ಕಪಾಳ ಮೋಕ್ಷಕ್ಕೆ ಆಯತಪ್ಪಿ ರೈಲ್ವೇ ಹಳಿ ಮೇಲೆ ಬಿದ್ದ ವ್ಯಕ್ತಿ! ಮುಂದಾಗಿದ್ದು ದುರಂತ, ಸಿಸಿಟಿವಿಯಲ್ಲಿ ಸೆರೆ!
ಮುಂಬೈ, ಆಗಸ್ಟ್ 18: ಮುಂಬೈ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ, ನಿಲ್ದಾಣದಲ್ಲಿ ಇಬ್ಬರು ಜಗಳವಾಡುತ್ತಿದ್ದಾರೆ. ಕೋಪದಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬನನ್ನು ಸಬ್ಅರ್ಬನ್ ರೈಲು ಬರುವ ವೇಳೆಗೆ ಸರಿಯಾಗಿ ಕಪಾಳಮೋಕ್ಷ ಮಾಡಿದ್ದಾನೆ. ಕಪಾಳಮೋಕ್ಷ ಮಾಡಿದಾಗ ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದ ದಿನೇಶ್ ರಾಥೋಡ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಭಾನುವಾರ ರಾತ್ರಿ 9:15ರ ಸುಮಾರಿಗೆ ನಡೆದ ಜಗಳದ ವೇಳೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದಾಗ ಆಯತಪ್ಪಿ ದಿನೇಶ್ ಟ್ರ್ಯಾಕ್ ಮೇಲೆ ಬಿದ್ದಿದ್ದು, ರೈಲು ಹರಿದು ಸ್ಥಳದಲ್ಲೇ ಮೃತಪಟ್ಟಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಿಳಿ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ ದಿನೇಶ್ ಪ್ಲಾಟ್‌ಫಾರ್ಮ್‌ನಲ್ಲಿ ಶೀತಲ್ ಮಾನೆ (30) ಎಂಬಾತನಿಗೆ ಡಿಕ್ಕಿ ಹೊಡೆದಿರುವುದು ಸಿಸಿಟಿವಿ ಸೆರೆಯಾಗಿದೆ. ಅವಿನಾಶ್ ಮಾನೆ ಮತ್ತು ರಾಥೋಡ್ ನಡುವೆ ತೀವ್ರ ವಾಗ್ವಾದ ನಡೆಯಿತು.

ಮಾತಿನ ಚಕಮಕಿಯಲ್ಲಿ, ಅವಿನಾಶ್ ಮಾನೆ ಕೋಪದ ಭರದಲ್ಲಿ, ಬ್ಯಾಲೆನ್ಸ್ ಕಳೆದುಕೊಂಡ ರಾಥೋಡ್ಗೆ ಹೊಡೆದಿದ್ದಾರೆ, ಕಪಾಳಮೋಕ್ಷ ಮಾಡಿದ ಬಳಿಕ ಹಳಿಗಳ ಮೇಲೆ ಬಿದ್ದು ಚಲಿಸುತ್ತಿದ್ದ ಉಪನಗರ ರೈಲಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಆರೋಪಿ ಅವಿನಾಶ್ ಮಾನೆ (31) ಮತ್ತು ಅವರ ಪತ್ನಿ ಶೀತಲ್ ಮಾನೆ (30) ಅವರನ್ನು ಬಂಧಿಸಲಾಗಿದೆ.
ರೈಲು ಸಮೀಪಿಸುತ್ತಿದ್ದಂತೆ ಆಘಾತಕ್ಕೊಳಗಾದ ಪ್ರಯಾಣಿಕರು ದಿನೇಶ್‌ನನ್ನು ರಕ್ಷಿಸಲು ಪ್ಲಾಟ್‌ಫಾರ್ಮ್‌ನ ಅಂಚಿಗೆ ಧಾವಿಸಿದರು. ಇನ್ನೂ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ನಂತರ ಮತ್ತು ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಅವಿನಾಶ್ ಮಾನೆಯನ್ನು ಬಂಧಿಸಿದ್ದಾರೆ ಮತ್ತು ನಂತರ ಅವರ ಪತ್ನಿಯನ್ನೂ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications