ಆರ್‌ಎಸ್ಎಸ್ ಪಥಸಂಚಲನಕ್ಕೆ ಮುಸ್ಲಿಂ ಪುಷ್ಪವೃಷ್ಟಿಯ ಸಿಂಚನ

ಅಜ್ಮೀರ್, ಅ 24: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಎನ್ನುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ವಿಜಯದಶಮಿ ಪಥಸಂಚಲನದ ವೇಳೆ ಮುಸ್ಲಿಂ ಸಮುದಾಯದವರು ಪುಷ್ಪವೃಷ್ಠಿಗೈದು ಭ್ರಾತೃತ್ವ ಸಂದೇಶ ರವಾನಿಸಿದ್ದಾರೆ.

ರಾಜಸ್ಥಾನದ ಅಜ್ಮೀರ್ ನಗರದಲ್ಲಿ ಆರ್ ಎಸ್ ಎಸ್ ಸಂಸ್ಥಾಪನೆಯ 90ನೇ ವರ್ಷ ಮತ್ತು ವಿಜಯದಶಮಿ ಪ್ರಯುಕ್ತ ಶುಕ್ರವಾರ (ಅ 23) ನಡೆದ ಶಿಸ್ತುಬದ್ದ ಪಥಸಂಚಲನದ ವೇಳೆ ಮುಸ್ಲಿಂ ಸಮುದಾಯದವರು ಕಾರ್ಯಕರ್ತರ ಮೇಲೆ ಗುಲಾಬಿ ಹೂಗಳನ್ನು ಎಸೆದು ಸ್ವಾಗತಿಸಿದ್ದಾರೆ.

ಪಥಸಂಚಲನ ನಗರದ ದರ್ಗಾ ಶರೀಫ್ ಮುಂದೆ ಹಾದುಹೋಗುತ್ತಿದ್ದಂತೇ, ದರ್ಗಾದಿಂದ ಮುಸ್ಲಿಂ ಸಮುದಾಯದವರು ಗುಲಾಬಿ ಹೂಗಳನ್ನು ಎಸೆದು ವಿಶಿಷ್ಟ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. (ಮೋಹನ್ ಭಾಗವತ್ ವಿಜಯದಶಮಿ ಸಂದೇಶ)

Muslims shower rose petals on RSS Patha Sanchalan march in Ajmeer

ದಶಕಗಳಿಂದ ಅಜ್ಮೀರ್ ನಗರದಲ್ಲಿ ಪಥಸಂಚಲನದ ವೇಳೆ ಮುಸ್ಲಿಮರು ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ಪುಷ್ಪವೃಷ್ಠಿಯ ಮೂಲಕ ಸ್ವಾಗತಿಸುವ ಪದ್ದತಿ ನಡೆದುಕೊಂಡು ಬರುತ್ತಿದೆ.

ನಮ್ಮ ನಗರದಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ವೈಷಮ್ಯವಿಲ್ಲ. ಎರಡೂ ಕೋಮಿನವರು ಶಾಂತಿ, ಸಾಮರಸ್ಯ, ಪ್ರೀತಿಯಿಂದ ಬದುಕುತ್ತಿದ್ದೇವೆ.

ದಶಕಗಳಿಂದ ಆರ್ ಎಸ್ ಎಸ್ ಪಥಸಂಚಲನದ ವೇಳೆ ಹೂಎಸೆದು ಸ್ವಾಗತಿಸುತ್ತಿದ್ದೇವೆ. ಇದು ಮುಂಬರುವ ದಿನಗಳಲ್ಲೂ ಮುಂದುವರಿದುಕೊಂಡು ಹೋಗಲಿದೆ ಎಂದು ಮುಸ್ಲಿಂ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+