Get Updates
Get notified of breaking news, exclusive insights, and must-see stories!

Moto E32s Mobile Price: ಕಡಿಮೆ ಬೆಲೆಗೆ ಸಿಗುವ 'ಮೊಟೊ' ಹೊಸ ಸ್ಮಾರ್ಟ್‌ಫೋನ್ ವಿಶೇಷತೆಗಳು?

ಬೆಂಗಳೂರು, ಫೆಬ್ರವರಿ 14: ಮೊಬೈಲ್ ಲೋಕದಲ್ಲಿ ಸದ್ಯ ಭಾರತಾದ್ಯಂತ 5G ಮೇನಿಯಾ ಶುರುವಾಗಿದೆ. ಇದಕ್ಕೆ ಪೂರಕವಾಗಿ ಮೊಟೊರೋಲಾ (Motorola) ಅತೀ ಕಡಿಮೆ ದರದಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಕ್ರಾಂತಿ ಎಬ್ಬಿಸಿದೆ.

ಮೊಟೊರೋಲಾ ಕಂಪನಿಯ 'ಮೊಟೊ ಇ32s' (Motorola Moto E32s) ಮೊಬೈಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಈ 5G ಮೊಬೈಲ್ ಫೋನ್‌ ಕಡಿಮೆ ಬೆಲೆಯಲ್ಲಿ ಬೆಸ್ಟ್ ಫೀಚರ್ ಕೊಡುವ ಮೂಲಕ ಗ್ರಾಹ ಸ್ನೇಹಿಯಾಗುತ್ತಿದೆ. ತನ್ನ ಕಾರ್ಯಕ್ಷಮತೆಯಲ್ಲಿ ರಾಜೀ ಮಾಡಿಕೊಳ್ಳದೇ ಕೈಗೆಟುಕುವಿಕೆಯನ್ನು ಮರು ವ್ಯಾಖ್ಯಾನಿಸಲು ಸಿದ್ಧವಾಗಿದೆ. ಈ ಮೊಬೈಲ್ ಫೋನ್ ಬಗ್ಗೆ ವಿವರವಾದ ಮಾಹಿತಿ ಇಲ್ಲಿ ತಿಳಿಯಿರಿ.

Motorola Moto E32s Mobile Price, Features, Processor, Camera and Battery Capacity details

Moto E32s ವಿಶೇಷತೆಗಳು ಏನು?

ಮೊಟೊ ಇ32s ಮೊಬೈಲ್ ಮಿಡಿಯಾ ಟೆಕ್ Helio G35 ಪ್ರೊಸೆಸರ್ ಹೊಂದಿದೆ. 6.5 ಇಂಚಿನ ಎಚ್‌ಡಿ ಮತ್ತು ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಮೊಬೈಲ್ ಹಿಂದಿನ ಕ್ಯಾಮೆರಾ 16MP, 2MP ಮ್ಯಾಕ್ರೋ ಕ್ಯಾಮೆರಾ ಜತೆಗೆ +2MP ಡೆಪ್ತ್ ಕ್ಯಾಮೆರಾ ಹೊಂದಿರುವುದು ಇದರ ಮತ್ತೊಂದು ವೈಶಿಷ್ಟ್ಯವಾಗಿದೆ. ಮುಂಭಾಗದ ಸೆಲ್ಫಿ ಕ್ಯಾಮೆರಾ 8MP ಇದೆ.

ಈ ಸ್ಮಾರ್ಟ್‌ಫೋನ್‌ ಬ್ಯಾಟರಿ ಬರೋಬ್ಬರಿ 5000mAh ಸಾಮರ್ಥ್ಯ ಹೊಂದಿದ್ದು, 10W ಚಾರ್ಜಿಂಗ್ ಯುಎಸ್‌ಬಿ 'ಸಿ' ಟೈಪ್ ಪಿನ್ ಹೊಂದಿದ್ದು, ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಒಳಗೊಂಡಿದೆ. 5G, ವೈಫೈ, ಬ್ಲೂಟೂತ್ ಕಾರ್ಯವಿಧಾನದ ಆಯ್ಕೆ ಹೊಂದಿದೆ.

