Metro: ಮೆಟ್ರೋ ನಿಲ್ದಾಣಗಳಲ್ಲಿ ಉಗುಳೋಕೆ ತೊಟ್ಟಿ! ಸ್ವಚ್ಛತೆಗಾಗಿ ಹೊಸ ವ್ಯವಸ್ಥೆ, ಮಿಶ್ರ ಪ್ರತಿಕ್ರಿಯೆ

Metro Stations: ಮೆಟ್ರೋ ರೈಲುಗಳು ಮೆಟ್ರೋ ನಿಲ್ದಾಣಗಳು ಎಂದರೆ ಕೇವಲ ಸಾರ್ವಜನಿಕ ಸಾರಿಗೆ ಅಷ್ಟೇ ಅಲ್ಲ. ಅವೆಲ್ಲ ನಮ್ಮ ಆಸ್ತಿ. ಅದೆಲ್ಲ ಕಾಪಾಡಿಕೊಳ್ಳುವುದು, ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಯಾಣಿಕರ ಕರ್ತವ್ಯವಾಗಿರುತ್ತದೆ. ನೈರ್ಮಲ್ಯತೆ ಕಾಪಾಡುವ ಸ್ಥಳದಲ್ಲಿ ಕೆಲವೊಮ್ಮೆ ಉಗಿದು ಗಲೀಜಿ ಮಾಡಲಾಗುತ್ತದೆ. ಇದನ್ನು ತಡೆಯಲು ಮೆಟ್ರೋ ನಿಲ್ದಾಣದಲ್ಲಿ ಪ್ರತ್ಯೇಕ 'ಸ್ಪರ್ಶ-ರಹಿತ' (touchless) ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಮೆಟ್ರೋಗೆ ಇದರ ಅಗತ್ಯತೆ ಇಲ್ಲ ಎಂದನಿಸುತ್ತದೆ.

ಮೆಟ್ರೋ ನಿಲ್ದಾಣಗಳಲ್ಲಿ ಇಂತಹ ಸೌಲಭ್ಯ ಕಲ್ಪಿಸುವ ಮೂಲಕ ಉಗಿಯುವವರಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ. ಇನ್ನೊಂದೆಡೆ ನೈರ್ಮಲ್ಯ ಕಾಪಾಡಲು ಇದೊಂದು ಸೂಕ್ತ ಮಾರ್ಗವಾಗಿದೆ. ಜೊತೆಗೆ ನಾಗರಿಕರ ಪ್ರಜ್ಞೆ ಕನ್ನಡಿ ಹಿಡಿದಂತಾಗಿದೆ ಎಂಬರ್ಥದಲ್ಲಿ ಚರ್ಚೆಗಳು ನಡೆಯುತ್ತಿವೆ.

Mumbai Metro

ದೇಶದ ವಾಣಿಜ್ಯ ನಗರಿ ಮುಂಬೈ ಮೆಟ್ರೋ ನಿಲ್ದಾಣಗಳ ಪೈಕಿ ಕೆಲವು ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಒಂದು ವಿಶಿಷ್ಟ ಸೌಲಭ್ಯ ಪರಿಚಯಿಸಲಾಗಿದೆ. ಇನ್ನು ಮುಂದೆ ಇಲ್ಲಿನ ಪ್ರಯಾಣಿಕರು ನಿಲ್ದಾಣಗಳ ಗೋಡೆ, ನೆಲ, ಇನ್ನಿತರ ಸ್ಥಳಗಳಲ್ಲಿ ಉಗುಳುವುದು ತಪ್ಪಲಿದೆ. ಗುಟ್ಕಾ, ಪಾನ್ ಮಸಾಲ, ಬೀಡಾ ತಿನ್ನುವವ ವರ್ಗದವವರು ಮೀಸಲಾದ ಉಗುಳುವ ತೊಟ್ಟಿಗಳಲ್ಲಿ ಉಗಿಯಬೇಕಿದೆ. ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ ಉತ್ತರದ ಕಡೆಗೆ ಗುಟ್ಕಾ, ಪಾನ್ ಮಸಾಲ ಅಗಿಯುವವರ ಪ್ರಮಾಣ ಹೆಚ್ಚಿದೆ ಎನ್ನಲಾಗಿದೆ.

ಇತ್ತೀಚೆಗೆ ಮೆಟ್ರೋ ನಿಲ್ದಾಣದಲ್ಲಿರುವ ಎಲ್ಲೆಂದರಲ್ಲಿ ಉಗಿದಿದ್ದ ಪ್ರಕರಣ ವರದಿ ಆಗಿತ್ತು. ವೈರಲ್ ಆಗಿದ್ದ ಫೋಟೋ ಮೇಲೆ MMRDA, ಮಹಾ ಮುಂಬೈ ಮೆಟ್ರೋ ಲೋಗೋ ಇತ್ತು. ಇದು ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮೆಟ್ರೋ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸೆನ್ಸಾರ್ ಆಧಾರಿತ ಕಾರ್ಯ ನಿರ್ವಹಣೆ

