ಮೇಘಾಲಯ: ಮತದಾರರ ಮೋಡಿ ಮಾಡಲು ಮೋದಿ 'ಮ್ಯೂಸಿಕ್'
ಶಿಲ್ಲಾಂಗ್, ಫೆಬ್ರವರಿ 09: ಮೋಡಗಳಿಂದ ಆವರಿಸಿರುವ ಸುಂದರ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಈಗ ಚುನಾವಣೆ ಗಾಳಿ ಬೀಸಿದೆ. ಭಾರತದ ಸಂಗೀತದ ಕೇಂದ್ರ ಎನಿಸಿಕೊಂಡಿರುವ ಮೇಘಾಲಯದಲ್ಲಿ ಮತದಾರರನ್ನು ಸೆಳೆಯಲು ಬೇಕು ಮ್ಯೂಸಿಕ್ ಮಂತ್ರ.
ಚುನಾವಣೆ ವೇಳೆಯಲ್ಲಿ ಪಾಶ್ಚಾತ್ಯದಿಂದ ಜಾನಪದ ಗೀತೆ ತನಕ ಎಲ್ಲಾ ಬಗೆಯ ಸಂಗೀತದ ಹೊನಲು ಇಲ್ಲಿ ಹರಿಯುತ್ತದೆ. ಚುನಾವಣಾ ಪ್ರಚಾರದ ವೇಳೆ 'ಮ್ಯೂಸಿಕ್' ಪ್ರಧಾನ ಅಂಶವಾಗಿ ಕಾಣುತ್ತದೆ.
ಹೀಗಾಗಿ, ಸ್ಥಳೀಯ ಜಾನಪದ ಗಾಯಕ, ಗಾಯಕಿಯರು ನೃತ್ಯಗಾರರಿಗೆ ಭರಪೂರ ಅವಕಾಶಗಳು ತೆರೆದುಕೊಂಡಿವೆ.ಅಭ್ಯರ್ಥಿಗಳನ್ನು ಹಾಡಿ ಹೊಗಳು ಬಗೆ ಬಗೆಯ ಮ್ಯೂಸಿಕ್ ಆಲ್ಬಂಗಳು ಬರುತ್ತಿವೆ.

ಮೋದಿ ಮ್ಯೂಸಿಕ್ ಮೋಡಿ: 2016ರಲ್ಲಿ ಇಲ್ಲಿನ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಸ್ಥಳೀಯ ಜಾನಪದ ವಾದ್ಯವೃಂದದ ಜತೆ ಬೆರೆತು ಖಾಸಿ ಸಾಂಪ್ರದಾಯ ಡ್ರಮ್ ಬಾರಿಸಿದ್ದರು. ಮೋದಿ ಅವರಿಗೂ ಸಂಗೀತವೆಂದರೆ ತುಂಬಾ ಇಷ್ಟ. ಮೇಘಾಲಯಕ್ಕೂ ಸಂಗೀತವೆಂದರೆ ಪ್ರಾಣ. ಹೀಗಾಗಿ, ಮೋದಿ ಅವರು ಈ ಬಾರಿ ಮತ್ತೊಮ್ಮೆ ಸಂಗೀತದ ಮೂಲಕವೇ ನಮ್ಮನ್ನು ತಲುಪಬಹುದಾಗಿದೆ ಎಂದು ಕಾಲೇಜ್ ವಿದ್ಯಾರ್ಥಿ ಡೇವಿಡ್ ಡಾಖರ್.
ಇತ್ತೀಚೆಗೆ ಇಲ್ಲಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ತಮ್ಮ ಭಾಷಣದಲ್ಲಿ ಇಲ್ಲಿನ ಜನರ ಸಂಗೀತ ಪ್ರೇಮದ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದರು.
ಸ್ಥಳೀಯ ರಾಜಕಾರಣಿಗಳ ಪೈಕಿ ಆರ್ ಜಿ ಲಿಂಗ್ಡೋ ಹಾಗೂ ಯುಡಿಪಿಯ ಪಾಲ್ ಲಿಂಗ್ಡೋ ಅವರು ಸಂಗೀತಗಾರರಾಗಿದ್ದಾರೆ, ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಸ್ವತಃ ಹಾಡುಗಾರರಾಗಿದ್ದಾರೆ.

ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಮೂಲಕ ಕೂಡಾ ಸಂಗೀತ ಹರಿಯುತ್ತಿದೆ. ಮತದಾರರ ಓಲೈಕೆ ನಡೆಯುತ್ತಿದೆ.
ಫೆಬ್ರವರಿ 27ರಂದು ಮೇಘಾಲಯದ ಜತೆಗೆ ನಾಗಾಲ್ಯಾಂಡ್ ನಲ್ಲೂ ವಿಧಾನಸಭಾ ಚುನಾವಣೆ ನಡೆಯಲಿದೆ. ತ್ರಿಪುರಾದಲ್ಲಿ ಫೆ.18ರಂದು ಮತದಾನ ನಿಗದಿಯಾಗಿದೆ. ಎಲ್ಲಾ ಮೂರು ರಾಜ್ಯಗಳಲ್ಲೂ 60 ವಿಧಾನಸಭಾ ಸ್ಥಾನಗಳಿವೆ. ಈ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 03ರಂದು ಪ್ರಕಟವಾಗಲಿದೆ. (ಒನ್ಇಂಡಿಯಾ ಸುದ್ದಿ)
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications