ಚೀನಾ & ಪಾಕಿಸ್ತಾನ ಬುಡಕ್ಕೆ ಬತ್ತಿ: ಭಾರತೀಯ ಸೇನೆಗೆ ಆನೆಬಲ!

ನವದೆಹಲಿ: ಚೀನಾ & ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಲು ಭಾರತ ಮುಂದಾಗಿದೆ. ಎರಡೂ ರಾಷ್ಟ್ರಗಳ ವಿರುದ್ಧ ರಕ್ಷಣೆಗಾಗಿ ಭಾರತ ನೌಕಾಪಡೆಗೆ ಅಗತ್ಯವಾಗಿ ಪ್ರಮುಖ ಅಸ್ತ್ರ ಖರೀದಿ ಮಾಡಲು ಭಾರತೀಯ ರಕ್ಷಣಾ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಮೂಲಕ ಭಾರತ ಸೇನೆಗೆ ಆನೆಬಲ ಬಂದಿದ್ದು ಚೀನಾ & ಪಾಕಿಸ್ತಾನ ಬುಡಕ್ಕೆ ಬತ್ತಿ ಇಟ್ಟಂತಾಗಿದೆ. ಹಾಗಾದ್ರೆ ಯಾವುದು ಆ 'ಬ್ರಹ್ಮಾಸ್ತ್ರ'? ಸಂಪೂರ್ಣ ಮಾಹಿತಿ ಇಲ್ಲಿದೆ.

ಜಗತ್ತಿನಲ್ಲಿ ಭಾರತ ಅತಿಹೆಚ್ಚು ಶಸ್ತ್ರಾಸ್ತ್ರ ಖರೀದಿ ಮಾಡಿರುವುದು ಅಮೆರಿಕ ಬಳಿ. ಹೀಗಾಗಿ ಭಾರತ & ಅಮೆರಿಕ ಮಧ್ಯೆ ಹಲವು ವರ್ಷಗಳ ಹಿಂದೆಯೇ ಒಂದು ಒಪ್ಪಂದವಾಗಿತ್ತು. ಆ ಒಪ್ಪಂದದ ಪ್ರಕಾರ ಶತ್ರು ವಿನಾಶಕ ಅಸ್ತ್ರವನ್ನ ಭಾರತಕ್ಕೆ ನೀಡುವುದಾಗಿ ಅಮೆರಿಕ ಕೂಡ ಹೇಳಿತ್ತು. ಆದ್ರೆ ಹಲವು ಕಾರಣಗಳಿಂದ ಒಪ್ಪಂದ ತುಂಬಾ ನಿಧಾನವಾಗಿ ಶತ್ರುಗಳು ಕೂಡ ಮೆರೆಯುವಂತಾಗಿತ್ತು. ಇದೀಗ ಅದಕ್ಕೆಲ್ಲಾ ತಕ್ಕ ಉತ್ತರ ನೀಡುವ ಕಾಲ ಬಂದಿದೆ. ಭಾರತ ತನ್ನ ಬತ್ತಳಿಕೆಗೆ ಮತ್ತೊಂದು ಭೀಕರ ಅಸ್ತ್ರವನ್ನ ಸೇರಿಸಿಕೊಳ್ಳುತ್ತಿದೆ. MQ-9B ಹೆಸರಿನ ಈ ಮಿಲಿಟರಿ ಡ್ರೋನ್ ಶತ್ರುಗಳ ಎದೆ ನಡುಗಿಸಬಲ್ಲವು (MQ-9B Drone).

PM Modi America visit

ರಕ್ಷಣಾ ಇಲಾಖೆಯ ಗ್ರೀನ್ ಸಿಗ್ನಲ್!

ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಗೂ ಮೊದಲು MQ-9B ಡ್ರೋನ್ ಖರೀದಿ ವಿಚಾರ ಕುತೂಹಲ ಕೆರಳಿಸಿತ್ತು. ಏಕೆಂದರೆ ಅಮೆರಿಕ ನಿರ್ಮಿತ ಪ್ರಿಡೇಟರ್ ಡ್ರೋನ್ಸ್ ಅಗತ್ಯತೆ ನಮ್ಮ ಸೇನೆಗೆ ತುಂಬಾ ಇತ್ತು. ಹೀಗಾಗಿ ಇಂದು ನಡೆದ ಮಹತ್ವದ ಸಭೆಯಲ್ಲಿ ಭಾರತೀಯ ರಕ್ಷಣಾ ಸಚಿವಾಲಯ ಅಮೆರಿಕ ನಿರ್ಮಿತ MQ-9B ಡ್ರೋನ್ ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಬಗ್ಗೆ ರಕ್ಷಣಾ ಇಲಾಖೆ ಮೂಲಗಳು ಮಾಹಿತಿ ನೀಡಿರುವುದಾಗಿ ರಾಯಿಟರ್ಸ್‌ ವರದಿಯನ್ನ ಪ್ರಕಟಿಸಿದೆ. ಇನ್ನೇನು ಮುಂದಿನ ವಾರ ದೊಡ್ಡಣ್ಣ ಅಮೆರಿಕಗೆ ಪ್ರಧಾನಿ ಮೋದಿ ವಿಸಿಟ್ ಕೊಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಹತ್ವದ ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕಿದೆ.

