ರಾಮ್ ಚರಣ್, ಉಪಾಸನಾ ಮಗಳಿಗೆ ಮುಖೇಶ್ ಅಂಬಾನಿ ಉಡುಗೊರೆ ನೀಡಿರುವುದು ಸುಳ್ಳು ವದಂತಿ!
ಹೈದರಾಬಾದ್, ಜುಲೈ. 02: ಜೂನ್ 20 ರಂದು ಮೆಗಾಸ್ಟಾರ್ ಚಿರಂಜೀವಿ ಅವರ ಮಗ ರಾಮ್ ಚರಣ್ ಮತ್ತು ಸೊಸೆ ಉಪಾಸನಾ ಅವರು ತಮ್ಮ ಮಗುವನ್ನು ಸ್ವಾಗತಿಸಿರದ್ದಾರೆ. ಮದುವೆಯಾದ 11 ವರ್ಷಗಳ ನಂತರ, ಅವರ ಮಗುವಿನ ಆಗಮನವು ಇಡೀ ಚಿರಂಜೀವಿ ಕುಟುಂಬಕ್ಕೆ ಹೆಚ್ಚು ಸಂತೋಷವನ್ನು ತಂದಿದೆ. ಹಲವು ಗಣ್ಯರು ಮಗುವಿಗೆ ಉಡುಗೊರೆ ನೀಡಿದ್ದಾರೆ.
ಇದರ ಜೊತೆಗೆ ರಾಮ್ ಚರಣ್ ಅವರ ಮಗಳಿಗೆ ದೇಶದ ಪ್ರಮುಖ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಚಿನ್ನದ ತೊಟ್ಟಿಲು ಉಡುಗೊರೆಯಾಗಿ ನೀಡಿದ್ದಾರೆ ಎಂದು ಇತ್ತೀಚಿನ ವದಂತಿಗಳು ಹರಡಿವೆ. ಈ ವರದಿಗಳನ್ನು ಯಾವುದನ್ನೂ ದೃಢೀಕರಿಸಲಾಗಿಲ್ಲ ಮತ್ತು ಹಲವಾರು ಮಾಧ್ಯಮಗಳು ಈ ವರದಿಯನ್ನು ನಕಲಿ ಎಂದು ಬಣ್ಣಿಸಿವೆ. ಇದರ ಜೊತೆಗೆ ರಾಮ್ ಚರಣ್ ಅವರ ಅಧಿಕೃತ ತಂಡವು ಸಂಪೂರ್ಣವಾಗಿ ಸುಳ್ಳು ಎಂದು ದೃಢಪಡಿಸಿದೆ.

ಮೆಗಾಸ್ಟಾರ್ ಚಿರಂಜೀವಿ ಅವರ ಮೊಮ್ಮಗಳಿಗೆ "ಕ್ಲಿನ್ ಕಾರ ಕೊನಿಡೆಲಾ" ಎಂದು ಹೆಸರಿಸಲಾಗಿದೆ. ವಿಶೇಷ ನಾಮಕರಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಅವರ ಇಡೀ ಮನೆಯನ್ನು ಸಂಭ್ರಮದಿಂದ ತುಂಬಿದೆ ಈ ಮಗು. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸ್ಟಾರ್ ಜೋಡಿಗೆ ಹೃತ್ಪೂರ್ವಕ ಶುಭಾಶಯ ಹೇಳಿದ್ದು, ಅವರ ಪ್ರೀತಿಯನ್ನು ವ್ಯಕ್ತಪಡಿಸಲು ಅವರಿಗೆ ಅದ್ಭುತ ಉಡುಗೊರೆಗಳನ್ನು ಕಳುಹಿಸಿದ್ದಾರೆ.
Fake News: Mukesh Ambani gift a golden cradle to Ram Charan and Upasana's daughter
— greatandhra (@greatandhranews) June 30, 2023
More details soon#MegaPrincess #RamCharan #UpasanaKonidela
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ನವಜಾತ ಮಗುವಿಗೆ ಕೊಟ್ಟಿರುವ ತೊಟ್ಟಿಲಿನ ಉಡುಗೊರೆ 1.2 ಕೋಟಿ ರೂಪಾಯಿ ಮೌಲ್ಯದ ಅತ್ಯಂತ ದುಬಾರಿ ಚಿನ್ನದ ತೊಟ್ಟಿಲು ಎಂದು ವದಂತಿಗಳು ಹರಡಿದ್ದರು. ಆದರೆ, ಮೊದಲೇ ಹೇಳಿದಂತೆ, ಈ ವರದಿಗಳನ್ನು ಸುಳ್ಳು ಎಂದು ಪರಿಗಣಿಸಲಾಗಿದೆ ಮತ್ತು ರಾಮ್ ಚರಣ್ ತಂಡವು ಬಲವಾಗಿ ನಿರಾಕರಿಸಿದೆ.

ಜೂನ್ 19 ರ ಸಂಜೆಯ ಸಮಯದಲ್ಲಿ, ಉಪಾಸನಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಮಧ್ಯರಾತ್ರಿಯಲ್ಲಿ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications