Muslim population in India: 2023ರಲ್ಲಿ ಭಾರತದ ಮುಸ್ಲಿಮರ ಜನಸಂಖ್ಯೆ ಎಷ್ಟು ಗೊತ್ತೇ? ಮೋದಿ ಸರ್ಕಾರ ನೀಡಿದ ಅಂಕಿಅಂಶ ತಿಳಿಯಿರ
ನವದೆಹಲಿ, ಜುಲೈ 24: 2023ರಲ್ಲಿ ಭಾರತದ ಮುಸ್ಲಿಮರ ಜನಸಂಖ್ಯೆ ಎಷ್ಟಿದೆ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಮಾಲಾ ರಾಯ್ ಅವರು ಭಾರತದ ಅಲ್ಪಸಂಖ್ಯಾತರ ಕುರಿತು ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕೆ ಲಿಖಿತ ಉತ್ತರ ನೀಡಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು ಭಾರತದ ಮುಸ್ಲಿಮ್ ಜನಸಂಖ್ಯೆ ಕುರಿತು ಮಾಹಿತಿ ನೀಡಿದ್ದಾರೆ.
2023 ರಲ್ಲಿ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆಯು 19.75 ಕೋಟಿ ಆಗಲಿದೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ.

ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಮಾಲಾ ರಾಯ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ, '2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು 17.22 ಕೋಟಿಯಷ್ಟಿತ್ತು. ಇದು ದೇಶದ ಒಟ್ಟು ಜನಸಂಖ್ಯೆಯ ಶೇ 14.2 ರಷ್ಟಿದೆ' ಎಂದು ಹೇಳಿದ್ದಾರೆ.
ಜುಲೈ 2020 ರಲ್ಲಿ ರಾಷ್ಟ್ರೀಯ ಆಯೋಗ ನೀಡಿದ ವರದಿ ಪ್ರಕಾರ, '2023 ರಲ್ಲಿ ದೇಶದ ಒಟ್ಟು ಜನಸಂಖ್ಯೆಯು 138.82 ಕೋಟಿಯಷ್ಟಿದೆ. 2023 ರಲ್ಲಿ 19.75 ಕೋಟಿ ಆಗಲಿದೆ.
2021-22 ರ ಪ್ರಕಾರ, ಏಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮುಸ್ಲಿಮರ ಸಾಕ್ಷರತೆಯ ಪ್ರಮಾಣವು ಶೇ 77.7 ರಷ್ಟಿದೆ. ಎಲ್ಲಾ ವಯಸ್ಸಿನ ಮುಸ್ಲಿಂ ಕಾರ್ಮಿಕರ ಪ್ರಮಾಣವು ಶೇ 35.1 ರಷ್ಟಿದೆ ಎಂದು ಇರಾನಿ ಲೋಕಸಭೆಗೆ ತಿಳಿಸಿದ್ದಾರೆ.

ಸಚಿವಾಲಯವು ನಡೆಸಿದ ಬಹು ಸೂಚಕ ಸಮೀಕ್ಷೆ 2020-21 ರ ಪ್ರಕಾರ, ಶೇ 94.9 ರಷ್ಟು ಮುಸ್ಲಿಮರು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹೊಂದಿದ್ದಾರೆ. ಶೇಕಡಾ 97.2 ರಷ್ಟು ಮುಸ್ಲಿಂ ವ್ಯಕ್ತಿಗಳು ಉತ್ತಮ ಶೌಚಾಲಯಗಳನ್ನು ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಾರ್ಚ್ 31, 2014 ರ ನಂತರ ಹೊಸ ಮನೆ, ಫ್ಲಾಟ್ ಅನ್ನು ಖರೀದಿಸಿದ ಅಥವಾ ನಿರ್ಮಿಸಿದ ಮುಸ್ಲಿಂ ಕುಟುಂಬಗಳ ಶೇಕಡಾವಾರು ಪ್ರಮಾಣವು 50.2 ರಷ್ಟಿದೆ ಎಂದು ಇರಾನಿ ಹೇಳಿದ್ದಾರೆ.
ರಾಯ್ ಅವರು ಮೂರು ಪ್ರಶ್ನೆಗಳನ್ನು ಕೇಳಿದ್ದರು. ಮುಸ್ಲಿಂ ಜನಸಂಖ್ಯೆಯ ಬಗ್ಗೆ ಯಾವುದೇ ದೇಶವ್ಯಾಪಿ ಡೇಟಾ ಇದೆಯೇ? ಸರ್ಕಾರದ ಬಳಿ ಪಾಸ್ಮಾಂಡ ಮುಸ್ಲಿಮರ ಜನಸಂಖ್ಯೆಯ ಡೇಟಾ ಇದೆಯೇ? ದೇಶದಲ್ಲಿ ಪಾಸ್ಮಾಂಡ ಮುಸ್ಲಿಮರ ಸಾಮಾಜಿಕ-ಆರ್ಥಿಕ ಸ್ಥಿತಿಯ ವಿವರಗಳನ್ನು ಸರ್ಕಾರ ಹೊಂದಿದೆಯೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು.












Click it and Unblock the Notifications