15 ಮಂದಿಯಿಂದ ಅತ್ಯಾಚಾರಕ್ಕೆ ಯತ್ನ, ರೈಲಿನಿಂದ ಜಿಗಿದ ತಾಯಿ-ಮಗಳು

Posted By:
Subscribe to Oneindia Kannada

ಕರುಳು ಇರಿಯುವಂಥ ಘಟನೆಯಿದು. ನಡೆದಿರುವುದು ಹೌರಾ-ಜೋಧ್ ಪುರ್ ಎಕ್ಸ್ ಪ್ರೆಸ್ ರೈಲಿನಲ್ಲಿ. ಗುಂಪಾಗಿದ್ದ ಗಂಡಸರು 15 ವರ್ಷದ ಹುಡುಗಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಆ ಹುಡುಗಿಯ 40 ವರ್ಷದ ತಾಯಿಯೂ ಸೇರಿ ರೈಲಿನಿಂದ ಹೊರ ಜಿಗಿದಿದ್ದಾರೆ. ಆ ತಾಯಿ- ಮಗಳು ಕೋಲ್ಕತ್ತಾದಿಂದ ದೆಹಲಿಗೆ ತೆರಳುತ್ತಿದ್ದರು.

ಜನನಿಬಿಡ ರಸ್ತೆಯಲ್ಲಿ ಅತ್ಯಾಚಾರ, ವಿಡಿಯೋ ಮಾಡಿದರೇ ವಿನಾ ರಕ್ಷಿಸಲಿಲ್ಲ

ಹದಿನೈದು ವರ್ಷದ ಬಾಲಕಿಯನ್ನು ರೈಲಿನ ಶೌಚಾಲಯಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಚಂದಾರಿ ಹಾಗೂ ಕಾನ್ಪುರ ರೈಲು ನಿಲ್ದಾಣದ ಮಧ್ಯ ಜಾಗದಲ್ಲಿ ತಾಯಿ-ಮಗಳು ರೈಲಿನಿಂದ ಜಿಗಿದಿದ್ದಾರೆ. ಆ ನಂತರ ಎರಡು ಗಂಟೆಗಳ ಕಾಲ ಅವರಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಪ್ರಜ್ಞೆ ಬಂದ ನಂತರ ಚಂದಾರಿ ರೈಲು ನಿಲ್ದಾಣಕ್ಕೆ ಇಬ್ಬರೂ ನಡೆದುಕೊಂಡು ಹೋಗಿದ್ದಾರೆ.

Mother, daughter jump off train after 10-15 men try to rape girl

ಅಲ್ಲಿ ಜನರು ಆಂಬ್ಯುಲೆನ್ಸ್ ಗೆ ಕರೆ ಮಾಡಿ, ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಮಹಿಳೆಯ ಪತಿ ಖಾಸಗಿ ಸಂಸ್ಥೆಯ ಉದ್ಯೋಗಿ, ಮಗಳು ಕೋಲ್ಕತ್ತಾದಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿನಿ. "ಹೌರಾ ನಿಲ್ದಾಣದಿಂದ ರೈಲು ಹೊರಟ ಮೇಲೆ ಹತ್ತು-ಹದಿನೈದು ಜನರಿದ್ದ ಗುಂಪು ಮಗಳನ್ನು ಚುಡಾಯಿಸಲು ಆರಂಭಿಸಿದರು" ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪತಿ, ಮಗುವಿನೆದುರೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ!

ಗುಂಪು ಚುಡಾಯಿಸುತ್ತಿದೆ ಎಂದು ಅಲಹಾಬಾದ್ ಹತ್ತಿರ ಹಾಗೂ ಅಲಹಾಬಾದ್ ನಲ್ಲಿ ಎರಡು ಬಾರಿ ದೂರು ನೀಡಿದರೂ ಯಾರೂ ಗಮನ ಹರಿಸಲಿಲ್ಲ ಎಂದು ಆಕೆ ಅಲವತ್ತುಕೊಂಡಿದ್ದಾರೆ. "ಕಾನ್ ಸ್ಟೇಬಲ್ ಗಳು ಜತೆಗೆ ಬಂದು ಮೂವರನ್ನು ವಶಕ್ಕೆ ಪಡೆದರು. ಅವರಿಗೆ ಬಾರಿಸಿ, ಜತೆಗೆ ಕರೆದೊಯ್ದರು" ಎಂದು ಆಸ್ಪತ್ರೆಯಲ್ಲಿ ಆಕೆ ಹೇಳಿದ್ದಾರೆ.

ದೂರು ದಾಖಲಿಸಿಕೊಂಡಿದ್ದು, ತಪ್ಪಿತಸ್ಥರನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 40-year-old woman and her 15-year-old daughter jumped off a running train after a group of men attempted to rape the girl on board Howrah-Jodhpur Express.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