ಮುಸ್ಲಿಮರು ಶ್ರೀರಾಮನ ವಂಶಸ್ಥರು: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿಕೆ

ಮಥುರಾ (ಉತ್ತರ ಪ್ರದೇಶ), ಅಕ್ಟೋಬರ್ 2: ಮುಸ್ಲಿಮರು ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಹಾಯ ಮಾಡಬೇಕು ಎಂದು ಮನವಿ ಮಾಡಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಗಿರಿರಾಜ್ ಸಿಂಗ್, ಮುಸ್ಲಿಮರು ಶ್ರೀರಾಮನ ವಂಶಸ್ಥರೇ ಹೊರತು ಬಾಬರನ ವಂಶಸ್ಥರಲ್ಲ ಎಂದು ಹೇಳಿದ್ದಾರೆ.

'ರಾಮ ಮಂದಿರ ನಿರ್ಮಾಣಕ್ಕೆ ಒಂದು ವೇಳೆ ಮುಸ್ಲಿಮರು ನೆರವು ನೀಡದೆ ಇದ್ದರೆ ನನಗೆ ದುಃಖವಾಗುತ್ತದೆ. ಏಕೆಂದರೆ ಮುಸ್ಲಿಮರು ಕೂಡ ಶ್ರೀರಾಮನ ವಂಶದಿಂದಲೇ ಬಂದವರು. ಅವರು ಬಾಬರ್ ಅಥವಾ ಆತನ ವಂಶದಿಂದ ಬಂದವರಲ್ಲ' ಎಂದಿದ್ದಾರೆ.

ಒಂದು ವೇಳೆ ಹಿಂದೂಗಳು ತಾಳ್ಮೆ ಕಳೆದುಕೊಂಡರೆ ಅವರು ಮಥುರಾ, ಅಯೋಧ್ಯಾ ಮತ್ತು ಕಾಶಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲಿದ್ದಾರೆ ಎಂದು ಗಿರಿರಾಜ್ ಹೇಳಿದ್ದಾರೆ.

 Minister Giriraj Singh

ಕಾಂಗ್ರೆಸ್ ಪಕ್ಷ ಹಾಗೂ ಅದರ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಶಿವನನ್ನು ಪೂಜಿಸುವ ಮತ್ತು ಹರ ಹರ ಮಹದೇವ ಎಂದು ಜಪಿಸುವ ಪಕ್ಷದ ಕಾರ್ಯಕರ್ತರನ್ನು ವಜಾಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

'ನೀವು ನಿಜವಾದ ಹಿಂದೂವೇ ಆಗಿದ್ದರೆ, ನಿಮ್ಮ ಸಂತೋಷ ಕೂಟಗಳಲ್ಲಿ ಗೋಮಾಂಸ ತಿನ್ನುವುದನ್ನು ನಿಲ್ಲಿಸಿ ಮತ್ತು ಚುನಾವಣೆ ಸಮೀಪಿಸಿದಾಗ ದೇವಸ್ಥಾನಗಳಿಗೆ ಭೇಟಿ ಕೊಡುವುದನ್ನು ನಿಲ್ಲಿಸಿ' ಎಂದು ರಾಹುಲ್ ಗಾಂಧಿಗೆ ಸವಾಲು ಹಾಕಿದರು.

ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಅವರು ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಬೆಂಬಲ ನೀಡಬೇಕು ಎಂದು ಆಗ್ರಹಿಸಿದ್ದರು.

'ನಮ್ಮ ತಂಡ ಹೆಚ್ಚು ಬಲವಾಗಿದೆ. ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಆದರೆ, ನಮ್ಮ ಶಿಯಾ ಸಹೋದರರು ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಿದಂತೆ ಇತರೆ ಮುಸ್ಲಿಮರು ಕೂಡ ಬೆಂಬಲ ನೋಡಬೇಕು. ತಮ್ಮ ಹಠಮಾರಿತನವನ್ನು ಅವರು ಬಿಡಬೇಕು. ಏಕೆಂದರೆ ನಾವಿಬ್ಬರೂ ಹಿಂದೂ ವಂಶಸ್ಥರೇ' ಎಂದು ಗಿರಿರಾಜ್ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+