ತಿಂಗಳಿಗೆ ₹1.5 ಲಕ್ಷ ಗಳಿಸುತ್ತಿದ್ದೀರಾ? ಹಾಗಾದ್ರೆ ಈ ಮಾತು ಒಮ್ಮೆ ಕೇಳಿ; ಹಣದ ಹಿಂದೆ ಓಡುವವರಿಗೆ ಎಚ್ಚರಿಕೆ!

ನವದೆಹಲಿ: ಇಂದಿನ ಕಾಲದಲ್ಲಿ ಹೆಚ್ಚಿನ ಸಂಬಳ ಪಡೆಯಬೇಕು, ವರ್ಷದಿಂದ ವರ್ಷಕ್ಕೆ ವೇತನ ಹೆಚ್ಚಿಸಿಕೊಳ್ಳಬೇಕು, ದೊಡ್ಡ ಪ್ಯಾಕೇಜ್‌ ಪಡೆಯಬೇಕು ಎಂಬುದು ಬಹುತೇಕ ಉದ್ಯೋಗಿಗಳ ಕನಸು. ಉತ್ತಮ ಸಂಬಳ ಎಂದರೆ ಉತ್ತಮ ಜೀವನ ಎಂಬ ನಂಬಿಕೆಯೂ ಇದೆ. ಆದರೆ, ತಿಂಗಳಿಗೆ ₹1.5 ಲಕ್ಷದಿಂದ ₹2 ಲಕ್ಷದವರೆಗೆ ಆದಾಯ ಬಂದ ಬಳಿಕವೂ ನಿರಂತರವಾಗಿ ಹೆಚ್ಚಿನ ಸಂಬಳದ ಹಿಂದೆ ಓಡುವುದು ನಿಜವಾಗಿಯೂ ಅಗತ್ಯವೇ? ಇದೇ ಪ್ರಶ್ನೆಯನ್ನು ಮುಂದಿಟ್ಟಿರುವ ವ್ಯಕ್ತಿಯೊಬ್ಬರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ನಗರ ಪ್ರದೇಶದಲ್ಲಿ ವಾಸಿಸುವ ವೃತ್ತಿಪರರಿಗೆ ತಿಂಗಳಿಗೆ ₹1.5 ಲಕ್ಷದಿಂದ ₹2 ಲಕ್ಷದವರೆಗೆ ಸಂಬಳ ಸಿಕ್ಕರೆ, ಅದನ್ನು ಒಂದು ಉತ್ತಮ ಆರ್ಥಿಕ ಗುರಿ ಅಥವಾ ಬೆಂಚ್‌ಮಾರ್ಕ್‌ ಎಂದು ಪರಿಗಣಿಸಬಹುದು ಎಂದು ಮೋಹಿತ್‌ ತಲ್ರೇಜಾ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ. ಈ ಮಟ್ಟದ ಆದಾಯವು ಉತ್ತಮ ಕುಟುಂಬ ಜೀವನ ಹಾಗೂ ಆರಾಮದಾಯಕ ಜೀವನಶೈಲಿಗೆ ಸಾಕಾಗಬಹುದು ಎಂದು ಅವರು ಹೇಳಿದ್ದಾರೆ.

Salary 1 5 2 Lakh Monthly Salary Is Enough for a Comfortable Life in Indian Cities Man Says Chasing Higher Pay Is a Trap

'₹1.5-2 ಲಕ್ಷ ಮಾಸಿಕ ಆದಾಯ ಗುರಿಯಾಗಿರಲಿ'

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮೋಹಿತ್‌ ತಲ್ರೇಜಾ ಅವರು ಸಂಬಳ, ವೃತ್ತಿಜೀವನದ ಬೆಳವಣಿಗೆ ಮತ್ತು ವೈಯಕ್ತಿಕ ಸಂತೃಪ್ತಿಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ತಿಂಗಳಿಗೆ ₹1.5 ಲಕ್ಷದಿಂದ ₹2 ಲಕ್ಷದವರೆಗೆ ಸಂಪಾದಿಸುವುದು ಒಂದು ಪ್ರಮುಖ ಗುರಿಯಾಗಿರಬೇಕು ಎಂದು ಅವರು ಹೇಳಿದ್ದಾರೆ. ಈ ಗುರಿಯನ್ನು ಯಾವ ವಯಸ್ಸಿನಲ್ಲಿ ತಲುಪಬೇಕು ಎಂಬುದನ್ನು ಪ್ರತಿಯೊಬ್ಬರೂ ತಮ್ಮ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಬಹುದು. ಆದರೆ ನಗರ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಈ ಮಟ್ಟದ ಆದಾಯವು ಕುಟುಂಬವನ್ನು ಉತ್ತಮವಾಗಿ ನಿರ್ವಹಿಸಲು ಹಾಗೂ ಆರಾಮದಾಯಕ ಜೀವನ ನಡೆಸಲು ಸಾಕಾಗಬಹುದು ಎಂದು ತಿಳಿಸಿದ್ದಾರೆ.

ಅವರ ಪ್ರಕಾರ, ಒಂದು ನಿರ್ದಿಷ್ಟ ಆದಾಯದ ಮಟ್ಟವನ್ನು ತಲುಪಿದ ನಂತರವೂ ನಿರಂತರವಾಗಿ ವೇತನ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಅದರ ಬೆಲೆ ಬೇರೆ ರೂಪದಲ್ಲಿ ಕಟ್ಟಬೇಕಾಗಬಹುದು.

ಹೆಚ್ಚು ಸಂಬಳಕ್ಕಾಗಿ ಏನು ಕಳೆದುಕೊಳ್ಳುತ್ತಿದ್ದೀರಿ?

