇ ಬೇರೆಯಾಗುತ್ತಿದೆ ಎಂದರೆ, ಇದಕ್ಕೆ ಕಾರಣರಾರು?

Muslims Unitedly Condemn The Recent Attack On Corona Warriors

'ಎಲ್ಲಾ ಮುಸ್ಲಿಮರು ಉಗ್ರರಲ್ಲ, ಆದರೆ ಉಗ್ರರೆಲ್ಲಾ ಮುಸ್ಲಿಮರು' ಎನ್ನುವ ಮಾತು ಬಹಳ ಚಾಲ್ತಿಯಲ್ಲಿರುವ ಮಾತು. ಈ ಮಾತಿಗೆ ಪೂರಕ ಎನ್ನುವಂತೆ, ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇದಕ್ಕೆ ಪುಷ್ಟಿ ನೀಡುವ ಉದಾಹರಣೆಗಳು ನಡೆಯುತ್ತಿವೆ.

ಭಾರತ ಒಂದು ಜಾತ್ಯಾತೀತ ರಾಷ್ಟ್ರ ಎಂದು ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕಿಗಾಗಿ ರಾಜಕೀಯ ಪಕ್ಷಗಳು ಯಾವಾಗ ಬಳಸಿಕೊಳ್ಳಲಾರಂಭಿಕೊಂಡವೋ, ಅಂದಿನಿಂದ, ಇಂದಿನವರೆಗೆ, ಹಿಂದೂ-ಮುಸ್ಲಿಂ ಭಾಯಿ ಭಾಯಿ ಎನ್ನುವ ಪದಕ್ಕೆ ಅರ್ಥ ಹುಡುಕುವ ಪರಿಸ್ಥಿತಿ ನಿರ್ಮಾಣವಾಗುವತ್ತ ದೇಶ ಸಾಗುತ್ತಿವೆ.

ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನಲ್ಲಿ ನಡೆದ ಇತ್ತೀಚಿನ ಎರಡು ಘಟನೆಗಳನ್ನು ಅವಲೋಕಿಸುವುದಾದರೆ, ದೇಶವನ್ನು ಪ್ರೀತಿಸುವ ನೈಜ ಮುಸ್ಲಿಮರಿಗೂ ಮತ್ತು ಸಮುದಾಯದ ರಾಜಕೀಯ ಪುಢಾರಿಗಳ ನಿಲುವಲ್ಲೂ ವ್ಯತ್ಯಾಸವನ್ನು ಕಾಣಬಹುದಾಗಿದೆ.

Muslims Unitedly Condemn The Recent Attack On Corona Warriors

ಕೊರೊನಾ ವಾರಿಯರ್ಸ್ ವಿರುದ್ದದ ದಾಳಿಯನ್ನು ಖಂಡಿಸಿ, ಮುಸ್ಲಿಂ ಸಮುದಾಯದವರು ಅದೆಷ್ಟೋ ಪೋಸ್ಟ್ ಗಳನ್ನು ಹಾಕಿರುವುದನ್ನು ಸಾಮಾಜಿಕ ತಾಣದಲ್ಲಿ ನೋಡಬಹುದಾಗಿದೆ. ಆದರೆ, ಈ ಸಮುದಾಯದ ಮುಖಂಡರ, 'ಗೊತ್ತಿಲ್ಲದೇ ಮಾಡಿರುತ್ತಾರೆ, ಭಯಪಟ್ಟು ಇಂತಹ ಕೆಲಸ ನಮ್ಮವರಿಂದ ಆಗಿರಬಹುದು, ವಾರಿಯರ್ಸ್ ಗಳು ನಮ್ಮನ್ನು ಕೇಳಿ ಅಲ್ಲಿಗೆ ಹೋಗಬೇಕಾಗಿತ್ತು' ಎನ್ನುವ ಹೇಳಿಕೆಗಳಿಂದ, ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಕನಿಷ್ಠ ಬುದ್ದಿ ಇವರುಗಳಿಗೆ ಇಲ್ಲದೇ ಇರುವುದು ದುರಂತ.