ಮೆಟ್ರೋ ನಿಲ್ದಾಣಗಳ ಈ ತೊಟ್ಟಿಗಳು ಸ್ಪರ್ಶ ರಹಿತ ಮಾತ್ರವಲ್ಲದೇ ಸೆನ್ಸಾರ್ (ಸಂವೇದಕ) ಆಧಾರಿತದಲ್ಲಿ ಕೆಲಸ ಮಾಡುತ್ತವೆ. ಕೈಯಿಂದ ಮುಟ್ಟದೇ ಬಳಸಬಹುದು. ವಿವಿಧ ಭಾಷಿಗರು ತೊಟ್ಟಿ ಗುರುತಿಸಿ ಬಳಸುವಂತೆ ಅದರ ಮೇಲೆ ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸೂಚನೆ ಹಾಕಲಾಗಿದೆ. ಮುಖ್ಯವಾಗಿ ನಿಲ್ದಾಣಗಳಲ್ಲಿ "ಜವಾಬ್ದಾರಿಯುತರಾಗಿ ವರ್ತಿಸಿ" ಎಂಬ ಸಂದೇಶ ಸಹ ಪ್ರದರ್ಶಿಸಲಾಗಿದೆ.

ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ, ಏಕೆ?

ಈ ವ್ಯವಸ್ಥೆ ಕಂಡು ಕೆಲವು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ನೈರ್ಮಲ್ಯ ಕಾಪಾಡಲು ಈ ಮೂಲಸೌಕರ್ಯ ಕಲ್ಪಿಸಿದ್ದು ಸರಿ ಇದೆ ಎಂದು ಮೆಟ್ರೋ ಕಾರ್ಯವನ್ನು ಶ್ಲಾಘಿಸಿದ್ದಾರೆ. ಉಗುಳುವ ವರ್ಗಕ್ಕೆ ಇದೊಂದು ಪ್ರಾಯೋಗಿಕ ಮಾರ್ಗವೆಂದು ಹೇಳಿದ್ದಾರೆ. ಮತ್ತೊಬ್ಬರು ಶಿಸ್ತು ಬದ್ಧ ವರ್ತನೆ ತೋರುವ ಬದಲು ಹೇಗೆ ವ್ಯವಸ್ಥೆ ಇದೆ ಎಂದು ವ್ಯಸನ ಜಾಸ್ತಿ ಮಾಡುವ ಸಾಧ್ಯತೆ ಇರುತ್ತದೆ. ಇದರಿಮದ ಅವರಿಗೆ ಉತ್ತೇಜನ ಸಿಕ್ಕಂತಾಗುತ್ತದೆ. ಎಷ್ಟು ಬಾರಿಯಾದರೂ ಈ ಸೌಲಭ್ಯ ಬಳಸುತ್ತಾರೆ? ಅಂತಲೂ ಕೆಲವರು ಅನುಮಾನ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬೆಂಗಳೂರಿಗೆ ಈ ವ್ಯವಸ್ಥೆಯ ಅಗತ್ಯತೆ ಇಲ್ಲ!

ಮುಂಬೈ ನಿಲ್ದಾಣಗಳಂತೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಈ ಸೌಲಭ್ಯ ಪರಿಚಯಿಸುವ ಗೊಡವೆಯೇ ಇಲ್ಲ. ಕಾರಣ ಹೆಸರೇ ಹೇಳುವಂತೆ ಐಟಿ ನಗರಿ ಬೆಂಗಳೂರಿನಲ್ಲಿ ಎಲ್ಲ ಭಾಗದ, ಎಲ್ಲ ವರ್ಗದ ಜನರು ಇದ್ದಾರೆ. BMRCL ಕಟ್ಟುನಿಟ್ಟಿನ ನೈರ್ಮಲ್ಯ ನಿಯಮ ಜಾರಿಗೆ ತಂದಿದ್ದು, ಎಲ್ಲರು ಆ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಪ್ರಯಾಣಿಕರು ನಾಗರಿಕ ಪ್ರಜ್ಞೆಯಿಂದ ವರ್ತಿಸುತ್ತಾರೆ. ಕೆಲವೊಮ್ಮೆ ಕಾನೂನು ಉಲ್ಲಂಘನೆ ಪ್ರಕರಣಗಳು ನಡೆದಾಗಲೂ ಅಧಿಕಾರಿಗಳು ದಂಡ ವಿಧಿಸಿ ಪಾಠ ಕಲಿಸಿದ್ದಾರೆ. ಹೀಗಾಗಿ ನೈರ್ಮಲ್ಯ ವಿಚಾರದಲ್ಲಿ ಬೆಂಗಳೂರು ಮೆಟ್ರೋ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ. ಇದೆಲ್ಲ ಕಾರಣಗಳಿಂದ ಇಲ್ಲಿ ಉಗುಳಲು ಪ್ರತ್ಯೇಕ ತೊಟ್ಟಿಗಳು ಅನಗತ್ಯ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+