ಡ್ರೋನ್ ಖರೀದಿಗೆ ಮುಂದಿನ ನಿರ್ಧಾರ ಯಾರದ್ದು?

ಇದೀಗ ಅಮೆರಿಕ ನಿರ್ಮಿಸಿರುವ MQ-9B ಡ್ರೋನ್ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಹೀಗಾಗಿ ಮುಂದಿನ ಹಂತದಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದ ಸಚಿವ ಸಂಪುಟ ಡ್ರೋನ್ ಖರೀದಿಗೆ ಒಪ್ಪಿಗೆ ನೀಡಬೇಕು. ನಂತರ ಅಂದ್ರೆ ಮುಂದಿನ ವಾರ ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ, ಬೈಡನ್ ಜೊತೆಗೆ ಮಾತುಕತೆ ನಡೆಸಿದ ನಂತರ ಅಧಿಕೃತವಾಗಿ ಬೈಡನ್ ಮತ್ತು ಪ್ರಧಾನಿ ಮೋದಿ ಡ್ರೋನ್ ಖರೀದಿ ಒಪ್ಪಂದ ಬಗ್ಗೆ ಮಾಹಿತಿ ನೀಡುವ ನಿರೀಕ್ಷೆ ಇದೆ. ಪಿಎಂ ನರೇಂದ್ರ ಮೋದಿ ಜೂನ್ 21ರಿಂದ ಜೂನ್ 24ರ ವರೆಗೆ ಅಮೆರಿಕ ಭೇಟಿಗೆ ತೆರಳಲಿದ್ದಾರೆ.

PM Modi America visit

ಭಾರತಕ್ಕೆ ಏಕೆ ಬೇಕು ಈ ಡ್ರೋನ್?

ನಮ್ಮ ದೇಶದ ಭವಿಷ್ಯಕ್ಕೆ ಮತ್ತು ಶತ್ರುಗಳಿಂದ ರಕ್ಷಣೆಗೆ MQ-9B ಡ್ರೋನ್ ಖರೀದಿ ಅತ್ಯಗತ್ಯ ಎನ್ನಬಹುದು. ಏಕೆಂದರೆ ಪಾಕಿಸ್ತಾನ ಮತ್ತು ಚೀನಾ ಸೇನೆಯಿಂದ ಭಾರತ ಸೇನೆ ಪದೇ ಪದೆ ಗಡಿ ಭದ್ರತಾ ಸವಾಲು ಎದುರಿಸುತ್ತಿದೆ. ಅದರಲ್ಲೂ ಪಾಕಿಸ್ತಾನದ ಗಡಿ ಭಾಗದಲ್ಲಿ ಉಗ್ರರು ಒಳ ನುಸುಳುವುದು, ಕಳ್ಳ ಸಾಗಾಣಿಕೆ ಹಾಗೂ ಗಡಿ ವಿವಾದಗಳಂತಹ ಸಮಸ್ಯೆ ತೀವ್ರವಾಗಿಯೇ ಕಾಡುತ್ತಿದೆ. ಹೀಗಾಗಿ ಇಂತಹ ದೊಡ್ಡ ಸವಾಲಿನ ಕೆಲಸ ನಿರ್ವಹಿಸಲು MQ-9B ಪ್ರಿಡೇಟರ್ ಡ್ರೋನ್‌ಗಳು ಸಹಾಯ ಮಾಡುತ್ತವೆ. ಗಡಿ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟು ಕಾಯುವುದಕ್ಕೆ ಇದರಿಂದ ಸಹಾಯ ಆಗುತ್ತದೆ.

ಸಮುದ್ರ ತೀರಕ್ಕೂ ಅಗತ್ಯ ಡ್ರೋನ್

ಭಾರತ ಭೂ ಗಡಿಯ ಜೊತೆಗೆ ನೆರೆ ರಾಷ್ಟ್ರಗಳ ಜೊತೆ ಜಲ ಗಡಿಯನ್ನೂ ಹೊಂದಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಭಾರತದ ಸಮುದ್ರ ಗಡಿಗಳ ರಕ್ಷಿಸಲು ಹಾಗೂ ಆರ್ಥಿಕ ವಲಯ ಕಾಪಾಡಲು ಡ್ರೋನ್‌ಗಳು ಅತ್ಯಗತ್ಯ. ಏಕೆಂದರೆ ಅಮೆರಿಕದ ಪ್ರಿಡೇಟರ್ ಡ್ರೋನ್‌ ಅತ್ಯಾಧುನಿಕ ಸಮುದ್ರ ವಿಚಕ್ಷಣಾ ಸಾಮರ್ಥ್ಯ ಹೊಂದಿವೆ. ಹೀಗಾಗಿ ಕಳ್ಳ ಸಾಗಾಣಿಕೆ, ರಕ್ಷಣಾ ಕಾರ್ಯಾಚರಣೆಗೆ ಡ್ರೋನ್‌ಗಳು ಸಹಾಯ ಮಾಡಲಿವೆ. ಹೀಗಾಗಿ ಒಟ್ಟು 30 ಡ್ರೋನ್‌ಗಳ ಖರೀದಿಗೆ ಅಮೆರಿಕದ ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಖರೀದಿಯ ವೆಚ್ಚ 3 ಬಿಲಿಯನ್ ಅಂದರೆ ಸುಮಾರು 24 ಸಾವಿರ ಕೋಟಿ ರೂಪಾಯಿ ಆಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+