ಕೊರೆವ ಚಳಿಯ ಸಿಯಾಚಿನ್‌ನಲ್ಲಿ ಸೈನಿಕರ ಮತ್ತೊಂದು ಸಾಹಸ

Subscribe to Oneindia Kannada

ನವದೆಹಲಿ, ಮಾರ್ಚ್, 03: ಹಿಮಪಾತಕ್ಕೆ 10 ಸೈನಿಕರನ್ನು ಬಲಿಪಡೆದ ಸಿಯಾಚಿನ್ ಮತ್ತೆ ಸುದ್ದಿ ಮಾಡಿದೆ. ಈ ಬಾರಿ ಸೈನಿಕರ ಮತ್ತೊಂದು ಸಾಹಸಕ್ಕೆ ಸಿಯಾಚಿನ್ ಸಾಕ್ಷಿಯಾಗಿದೆ.

130 ಅಡಿ ಆಳದ ಹಿಮಕಂದಕದಲ್ಲಿ ಬಿದ್ದಿದ್ದ ಕೂಲಿ ಕಾರ್ಮಿಕರ ಶವವನ್ನು ಸೈನಿಕರು ಮೇಲೆತ್ತಿದ್ದಾರೆ. ಕಂದಕಕ್ಕೆ ಬಿದ್ದು ಮೃತಪಟ್ಟಿದ್ದ ಕೂಲಿ ಕಾರ್ಮಿಕ ತುಕ್‌ಜೇ ಗ್ಯಾಸ್ಕೆಟ್‌ ಎಂಬುವರ ಶವವನ್ನು ಸೈನಿಕರು ಮೇಲೆತ್ತಿದ್ದಾರೆ.[ಹಿಮದಡಿ ಸಿಕ್ಕಿ ಬದುಕಿ ಬಂದಿದ್ದ ಹನುಮಂತಪ್ಪ ಕೊಪ್ಪದ್]

indian army

ಸೈನಿಕರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದ್ದ ತುಕ್‌ಜೇ ಗ್ಯಾಸ್ಕೆಟ್‌ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದರು. ಮೈನಸ್ 45 ಡಿಗ್ರಿಯಲ್ಲಿ ಕೆಲಸ ಮಾಡಿದ ಸೈನಿಕರು ಶವವನ್ನು ಪರ್ತಾಪುರ್ ಹತ್ತಿರದ ಹುಂದರ್ ಗೆ ತಂದಿದ್ದು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ತುಕ್ ಜೇ ಫೆಬ್ರವರಿ 27ರಂದು ಆಕಸ್ಮಿಕವಾಗಿ ಜಾರಿ ಬಿದ್ದಿದ್ದರು. ವಿಷಯ ಗೊತ್ತಾದ ಕೂಡಲೇ ಸೇನೆಯ ರಕ್ಷಣಾ ವಿಶೇಷ ತಂಡ ಹಗಲಿರುಳು ರಕ್ಷಣಾ ಕಾರ್ಯ ಆರಂಭಿಸಿತು. ದಟ್ಟವಾದ ಹಿಮವನ್ನು ಕಡಿಯುತ್ತಾ 130 ಅಡಿ ಆಳದವರೆಗೆ ಹೋದಾಗ ಅಲ್ಲಿ ತುಕ್ ಜೇ ಶವ ದೊರಕಿತು.[ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ]

ಸಿಯಾಚಿನ್‌ನಂಥ ಪ್ರದೇಶದಲ್ಲಿ ಸರಕು ಸಾಗಿಸುವುದು ಸಾಮಾನ್ಯ ವಿಷಯವಲ್ಲ. ಆತನನ್ನು ನಾವು ನಮ್ಮಲ್ಲಿಯೇ ಒಬ್ಬ ಎಂದು ಭಾವಿಸಿಕೊಂಡಿದ್ದೇವು. ಈ ಸಾವು ನಿಜಕ್ಕೂ ನೋವು ತಂದಿದೆ. ಅವರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವು ನೀಡುತ್ತೇವೆ ಸೇನಾ ಮುಖ್ಯಸ್ಥ ಜ.ದಲ್ಬೀರ್ ಸಿಂಗ್‌ ಸುಹಾಗ್‌ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After five days of massive search operations, the mortal remains of a civilian porter Thukjay Gyasket (40) was recovered from a crevasse in Siachen on Wednesday. Indian Army officials said that Gyasket had slipped and fell into a deep narrow crevasse while ferrying stores between forward Army posts in Northern Glacier area on February 27.
Please Wait while comments are loading...