ಹೆಚ್ಚಿನ ಸಂಬಳ ಪಡೆಯಲು ಮೇಲ್ಮಟ್ಟದ ಹುದ್ದೆ, ದೊಡ್ಡ ಕಂಪನಿ, ಹೆಚ್ಚಿನ ಜವಾಬ್ದಾರಿ ಮತ್ತು ಹೆಚ್ಚುವರಿ ಕೆಲಸದ ಒತ್ತಡವನ್ನು ಸ್ವೀಕರಿಸಬೇಕಾಗುತ್ತದೆ. ಇದರಿಂದ ಕೆಲಸದ ಸಮಯ ಹೆಚ್ಚಾಗಬಹುದು. ಪರಿಣಾಮವಾಗಿ ಆರೋಗ್ಯ, ಕುಟುಂಬ, ಸ್ನೇಹಿತರು, ವೈಯಕ್ತಿಕ ಆಸಕ್ತಿಗಳು ಹಾಗೂ ಸ್ವಂತ ಸಮಯಕ್ಕೆ ಕಡಿವಾಣ ಬೀಳುವ ಸಾಧ್ಯತೆಯಿದೆ ಎಂದು ತಲ್ರೇಜಾ ಹೇಳಿದ್ದಾರೆ.

ಅವರ ಪ್ರಕಾರ, ನಿರ್ದಿಷ್ಟ ಆದಾಯದ ಗುರಿಯನ್ನು ಸಾಧ್ಯವಾದಷ್ಟು ಬೇಗ ತಲುಪಿದ ಬಳಿಕ ವೃತ್ತಿಜೀವನವನ್ನು ಸಹಜ ವೇಗದಲ್ಲಿ ಮುಂದುವರಿಸಿಕೊಂಡು ಹೋಗಬಹುದು. ಅದೇ ಸಮಯದಲ್ಲಿ ಆರೋಗ್ಯ, ಕುಟುಂಬ ಮತ್ತು ಹೊಸ ವಿಷಯಗಳನ್ನು ಕಲಿಯುವುದಕ್ಕೂ ಹೆಚ್ಚಿನ ಗಮನ ನೀಡಬೇಕು.

'ತುಂಬಾ ಹೆಚ್ಚಿನ ಸಂಬಳ ಒಂದು ಬಲೆ'

ನಿರಂತರವಾಗಿ ಹೆಚ್ಚಿನ ಸಂಬಳದ ಹಿಂದೆ ಓಡುವುದನ್ನು ಅವರು 'ಟ್ರ್ಯಾಪ್‌' ಎಂದು ಕರೆದಿದ್ದಾರೆ. ಹಣ ಗಳಿಸುವುದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಸಮಯವನ್ನೇ ನಿರಂತರವಾಗಿ ಮಾರಾಟ ಮಾಡುತ್ತಾ ಹೋಗುವುದು ದೀರ್ಘಾವಧಿಯಲ್ಲಿ ನಿಜವಾದ ಸಂತೃಪ್ತಿಯನ್ನು ನೀಡುವುದಿಲ್ಲ ಎಂಬುದು ಅವರ ಅಭಿಪ್ರಾಯ.

ಉದ್ಯೋಗದ ಮೂಲಕ ಆದಾಯ ಗಳಿಸುವುದರ ಜೊತೆಗೆ ಸ್ವಂತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು, ಹೊಸ ವಿಷಯಗಳನ್ನು ಕಲಿಯುವುದು ಅಥವಾ ಹೆಚ್ಚುವರಿ ಆದಾಯದ ಮೂಲವನ್ನು ಸೃಷ್ಟಿಸುವುದು ಹೆಚ್ಚು ತೃಪ್ತಿ ನೀಡಬಹುದು ಎಂದು ಅವರು ಹೇಳಿದ್ದಾರೆ.

ಅಂದರೆ, ಜೀವನದ ಸಂಪೂರ್ಣ ಗುರಿಯನ್ನೇ ವೇತನ ಹೆಚ್ಚಳವನ್ನಾಗಿ ಮಾಡಿಕೊಳ್ಳುವ ಬದಲು, ಒಂದು ಹಂತದ ನಂತರ 'ನನಗೆ ಎಷ್ಟು ಹಣ ಸಾಕು?' ಎಂಬ ಪ್ರಶ್ನೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಉತ್ತರ ಕಂಡುಕೊಳ್ಳಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ

ಮೋಹಿತ್‌ ತಲ್ರೇಜಾ ಅವರ ಈ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಹುಟ್ಟುಹಾಕಿದೆ. ಕೆಲವರು ಅವರ ಮಾತು ಪ್ರಾಯೋಗಿಕವಾಗಿದೆ ಎಂದು ಬೆಂಬಲಿಸಿದರೆ, ಇನ್ನೂ ಕೆಲವರು ಹೆಚ್ಚಿನ ಆದಾಯದ ಅಗತ್ಯವನ್ನು ನೆನಪಿಸಿದ್ದಾರೆ.

ಇದು ಅರ್ಥಪೂರ್ಣವಾಗಿದೆ, ಹೆಚ್ಚಿನ ವೇತನ ಎಂದರೆ ಹೆಚ್ಚಿನ ಒತ್ತಡ, ಕುಟುಂಬದೊಂದಿಗೆ ಕಳೆಯುವ ಸಮಯವೂ ಮುಖ್ಯ ಮತ್ತು ಈ ದೃಷ್ಟಿಕೋನ ವಿಭಿನ್ನವಾಗಿದೆ ಎಂಬಂತಹ ಪ್ರತಿಕ್ರಿಯೆಗಳು ಪೋಸ್ಟ್‌ಗೆ ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+