Mumbai Billboard collapse: ಜಾಹೀರಾತು ಏಜೆನ್ಸಿಯ ಭವೇಶ್ ಭಿಂಡೆ ಬಂಧನ

ಮುಂಬೈ, ಮೇ 16: ಮೂರು ದಿನಗಳ ಹಿಂದೆ ಮುಂಬೈನಲ್ಲಿ ಬೃಹತ್ ಜಾಹೀರಾತು ಫಲಕು ಬಿದ್ದು 16 ಜನರ ಸಾವಿಗೆ ಕಾರಣವಾದವನನ್ನು ಮುಂಬೈ ಪೊಲೀಸರು ಇಂದು ಗುರುವಾರ ಉದಯಪುರದಲ್ಲಿ ಬಂಧಿಸಿದ್ದಾರೆ.

ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಬೃಹತ್ ಎತ್ತದ ಜಾಹೀರಾತು ಫಲಕ ಬಿದ್ದು ಆಘಾತ ಸೃಷ್ಟಿಸಿತು. ಈ ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಹಾಕಿದ್ದ ಭವೇಶ್ ಭಿಂಡೆ ಅವರನ್ನು ಬಂಧಿಸಿದ್ದಾರೆ. ಈ ಕುರಿತು ಖುದ್ದು ಪೊಲೀಸ್ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

Mumbai Billboard Collapse Tragedy Police Arrested Advertising Company Director Bhavesh Bhinde

ಜಾಹೀರಾತು ಸಂಸ್ಥೆ ನಿರ್ದೇಶಕ ಭಿಂಡೆ

ಘಾಟ್‌ಕೋಪರ್ ಪ್ರದೇಶದಲ್ಲಿ ಹೋರ್ಡಿಂಗ್ ನಿರ್ಮಿಸಿದ್ದ ಜಾಹೀರಾತು ಸಂಸ್ಥೆ ಇಗೋ ಮೀಡಿಯಾ ಪ್ರೈವೇಟ್ ಕಂಪನಿಯ ನಿರ್ದೇಶಕ ಭವೇಶ್ ಭಿಂಡೆ ಬಂಧಿಸಲಾಗಿದೆ. ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ತಂಡ ಬಂಧಿಸಿದೆ.

ಅನಿರೀಕ್ಷಿತವಾಗಿ ಈ ಬೃಹತ್ 40x40 ಅಡಿಯ ಜಾಹೀರಾತು ಫಲಕ ಕುಸಿದು ಬಿದ್ದು ಕನಿಷ್ಠ 16 ಜನರನ್ನು ಬಲಿ ಪಡೆಯಿತು. ಸುಮಾರು 75 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ.

Mumbai Billboard Collapse Tragedy Police Arrested Advertising Company Director Bhavesh Bhinde

ಈ ಜಾಹೀರಾತು ಫಲಕವನ್ನು ಈ ಕಂಪನಿಯು10 ವರ್ಷಗಳ ಗುತ್ತಿಗೆಗೆ ನಿರ್ಮಿಸಿ ಕೊಟ್ಟಿತ್ತು. ಅಲ್ಲದೇ ಇಷ್ಟೊಂದು ದೊಡ್ಡ ಜಾಹೀರಾತು ಇದೇ ಮೊದಲಿಗೆ ಹಾಕಲಾಗಿದೆ ಎಂದು ಕಂಪನಿಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಅರ್ಜಿ ಸಲ್ಲಿಸಿತ್ತು. ಇದನ್ನು ಭಾರತದ ಅತಿದೊಡ್ಡ ವಾಣಿಜ್ಯ ನೇಮ್‌ಬೋರ್ಡ್ ಎಂದು ಸಹ ಕಂಪನಿ ಹೇಳಿಕೊಂಡಿತ್ತು.

ಘಟನೆ ಬಳಿಕ ಪರಾರಿಯಾಗಿದ್ದ ಭಿಂಡೆ

ಸೋಮವಾರ ಈ ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ಪೊಲೀಸರು ಭಿಂಡೆ ವಿರುದ್ಧ ಸೆಕ್ಷನ್ 304, 337, 338 ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ಇದೇ ವೇಳೆ ಮುಂಬೈನಿಂದ ಭಿಂಡೆ ಪರಾರಿಯಾಗಿ ಉದಯಪುರ ಸೇರಿದ್ದ. ಆತನ ಶೋಧಕ್ಕೆ ಮುಂಬೈ ಮತ್ತು ಗುಜರಾತ್‌ನಿಂದ 10 ಕ್ಕೂ ಹೆಚ್ಚು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಇಂದು ಕೊನೆಗೆ ಭಿಂಡೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+