ಹೊಸ ಅನುಭವ ನೀಡುವ ಕ್ಯಾಮೆರಾ

ಮೊಟೋ ಇ32s ಪ್ಲಾಸ್ಟಿಕ್ ಬ್ಯಾಕ್ ಹಾಗೂ ಫ್ರೇಮ್‌ನೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ, ಸೌಂದರ್ಯಕ್ಕೆ ಧಕ್ಕೆಯಾಗದಂತೆ ಬಾಳಿಕೆಯನ್ನು ಖಾತ್ರಿಪಡಿಸುತ್ತದೆ. ಇದರ 6.5-ಇಂಚಿನ HD+ LCD ಡಿಸ್ಪ್ಲೇ, 90Hz ರಿಫ್ರೆಶ್ ದರವನ್ನು ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅದರ ಛಾಯಾಗ್ರಹಣದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

Motorola Moto E32s Mobile Price, Features, Processor, Camera and Battery Capacity details

ಮೊಟೊ ಈ ಹೊಸ ಮೊಬೈಲ್ (16MP +2MP+2MP) ಕ್ಯಾಮೆರಾವು ಬಳಕೆದಾರರಿಗೆ ಅತ್ಯುತ್ತಮ ಹಾಗೂ ಬೆರಗುಗೊಳಿಸುವಂಥಹ ಫೋಟೋಗಳನ್ನು ಒದಿಸುತ್ತದೆ. ಮುಖ್ಯ ಕ್ಯಾಮೆರಾವು ವಿವಿಧ ಬೆಳಕಿನ ಪರಿಸ್ಥಿತಿಗಳಲ್ಲಿ ಉತ್ತಮವಾಗಿದೆ. ಮ್ಯಾಕ್ರೋ ಲೆನ್ಸ್ ಕ್ಲೋಸ್-ಅಪ್ ಶಾಟ್‌ಗಳಿಗೆ ಪರಿಪೂರ್ಣ ಆಗಿದೆ. ವೃತ್ತಿಪರತೆಯ ಫಲಿತಾಂಶಗಳು ಹೋಲಿಕೆ ಈ ಕ್ಯಾಮೆರಾದಲ್ಲಿ ಸಿಗಲಿದೆ.

ಅಸಾಧಾರಣ ಬ್ಯಾಟರಿ ಬ್ಯಾಕಪ್

Moto E32s ಮೊಬೈಲ್‌ನಲ್ಲಿ ಅಸಾಧಾರಣ ಬೃಹತ್ ಸಾಮರ್ಥ್ಯದ 5000mAh ಬ್ಯಾಟರಿ ಬ್ಯಾಕಪ್ ಸೌಲಭ್ಯ ಇದೆ. ಇತ್ತೀಚಿನ ಎಲ್ಲ ಮೊಬೈಲ್‌ಗಳಲ್ಲಿ ಇಂತಹ ಸೌಲಭ್ಯ ಇಲ್ಲದಾಗಿದೆ. ಸಿ ಟೈಪ್ 10W ಚಾರ್ಜಿಂಗ್ ನಿಂದ ಮೊಬೈಲ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಅಲ್ಲದೇ ಅತೀ ಹೆಚ್ಚು ಬಳಕೆಗೆ ಯೋಗ್ಯ ಸಾಧನ ಇದಾಗಿದೆ ಎಂದು ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಮಾರ್ಟ್‌ ಫೋನ್ ಬೆಲೆ ರೂ.8,999

ವಿಶಾಲವಾದ 6.5-ಇಂಚಿನ HD+ LCD ಡಿಸ್ಪ್ಲೇ ಇದ್ದು, ಇದು ವೀಕ್ಷಣೆಗೆ ವಿಶೇಷ ಅನುಭವ ನೀಡುವಲ್ಲಿ ಯಶಸ್ವಿಯಾಗುತ್ತದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. ಆರಂಭಿಕ 8,999 ರೂಪಾಯಿಗೆ ಈ ಮೊಟೊ ಇ32s ಲಭ್ಯವಿದೆ. ಇಷ್ಟು ಕೈಗೆಟುಕುವ ದರದಲ್ಲಿ ಸ್ಮಾರ್ಟ್ ಫೋನ್ ಲಭ್ಯವಿರುವ ಕಾರಣ ಇದು ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸುತ್ತಿದೆ.

ಈ ಮೊಟೊ ಮೊಬೈಲ್ ಫೋಟೊ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ನಲ್ಲಿ ವಿಶೇಷ ರಿಯಾಯಿತಿಗಳಲ್ಲಿ ಲಭ್ಯವಿದೆ. ಅಲ್ಲದೇ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವವ ಗ್ರಾಹಕರಿಗೆ ₹1000 ಹಣ ರಿಯಾಯಿತಿಯಡಿ ಉಳಿತಾಯವಗಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+