"ಈಗ ಹರಡಿರುವ ಕೊರೊನಾ ವೈರಾಣಿಗೆ ಯಾವುದೇ ಕೋಮು, ಧರ್ಮ ಎನ್ನುವುದಿಲ್ಲ" ಎಂದು ಪ್ರಧಾನಿಗಳು ಹೇಳಿದ್ದಾರೆ. "ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಟಾರ್ಗೆಟ್ ಮಾಡಿದರೆ ಹುಷಾರ್" ಎನ್ನುವ ಎಚ್ಚರಿಕೆ ಸಿಎಂ ಕಡೆಯಿಂದಲೂ ಬಂದಿದೆ. ಇಂತಹ ಮೆಡಿಕಲ್ ಎಮರ್ಜೆನ್ಸಿಯ ವೇಳೆ, ತಮ್ಮನ್ನು ರಕ್ಷಿಸಲು ಬಂದವರ ಮೇಲೆಯೇ ದಾಳಿ ಮಾಡುತ್ತಾರೆ ಎಂದರೆ, ಇದರ ಹಿಂದೆ ಇವರಲ್ಲ, ಯಾರೋ ಮತಾಂಧರು ಇರಬಹುದು ಎನ್ನುವುದು ಅಲ್ಪಮತಿಯವರಿಗೂ ಅರ್ಥವಾಗುವ ವಿಚಾರ.

Muslims Unitedly Condemn The Recent Attack On Corona Warriors

ಇವರು ಯಾರು? ಇವರ ತಾಳಕ್ಕೆ ಇಂತಹ ಕೆಲವೇ ಕೆಲವರು ಯಾಕೆ ಕುಣಿಯುತ್ತಿದ್ದಾರೆ? ಇಂತವರು ಮತ್ತು ಇವರ ಹಿಂದಿರುವ ಧರ್ಮಾಂಧರಿಂದ ಇಡೀ ಸಮುದಾಯ ಟಾರ್ಗೆಟ್ ಆಗಬೇಕೇ? ಇಂತಹ ಹತ್ತು ಹಲವು ಪ್ರಶ್ನೆಗಳನ್ನು ಮುಸ್ಲಿಮರು ತಮ್ಮಲ್ಲಿ ತಾವೇ ಹಾಕಿಕೊಳ್ಳಬೇಕಿದೆ.

ಈ ದೇಶಕ್ಕೆ ಲೆಕ್ಕವಿಲ್ಲದಷ್ಟು ಪ್ರಜ್ಞಾವಂತ, ವಿಚಾರವಂತ, ಮುಸ್ಲಿಮರ ಕೊಡುಗೆಯಿದೆ. ರಾಮ್ ನಾಮ್ ಸತ್ಯಹೇ ಎಂದು ಹಿಂದೂ ಸಮುದಾಯದೊಬ್ಬರ ಅಂತಿಮ ಸಂಸ್ಕಾರ ನಡೆಸಿದ ಉದಾಹರಣೆಗಳೂ ಸಿಗುತ್ತವೆ. ಈಗ ನಡೆಯುತ್ತಿರುವ ಘಟನೆಗಳನ್ನು ದುಬಾರಿಯಾಗುವ ಮುನ್ನ ಒಕ್ಕೂರಿಲಿನಿಂದ ಖಂಡಿಸಿ, ಧರ್ಮಾಂಧರನ್ನು ದೂರವಿಡಬೇಕಿದೆ. ಹಿಂದೂ-ಮುಸ್ಲಿಂ ಭಾಯಿ ಭಾಯಿ ಎನ್ನುವುದನ್ನು ಅಸಲಿಯಾಗಿ ತೋರಿಸುವ ಸಮಯವಿದು. ಇದು ಬಹುಸಂಖ್ಯಾತರಿಗೂ ಅನ್ವಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+